ಯೆರೆಮೀಯ 24:5 - ಕನ್ನಡ ಸತ್ಯವೇದವು J.V. (BSI)5 ಇಸ್ರಾಯೇಲ್ಯರ ದೇವರಾದ ಯೆಹೋವನು ಇಂತೆನ್ನುತ್ತಾನೆ - ನಾನು ಈ ಸ್ಥಳದೊಳಗಿಂದ ಕಸ್ದೀಯರ ದೇಶಕ್ಕೆ ಕಳುಹಿಸಿಬಿಟ್ಟ ಸೆರೆಯವರಾದ ಯೆಹೂದ್ಯರನ್ನು ಈ ಉತ್ತಮವಾದ ಅಂಜೂರದ ಫಲಗಳಂತೆ ಲಕ್ಷಿಸಿ ಅವರಿಗೆ ಮೇಲನ್ನುಂಟುಮಾಡುವೆನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 “ಇಸ್ರಾಯೇಲ ದೇವರಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಸ್ಥಳದೊಳಗಿಂದ ಕಸ್ದೀಯರ ದೇಶಕ್ಕೆ ಕಳುಹಿಸಿಬಿಟ್ಟ ಸೆರೆಯವರಾದ ಯೆಹೂದ್ಯರನ್ನು ಈ ಉತ್ತಮವಾದ ಅಂಜೂರದ ಫಲಗಳಂತೆ ಲಕ್ಷಿಸಿ, ಅವರಿಗೆ ಮೇಲನ್ನುಂಟುಮಾಡುವೆನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 “ಇಸ್ರಯೇಲರ ದೇವರಾದ ಸರ್ವೇಶ್ವರ ಹೇಳುವುದನ್ನು ಕೇಳು - ನಾನು ಈ ಸ್ಥಳದಿಂದ ಬಾಬಿಲೋನಿಗೆ ಕಳಿಸಿಬಿಟ್ಟು ಅಲ್ಲಿ ಸೆರೆಯಾಳುಗಳಾಗಿರುವ ಯೆಹೂದ್ಯರು ಈ ಉತ್ತಮವಾದ ಅಂಜೂರದ ಹಣ್ಣುಗಳಂಥವರು. ಅವರನ್ನು ಆದರದಿಂದ ನೋಡಿ ಅವರಿಗೆ ಒಳ್ಳೆಯದನ್ನೇ ಮಾಡುವೆನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನ್ನು ಬಾಬಿಲೋನಿಗೆ ತಂದನು. ಆ ಜನರು ಈ ಒಳ್ಳೆಯ ಅಂಜೂರದಂತಿರುವರು. ಆ ಜನರಿಗೆ ನಾನು ದಯೆತೋರುವೆನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 “ಇಸ್ರಾಯೇಲರ ದೇವರಾದ ಯೆಹೋವ ದೇವರು ಹೇಳುವುದನ್ನು ಕೇಳು, ‘ನಾನು ಈ ಸ್ಥಳದಿಂದ ಬಾಬಿಲೋನಿಗೆ ಕಳುಹಿಸಿಬಿಟ್ಟು, ಅಲ್ಲಿ ಸೆರೆಯಾಳುಗಳಾಗಿರುವ ಯೆಹೂದ್ಯರು ಈ ಉತ್ತಮವಾದ ಅಂಜೂರದ ಹಣ್ಣುಗಳಂತವರು. ನಾನು ಅವರನ್ನು ಒಳ್ಳೆಯವರಂತೆ ಪರಿಗಣಿಸುತ್ತೇನೆ. ಅಧ್ಯಾಯವನ್ನು ನೋಡಿ |