Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 18:10 - ಕನ್ನಡ ಸತ್ಯವೇದವು J.V. (BSI)

10 ಅದು ನನ್ನ ಮಾತನ್ನು ಕೇಳದೆ ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದರೆ ನಾನು ಮನಸ್ಸನ್ನು ಬದಲಾಯಿಸಿಕೊಂಡು ಅದಕ್ಕೆ ಮಾಡಬೇಕೆಂದಿದ್ದ ಮೇಲನ್ನು ಮಾಡದೆ ಇರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಅದು ನನ್ನ ಮಾತನ್ನು ಕೇಳದೆ, ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದರೆ ನಾನು ಮನಸ್ಸನ್ನು ಬದಲಾಯಿಸಿಕೊಂಡು ಅದಕ್ಕೆ ಮಾಡಬೇಕೆಂದಿದ್ದ ಮೇಲನ್ನು ಮಾಡದೆ ಇರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಅದು ನನ್ನ ಮಾತನ್ನು ಕೇಳದೆ ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ್ದೇ ಆದರೆ ನಾನು ಮನಸ್ಸನ್ನು ಬದಲಾಯಿಸುವೆನು. ಅದಕ್ಕೆ ಮಾಡಬೇಕೆಂದಿದ್ದ ಒಳಿತನ್ನು ಮಾಡದಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆದರೆ ಆ ಜನಾಂಗವು ನನ್ನ ಆಜ್ಞಾಪಾಲನೆಯನ್ನು ಮಾಡದೆ ದುಷ್ಕೃತ್ಯಗಳಲ್ಲಿ ತೊಡಗಿದರೆ ಅದನ್ನು ನೋಡಿ ಆ ಜನಾಂಗಕ್ಕೆ ನಾನು ಮಾಡಬೇಕೆಂದಿದ್ದ ಒಳಿತಿನ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ, ನಾನು ಅದಕ್ಕೆ ಉಪಕಾರ ಮಾಡುತ್ತೇನೆಂದು ಹೇಳಿದ ಒಳ್ಳೆಯದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 18:10
14 ತಿಳಿವುಗಳ ಹೋಲಿಕೆ  

ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮಮಾಡಿದರೆ ಆ ಅಧರ್ಮದಿಂದಲೇ ಸಾಯುವನು.


ನಿನ್ನ ಗೋತ್ರದವರೂ ಸಂತಾನದವರೂ ನಿರಂತರವೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬಹುದು ಎಂದು ಆಜ್ಞಾಪಿಸಿದ ಇಸ್ರಾಯೇಲ್‍ದೇವರಾದ ಯೆಹೋವನೆಂಬ ನಾನು ಈಗ ತಿಳಿಸುವದೇನಂದರೆ - ಅದು ನನಗೆ ದೂರವಾಗಿರಲಿ; ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರು ತಿರಸ್ಕಾರಹೊಂದುವರು.


ಆದರೆ ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮಮಾಡಿ ದುಷ್ಟನು ನಡಿಸುವ ದುರಾಚಾರಗಳನ್ನೆಲ್ಲಾ ನಡಿಸಿದರೆ ಅವನು ಬಾಳುವನೋ? ಅವನು ಮಾಡಿದ ಯಾವ ಸುಕೃತ್ಯವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು, ಅವನು ಮಾಡುತ್ತಿರುವ ಪಾಪಾಪರಾಧಗಳಿಂದಲೇ ಸಾಯುವನು.


ಆಗ ಸಮುವೇಲನು - ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು.


ಯೆಹೋವನು ಡೊಂಕುದಾರಿಹಿಡಿದವರನ್ನು ಪಾತಕಿಗಳ ಗತಿಗೆ ಹೋಗಮಾಡಲಿ. ಇಸ್ರಾಯೇಲ್ಯರಿಗೆ ಶುಭವುಂಟಾಗಲಿ.


ಯೆಹೋವನನ್ನು ಆಶ್ರಯಿಸದೆ ಯೆಹೋವನ ದರ್ಶನವನ್ನು ಬಯಸದೆ ಯೆಹೋವನ ಮಾರ್ಗಬಿಟ್ಟವರನ್ನೂ ಧ್ವಂಸಪಡಿಸುವೆನು.


ಸಮುವೇಲನು ಜೀವದಿಂದಿರುವವರೆಗೂ ಸೌಲನನ್ನು ನೋಡುವದಕ್ಕೆ ಹೋಗಲಿಲ್ಲ; ಆದರೆ ಯೆಹೋವನು ಸೌಲನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದ್ದಕ್ಕೋಸ್ಕರ ಪಶ್ಚಾತ್ತಾಪಪಟ್ಟದರಿಂದ ಸಮುವೇಲನು ಅವನ ವಿಷಯದಲ್ಲಿ ದುಃಖಪಡುತ್ತಿದ್ದನು.


ಈ ಮನುಷ್ಯರೆಲ್ಲರು ಐಗುಪ್ತದೇಶದಲ್ಲಿಯೂ ಅರಣ್ಯದಲ್ಲಿಯೂ ನಾನು ನಡಿಸಿರುವ ಮಹತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ ಪದೇಪದೇ ನನ್ನನ್ನು ಪರೀಕ್ಷಿಸಿದದರಿಂದ


ಅದೇ ಮೇರೆಗೆ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀನು ಯಜ್ಞಮಾಡಿ ಯಾರಾದರೂ ಅಕಸ್ಮಾತ್ತಾಗಿ ಮಾಡಿದ ತಪ್ಪಿನಿಂದಾಗಲಿ ಬುದ್ಧಿಹೀನರ ಅವಿವೇಕದಿಂದಾಗಲಿ ದೇವಾಲಯಕ್ಕೆ ಸಂಭವಿಸಿದ ದೋಷವನ್ನೆಲ್ಲಾ ಪರಿಹರಿಸಬೇಕು.


ನೀವು ಆ ದೇಶವನ್ನು ಸಂಚರಿಸಿ ನೋಡಿದ ನಾಲ್ವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ, ನಾಲ್ವತ್ತು ವರುಷ ನಿಮ್ಮ ಪಾಪದ ಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.


ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವದಿಲ್ಲ.


ನರಪುತ್ರನೇ, ಜನರಿಗೆ ಹೀಗೆ ಹೇಳು - ಶಿಷ್ಟನು ದ್ರೋಹಮಾಡಿದ್ದಲ್ಲಿ ಅವನ ಪುಣ್ಯವು ಅವನನ್ನು ಉದ್ಧರಿಸದು; ದುಷ್ಟನು ತನ್ನ ದುಷ್ಟತನವನ್ನು ಬಿಟ್ಟಲ್ಲಿ ಅವನ ಪಾಪವು ಅವನನ್ನು ಬೀಳಿಸದು; ಶಿಷ್ಟನು ಪಾಪಮಾಡಿದಲ್ಲಿ ಅವನ ಪುಣ್ಯವು ಅವನನ್ನು ಉಳಿಸಲಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು