Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 23:30 - ಕನ್ನಡ ಸತ್ಯವೇದವು J.V. (BSI)

30 ಆಹಾ, ನನ್ನ ಮಾತುಗಳನ್ನು ತಮ್ಮ ತಮ್ಮ ನೆರೆಯವರಿಂದ ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧನಾಗಿದ್ದೇನೆ. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಆಹಾ, ನನ್ನ ಮಾತುಗಳನ್ನು ತಮ್ಮ ತಮ್ಮ ನೆರೆಯವರಿಂದ ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧನಾಗಿದ್ದೇನೆ. ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ನನ್ನ ವಾಕ್ಯಗಳನ್ನು ಒಬ್ಬರಿಂದೊಬ್ಬರು ಕದ್ದುಕೊಳ್ಳುವ ಪ್ರವಾದಿಗಳಿಗೆ ನಾನು ವಿರುದ್ಧವಾಗಿ ಇದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 “ನಾನು ಸುಳ್ಳುಪ್ರವಾದಿಗಳ ವಿರೋಧಿಯಾಗಿದ್ದೇನೆ.” ಇದು ಯೆಹೋವನ ನುಡಿ. “ಈ ಪ್ರವಾದಿಗಳು ನನ್ನ ಪದಗಳನ್ನು ಒಬ್ಬರಿಂದೊಬ್ಬರು ಕದಿಯುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಆದ್ದರಿಂದ ಇಗೋ, “ತನ್ನ ನೆರೆಯವನಿಂದ ನನ್ನ ವಾಕ್ಯಗಳನ್ನು ಕದ್ದುಕೊಳ್ಳುವ ಪ್ರತಿಯೊಬ್ಬ ಪ್ರವಾದಿಗೆ ನಾನು ವಿರೋಧವಾಗಿದ್ದೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 23:30
14 ತಿಳಿವುಗಳ ಹೋಲಿಕೆ  

ಆದರೆ ಯಾವ ಪ್ರವಾದಿ ನನ್ನಿಂದ ಅಧಿಕಾರಹೊಂದದೆ ನಾನು ಪ್ರೇರಣೆಮಾಡದ ಮಾತುಗಳನ್ನು ಯೆಹೋವನ ಮಾತೆಂದು ಹೇಳಿ ಜನರಿಗೆ ತಿಳಿಸುವನೋ ಇಲ್ಲವೆ ಇತರ ದೇವರುಗಳ ಹೆಸರಿನಲ್ಲಿ ಮಾತಾಡುವನೋ ಅವನಿಗೆ ಮರಣಶಿಕ್ಷೆಯಾಗಬೇಕೆಂದು ಹೇಳಿದನು.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನೀವು ವ್ಯರ್ಥವಾದದ್ದನ್ನು ನುಡಿದು ಸುಳ್ಳಾದದ್ದನ್ನು ಕಂಡದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ, ಇದು ಕರ್ತನಾದ ಯೆಹೋವನೆಂಬ ನನ್ನ ನುಡಿ.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವದಕ್ಕೆ ಸಾಧನವಾದ ನಿಮ್ಮ ತಾಯಿತಿಗಳಿಗೆ ನಾನು ಹೇಸಿ ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತುಹಾಕುವೆನು; ನೀವು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವ ಪ್ರಾಣಗಳನ್ನು ನಾನು ಬಿಡಿಸಿಬಿಡುವೆನು.


ಕೆಡುಕರಿಗೋ ಯೆಹೋವನು ಕೋಪದ ಮುಖವುಳ್ಳವನಾಗಿರುವನು; ಲೋಕದಲ್ಲಿ ಅವರ ನೆನಪೇ ಉಳಿಯದಂತೆ ತೆಗೆದುಹಾಕುವನು.


ಅವರ ಮೇಲೆ ಕೋಪದೃಷ್ಟಿಯನ್ನಿಡುವೆನು; ಅವರು ಬೆಂಕಿಯೊಳಗಿಂದ ತಪ್ಪಿಸಿಕೊಂಡರೂ ಬೆಂಕಿಯು ಅವರನ್ನು ನುಂಗಿಬಿಡುವದು; ನಾನು ಅವರ ಮೇಲೆ ಕೋಪದೃಷ್ಟಿಯನ್ನಿಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ಯಾಕಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಕೆಡುಕರಿಗೋ ಕರ್ತನು ಕೋಪದ ಮುಖವುಳ್ಳವನಾಗಿರುತ್ತಾನೆ ಎಂದು ಬರೆದದೆ.


ನಾನು ನಿಮ್ಮನ್ನು ಈ ಸ್ಥಳದಲ್ಲಿ ದಂಡಿಸುವೆನೆಂಬದಕ್ಕೆ ಒಂದು ಗುರುತು ಕಾಣುವದು; ನನ್ನ ಮಾತುಗಳು ಈಡೇರಿ ನಿಮಗೆ ಕೇಡನ್ನುಂಟುಮಾಡುವವು ಎಂಬದಾಗಿ ಅದರಿಂದಲೇ ನಿಮಗೆ ತಿಳಿದುಬರುವದು;


ಆದಕಾರಣ ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಹೀಗನ್ನುತ್ತಾನೆ - ಆಹಾ, ಯೆಹೂದವನ್ನೆಲ್ಲಾ ನಿರ್ಮೂಲಮಾಡುವೆನು, ಕೇಡಿಗಾಗಿಯೇ ನಿಮ್ಮ ಮೇಲೆ ದೃಷ್ಟಿಯಿಡುವೆನು.


ಯೆಹೋವನು ಅಂಥವನನ್ನು ಎಂದಿಗೂ ಕ್ಷವಿುಸದೆ ಬಹಳ ಸಿಟ್ಟುಮಾಡಿಕೊಂಡು ತನ್ನ ಗೌರವವನ್ನು ಕಾಪಾಡಿಕೊಳ್ಳುವವನಾಗಿ ಈ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪೋಕ್ತಿಗಳಿಗೂ ಅವನನ್ನು ಗುರಿಪಡಿಸಿ ಅವನ ಹೆಸರನ್ನು ಭೂವಿುಯ ಮೇಲೆ ಇಲ್ಲದಂತೆ ಮಾಡುವನು.


ನಾನು ನಿಮ್ಮ ಮೇಲೆ ಉಗ್ರಕೋಪವನ್ನು ಮಾಡುವದರಿಂದ ನೀವು ನಿಮ್ಮ ಶತ್ರುಗಳ ಎದುರಿನಿಂದ ಸೋತು ಬೀಳುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು; ಯಾರೂ ಹಿಂದಟ್ಟದೆ ಇರುವಾಗಲೂ ನೀವು ಹೆದರಿ ಓಡುವಿರಿ.


ಅವನು ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟು ನನ್ನ ದೇವಸ್ಥಾನವನ್ನು ಅಶುದ್ಧಮಾಡಿ ನನ್ನ ಪರಿಶುದ್ಧವಾದ ಹೆಸರನ್ನು ಅಪಕೀರ್ತಿಗೆ ಒಳಪಡಿಸಿದದರಿಂದ ನಾನು ಅವನಿಗೆ ವಿಮುಖನಾಗಿ ಅವನನ್ನು ಕುಲದಿಂದ ತೆಗೆದುಹಾಕುವೆನು.


ಆಹಾ, ತಗ್ಗಿನ ನಗರಿಯೇ, ಪ್ರಸ್ಥಭೂವಿುಯ ಶಿಖರದ ಮೇಲಣ ಪುರಿಯೇ, ನಾನು ನಿನಗೆ ವಿರುದ್ಧವಾಗಿದ್ದೇನೆ; ಯಾರು ಇಳಿದು ನಮ್ಮ ಮೇಲೆ ಬಂದಾರು, ನಮ್ಮ ನಿವಾಸಗಳಲ್ಲಿ ಯಾರು ನುಗ್ಗಿಯಾರು ಎನ್ನುವವರೇ,


ಆಹಾ, ತಮ್ಮ ನಾಲಿಗೆಗಳನ್ನು ಚಾಚಿ ಯೆಹೋವನು ನುಡಿಯುತ್ತಾನೆ ಎಂದು ಹೇಳುವ ಪ್ರವಾದಿಗಳಿಗೆ ನಾನು ಪ್ರತಿಭಟಿಸುವವನಾಗಿದ್ದೇನೆ. ಇದು ಯೆಹೋವನ ನುಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು