Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 25:26 - ಕನ್ನಡ ಸತ್ಯವೇದವು J.V. (BSI)

26 ಮೇದ್ಯರ ಎಲ್ಲಾ ಅರಸರು, ದೂರವೇನು ಸಮೀಪವೇನು ಅಂತು ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು, ಇವರೆಲ್ಲರಿಗೂ ಕುಡಿಸು; ಇವರು ಕುಡಿದ ಮೇಲೆ ಶೇಷಕಿನ ಅರಸನೂ ಕುಡಿಯಲಿ [ಎಂಬದೇ ನನಗಾದ ಅಪ್ಪಣೆ].

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ದೂರ ಮತ್ತು ಸಮೀಪವಿರುವ ಉತ್ತರದೇಶದ ಎಲ್ಲಾ ಅರಸರು, ಭೂಲೋಕದಲ್ಲಿರುವ ಸಕಲರಾಜ್ಯಗಳವರು ಇವರೆಲ್ಲರಿಗೂ ಕುಡಿಸು; ಇವರು ಕುಡಿದ ಮೇಲೆ ಶೇಷಕಿನ ಅರಸನೂ ಕುಡಿಯಲಿ ಎಂಬುದೇ ನನಗಾದ ಅಪ್ಪಣೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ದೂರ - ಹತ್ತಿರವಿರುವ ಉತ್ತರ ನಾಡಿನ ಎಲ್ಲ ಅರಸರು, ಲೋಕದ ಸಕಲ ರಾಜ್ಯಗಳು, ಇವರೆಲ್ಲರು ಕುಡಿದ ಮೇಲೆ ಬಾಬಿಲೋನಿನ ಅರಸನು ಕುಡಿಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಉತ್ತರದಲ್ಲಿ ಸಮೀಪದಲ್ಲಿದ್ದ ಮತ್ತು ದೂರದಲ್ಲಿದ್ದ ಎಲ್ಲಾ ರಾಜರನ್ನು ಈ ಪಾತ್ರೆಯಿಂದ ಒಬ್ಬರಾದ ಮೇಲೊಬ್ಬರು ಕುಡಿಯುವಂತೆ ಮಾಡಿದೆನು. ನಾನು ಭೂಮಿಯ ಮೇಲಿದ್ದ ಎಲ್ಲಾ ರಾಜ್ಯಗಳು ಯೆಹೋವನ ಕೋಪದ ಪಾತ್ರೆಯಿಂದ ಕುಡಿಯುವಂತೆ ಮಾಡಿದೆನು. ಆದರೆ ಬಾಬಿಲೋನಿನ ರಾಜನು ಎಲ್ಲಾ ದೇಶಗಳವರು ಕುಡಿದ ತರುವಾಯ ಕುಡಿಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಹತ್ತಿರದಲ್ಲಿಯೂ, ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿರುವ ಉತ್ತರ ದಿಕ್ಕಿನ ಅರಸರೆಲ್ಲರಿಗೂ, ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯಗಳಿಗೂ ಕುಡಿಸಿದೆನು. ಶೇಷಕಿನ ಅರಸನು ಅವರ ತರುವಾಯ ಕುಡಿಯುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 25:26
12 ತಿಳಿವುಗಳ ಹೋಲಿಕೆ  

ಆಹಾ, ಶೇಷಕ್ ಶತ್ರುವಶವಾಯಿತು, ಲೋಕಪ್ರಸಿದ್ಧವಾದ ಪಟ್ಟಣವು ಹಿಡಿಯಲ್ಪಟ್ಟಿದೆ,


ಇಗೋ, ನಾನು ಬಡಗಣ ಜನಾಂಗಗಳನ್ನೆಲ್ಲಾ ಕರೆಯಿಸಿ ಬಾಬೆಲಿನ ಅರಸನೂ ನನ್ನ ಸೇವಕನೂ ಆದ ನೆಬೂಕದ್ನೆಚ್ಚರನನ್ನು ಬರಮಾಡಿ ಇವರೆಲ್ಲರನ್ನು ಈ ದೇಶದ ಮೇಲೂ ಇದರ ನಿವಾಸಿಗಳ ಮೇಲೂ ಸುತ್ತಲಿನ ಸಕಲ ಜನಾಂಗಗಳ ಮೇಲೂ ಬೀಳಿಸಿ ಅವುಗಳನ್ನು ತುಂಬಾ ಹಾಳುಗೈದು ಬೆರಗಿನ ಸಿಳ್ಳಿಗೆ ಗುರಿಪಡಿಸಿ ನಿತ್ಯನಾಶನಕ್ಕೆ ಈಡುಮಾಡುವೆನು.


ನೀನು ಮಾನವನ್ನಲ್ಲ, ಅವಮಾನವನ್ನು ತುಂಬಾ ಅನುಭವಿಸುವಿ; ನೀನೂ ಕುಡಿ, ನಿನ್ನ ಸುನ್ನತಿಹೀನತೆಯನ್ನು ಹೊರಪಡಿಸಿಕೋ; ಯೆಹೋವನ ಬಲಗೈಯಲ್ಲಿನ ಪಾತ್ರೆಯು ನಿನ್ನ ಪಾಲಿಗೂ ಬರುವದು; ಕೇವಲ ಅವಮಾನವು ನಿನ್ನ ಮಾನವನ್ನು ಮುತ್ತಿಬಿಡುವದು.


ಉತ್ತರದೇಶದ ಸಕಲಪ್ರಭುಗಳೂ ಸಮಸ್ತ ಚೀದೋನ್ಯರೂ ಸಂಹೃತರೊಂದಿಗೆ ಇಳಿದು ಅಲ್ಲಿದ್ದಾರೆ; ಭಯಂಕರವಾಗಿದ್ದ ತಮ್ಮ ಶೌರ್ಯಕ್ಕೆ ನಾಚಿಕೆಗೊಂಡು ಖಡ್ಗಹತರ ಮಧ್ಯೆ ಸುನ್ನತಿಹೀನರಾಗಿ ಬಿದ್ದು ಪ್ರೇತಗಳ ನಡುವೆ ಅವಮಾನಪಟ್ಟಿದ್ದಾರೆ.


ಎಪ್ಪತ್ತು ವರುಷಗಳ ತರುವಾಯ ನಾನು ಬಾಬೆಲಿನ ಅರಸನನ್ನೂ ಕಸ್ದೀಯರ ದೇಶವನ್ನೂ ಆ ಜನಾಂಗದವರನ್ನೂ ಅವರ ದ್ರೋಹಕ್ಕಾಗಿ ದಂಡಿಸಿ ಆ ದೇಶವನ್ನು ನಿತ್ಯನಾಶನಕ್ಕೆ ಗುರಿಮಾಡುವೆನು. ಇದು ಯೆಹೋವನ ನುಡಿ.


ನಿನ್ನನ್ನು ಬಾಧಿಸುವವರ ಕೈಗೆ ಅದನ್ನು ಕೊಡುವೆನು; ಅವರು ನಿನಗೆ - ನೀನು ಬಿದ್ದುಕೋ, ನಿನ್ನನ್ನು ತುಳಿಯುತ್ತಾ ಹೋಗುವೆವು ಎಂದು ಹೇಳಲು ನೀನು ಹಾದುಹೋಗುವ ಅವರಿಗೆ ನಿನ್ನ ಬೆನ್ನನ್ನು ನೆಲವನ್ನಾಗಿಯೂ ಬೀದಿಯ ಮಣ್ಣನ್ನಾಗಿಯೂ ಮಾಡಿಕೊಂಡಿಯಲ್ಲಾ.


ನಾವು ನಿಂದೆಯನ್ನು ಕೇಳಿ ನಾಚಿಕೆಗೊಂಡೆವು, ಯೆಹೋವನ ಆಲಯದ ಪವಿತ್ರಸ್ಥಾನಗಳನ್ನು ಮ್ಲೇಚ್ಫರು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಮುಚ್ಚಿಕೊಂಡಿದೆ [ಎಂಬದಾಗಿ ಅಂದುಕೊಳ್ಳುತ್ತೀರೋ?]


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು