Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 16:19 - ಕನ್ನಡ ಸತ್ಯವೇದವು J.V. (BSI)

19 (ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ - ನಮ್ಮ ಪಿತೃಗಳು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ ಎಂದು ಅರಿಕೆ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಯೆಹೋವನೇ, ನನ್ನ ಬಲವೇ, ಬಲವಾದ ನನ್ನ ದುರ್ಗವೇ, ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯವೇ, ಲೋಕದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಸೇರಿ, “ನಮ್ಮ ಪೂರ್ವಿಕರು ಶುದ್ಧ ಸುಳ್ಳನ್ನು, ಮಾಯವನ್ನು, ಪ್ರಯೋಜನವಿಲ್ಲದವುಗಳನ್ನು ಪಾರಂಪರ್ಯವಾಗಿ ಹೊಂದಿದ್ದಾರೆ” ಎಂದು ಅರಿಕೆ ಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 “ಹೇ ಸರ್ವೇಶ್ವರಾ, ನನ್ನ ಶಕ್ತಿಯೇ, ನನ್ನ ಕೋಟೆಯೇ, ಆಪತ್ತು ಕಾಲದಲ್ಲಿ ನನ್ನ ಆಶ್ರಯವೇ, ಜಗದ ಕಟ್ಟಕಡೆಯಿಂದ ಜನಾಂಗಗಳು ನಿಮ್ಮ ಸಮ್ಮುಖಕ್ಕೆ ಬರುವುವು. ‘ನಮ್ಮ ಪೂರ್ವಜರು ಪಾರಂಪರ್ಯವಾಗಿ ಪಡೆದವುಗಳು ನಿಶ್ಚಯವಾಗಿ ಅಬದ್ಧವಾದವುಗಳು, ಮಾಯರೂಪವಾದವುಗಳು ಹಾಗು ನಿಷ್ಪ್ರಯೋಜನವಾದವುಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಯೆಹೋವನೇ, ನೀನೇ ನನ್ನ ಬಲವಾಗಿರುವೆ. ನನ್ನ ರಕ್ಷಕನಾಗಿರುವೆ. ಕಷ್ಟ ಬಂದಾಗ ಓಡಿಬಂದು ಆಶ್ರಯ ಪಡೆಯಲು ಸುರಕ್ಷಿತ ಸ್ಥಳವಾಗಿರುವೆ. ಜಗತ್ತಿನ ಎಲ್ಲಾ ಭಾಗಗಳ ಜನಾಂಗದ ಜನರು ನಿನ್ನಲ್ಲಿಗೆ ಬರುವರು. ಅವರು, “ನಮ್ಮ ಪೂರ್ವಿಕರು ಸುಳ್ಳುದೇವರುಗಳನ್ನಿಟ್ಟುಕೊಂಡಿದ್ದರು. ಅವರು ಆ ನಿರರ್ಥಕವಾದ ವಿಗ್ರಹಗಳನ್ನು ಪೂಜಿಸಿದರು. ಆದರೆ ಆ ವಿಗ್ರಹಗಳು ಅವರಿಗೆ ಕೊಂಚವೂ ಸಹಾಯ ಮಾಡಲಿಲ್ಲ” ಎಂದು ಹೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಓ ಯೆಹೋವ ದೇವರೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಜಗದ ಕಟ್ಟಕಡೆಯಿಂದ ಜನಾಂಗಗಳು ನಿನ್ನ ಬಳಿಗೆ ಬರುವುವು. “ನಮ್ಮ ಪೂರ್ವಜರು ನಿಶ್ಚಯವಾಗಿ ಸುಳ್ಳಾದದ್ದನ್ನು ಪಾರಂಪರ್ಯವಾಗಿ ಹೊಂದಿದ್ದಾರೆ. ಅವು ವ್ಯರ್ಥವೇ. ಅವುಗಳಲ್ಲಿ ಏನೂ ಪ್ರಯೋಜನವಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 16:19
55 ತಿಳಿವುಗಳ ಹೋಲಿಕೆ  

ನೀನು ದೀನರಿಗೆ ಕೋಟೆ, ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣದುರ್ಗ, ಬಿಸಿಲಿಗೆ ನೆರಳು, ಭೀಕರರ ಶ್ವಾಸವು ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ.


ಯೆಹೋವನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ; ತನ್ನ ಮರೆಹೊಕ್ಕವರನ್ನು ಬಲ್ಲನು.


ನನಗೆ ಭಯಾಸ್ಪದವಾಗಬೇಡ; ಕೇಡಿನ ಕಾಲದಲ್ಲಿ ನನಗೆ ಆಶ್ರಯವಾಗಿದ್ದೀ.


ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ಬೆಳ್ಳಿಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ,


ಇಂಥಾ ಬೊಂಬೆಗಳು ಸೌತೆಯ ತೋಟದ ಬೆದರುಗಂಬದಂತಿವೆ, ಮಾತಾಡಲಾರವು; ಹೊತ್ತುಕೊಂಡುಹೋಗಬೇಕು, ನಡೆಯಲಾರವು. ಅವುಗಳಿಗೆ ಅಂಜಬೇಡಿರಿ, ಕೇಡುಮಾಡಲಾರವು, ಮೇಲುಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ.


ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರೂ ಬದಲಾಯಿಸಿಕೊಂಡಿತೋ? ಆದರೆ ನನ್ನ ಜನರು ತಮ್ಮ ಮಹಿಮೆಯಾದ ನನಗೆ ಬದಲಾಗಿ ಕೆಲಸಕ್ಕೆ ಬಾರದ್ದನ್ನು ಆರಿಸಿಕೊಂಡಿದ್ದಾರೆ.


ದೇವತೆಯನ್ನು ರೂಪಿಸುವವರೂ ವ್ಯರ್ಥವಿಗ್ರಹವನ್ನು ಎರಕ ಹೊಯ್ಯುವವರೂ ಎಂಥವರು?


ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.


ಸೂರ್ಯನು ಮೂಡುವ ದಿಕ್ಕಿನಿಂದ ಮುಣುಗುವ ದಿಕ್ಕಿನವರೆಗೂ ನನ್ನ ನಾಮವು ಅನ್ಯಜನಾಂಗಗಳಲ್ಲಿ ಘನವಾಗಿದೆ; ಒಂದೊಂದು ಸ್ಥಳದಲ್ಲಿಯೂ ನನ್ನ ನಾಮಕ್ಕೆ ಧೂಪವನ್ನೂ ಶುದ್ಧನೈವೇದ್ಯವನ್ನೂ ಅರ್ಪಿಸುತ್ತಾರೆ; ಹೌದು, ಅನ್ಯಜನಾಂಗಗಳಲ್ಲಿಯೇ ನನ್ನ ನಾಮವು ಘನವಾಗಿದೆ; ಇದು ಸೇನಾಧೀಶ್ವರ ಯೆಹೋವನ ನುಡಿ.


ಆ ಕಾಲದಲ್ಲಿ ಬಹು ಜನಾಂಗಗಳು ಯೆಹೋವನಾದ ನನ್ನನ್ನು ಆಶ್ರಯಿಸಿಕೊಂಡು ನನ್ನ ಜನವಾಗುವವು; ನಾನು ನಿನ್ನ ಮಧ್ಯದಲ್ಲಿ ವಾಸಿಸುವೆನು; ಆಗ ಸೇನಾಧೀಶ್ವರ ಯೆಹೋವನೇ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂಬದು ನಿನಗೆ ಗೊತ್ತಾಗುವದು.


ಕರ್ತನಾದ ಯೆಹೋವನೇ ನನ್ನ ಬಲ; ಆತನು ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಮಾಡಿ ನನ್ನ ಉನ್ನತಪ್ರದೇಶಗಳಲ್ಲಿ ನನ್ನನ್ನು ನಡಿಸುತ್ತಾನೆ. ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.


ಆದಕಾರಣ ನೀನು ಹೀಗೆ ಸಾರು - ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಅವರನ್ನು ದೂರವಾಗಿ ತೊಲಗಿಸಿ ಜನಾಂಗಗಳಲ್ಲಿ ಅನ್ಯದೇಶಗಳೊಳಗೆ ಚದರಿಸಿದರೂ ಅವರು ಸೇರಿರುವ ದೇಶಗಳಲ್ಲಿಯೇ ನಾನು ಕೊಂಚ ಕಾಲದ ಮಟ್ಟಿಗೆ ಅವರಿಗೆ ಪವಿತ್ರಾಲಯವಾಗಿರುವೆನು.


ಆತನೇ ಈಗ ಹೀಗನ್ನುತ್ತಾನೆ - ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬಿನ ಕುಲಗಳನ್ನು ಉನ್ನತಪಡಿಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪಕಾರ್ಯವೇ ಸರಿ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.


ಆತನೇ ನನಗೆ ಶರಣನೂ ರಕ್ಷಕನೂ ದುರ್ಗವೂ; ನಾನು ಕದಲಿದರೂ ಬೀಳೆನು.


ಏಳನೆಯ ದೇವದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾ ಶಬ್ದಗಳುಂಟಾಗಿ - ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನು ಅಭಿಷೇಕಿಸಿದವನಿಗೂ ಉಂಟಾಯಿತು; ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು ಎಂದು ಹೇಳಿದವು.


ನಿಶ್ಚಯವಾಗಿ ಗುಡ್ಡಗಳಿಂದಲೂ ಬೆಟ್ಟಗಳ ಜಾತ್ರೆಯ ಗದ್ದಲದಿಂದಲೂ ಮೋಸವಾಯಿತು; ನಿಜನಿಜವಾಗಿ ಇಸ್ರಾಯೇಲಿನ ರಕ್ಷಣೆಯು ನಮ್ಮ ದೇವರಾದ ಯೆಹೋವನಲ್ಲಿ ನೆಲೆಗೊಂಡಿದೆ.


ಜನಾಂಗಗಳು ನಿನ್ನ ಧರ್ಮವನ್ನು, ಸಕಲ ರಾಜರು ನಿನ್ನ ವೈಭವವನ್ನು ನೋಡುವರು; ಯೆಹೋವನ ಬಾಯಿ ನೇವಿುಸಿದ ಹೊಸ ಹೆಸರು ನಿನಗೆ ದೊರೆಯುವದು.


ಮತ್ತು ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂವಿುಯಲ್ಲಿ ನೀರಿನ ಕಾಲುವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.


ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.


ಐಗುಪ್ತ ದೇಶದಿಂದ ರಾಯಭಾರಿಗಳು ಬರುವರು; ಕೂಷ್ ದೇಶದವರ ಕೈಗಳು ದೇವರಿಗೆ ಕಾಣಿಕೆಗಳನ್ನು ನೀಡಲಿಕ್ಕೆ ಅವಸರ ಪಡುವವು.


ನನ್ನ ರಕ್ಷಣೆಗೂ ಮಾನಕ್ಕೂ ದೇವರೇ ಆಧಾರ; ನನಗೆ ಬಲವಾದ ದುರ್ಗವೂ ಆಶ್ರಯವೂ ದೇವರಲ್ಲಿಯೇ.


ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬವಂಶದವರ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ. ಸೆಲಾ.


ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬವಂಶದವರ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ. ಸೆಲಾ.


ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.


ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು; ತನ್ನ ಗುಡಾರವೆಂಬ ಆಶ್ರಯಸ್ಥಾನದಲ್ಲಿ ನನ್ನನ್ನು ಭದ್ರಪಡಿಸುವನು; ಪರ್ವತಾಗ್ರದಲ್ಲಿ ನನ್ನನ್ನು ಸುರಕ್ಷಿತವಾಗಿ ಇರಿಸುವನು.


ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.


ಅವರು ಸತ್ಯದೇವರನ್ನು ಬಿಟ್ಟು ಅಸತ್ಯವಾದದ್ದನ್ನು ಹಿಡಿದುಕೊಂಡು ಸೃಷ್ಟಿಕರ್ತನನ್ನು ಪೂಜಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವಿಸುವವರಾದರು. ಸೃಷ್ಟಿಕರ್ತನೊಬ್ಬನೇ ನಿರಂತರ ಸ್ತುತಿಹೊಂದತಕ್ಕವನು. ಆಮೆನ್.


ಅರಾಮ್ಯರ ಅರಸನ ಮಂತ್ರಿಗಳು ತಮ್ಮ ಒಡೆಯನಿಗೆ - ಇಸ್ರಾಯೇಲ್ಯರ ದೇವರು ಬೆಟ್ಟಗಳ ದೇವರಾಗಿರುವದರಿಂದ ಅವರು ನಮ್ಮನ್ನು ಸೊಲಿಸಿದರು; ನಾವು ಅವರೊಡನೆ ಬೈಲಿನಲ್ಲಿ ಯುದ್ಧಮಾಡುವದಾದರೆ ಹೇಗೂ ಜಯಹೊಂದುವೆವು.


ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿತಪ್ಪಿಸಿದ ಕಾರಣ ನನ್ನ ಕೈ ಸುಳ್ಳನ್ನು ಹಿಡಿದಿದೆಯಲ್ಲಾ ಎಂದುಕೊಳ್ಳಲೂ ಆಗದು, ತನ್ನನ್ನು ರಕ್ಷಿಸಿಕೊಳ್ಳಲೂ ಆಗದು.


ಯೆಹೋವನ ಈ ಮಾತನ್ನು ಕೇಳಿರಿ - ಐಗುಪ್ತದ ಆದಾಯವೂ ಕೂಷಿನ ವ್ಯಾಪಾರವೂ ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ಹೀಗೆ ಅರಿಕೆಮಾಡುವರು - ದೇವರು ನಿಜವಾಗಿ ನಿಮ್ಮಲ್ಲಿದ್ದಾನೆ. ಇನ್ನು ಯಾವ ದೇವರೂ ಇಲ್ಲವೇ ಇಲ್ಲ.


ಯಾಜಕರಿಗೆ ಯೆಹೋವನು ಎಲ್ಲಿ ಎಂಬ ವಿಚಾರವೇ ಇರಲಿಲ್ಲ, ಧರ್ಮೋಪದೇಶಕರು ನನ್ನನ್ನು ತಿಳಿಯಲಿಲ್ಲ, ಪಾಲಕರು ನನಗೆ ದ್ರೋಹಮಾಡಿದರು, ಪ್ರವಾದಿಗಳು ಬಾಳ್‍ದೇವತೆಯ ಆವೇಶದಿಂದ ಪ್ರವಾದಿಸಿ ಕೆಲಸಕ್ಕೆ ಬಾರದವುಗಳನ್ನು ಸೇವಿಸಿದರು.


ಯೆಹೋವನ ಜೀವದಾಣೆ ಎಂದು ಸತ್ಯನ್ಯಾಯ ಧರ್ಮಾನುಸಾರವಾಗಿ ನೀನು ಪ್ರಮಾಣಮಾಡಿದರೆ ಜನಾಂಗಗಳು ಆತನಿಂದ ತಮ್ಮನ್ನು ಆಶೀರ್ವದಿಸಿಕೊಂಡು ಆತನಲ್ಲಿ ಹೆಚ್ಚಳಪಡುವರು.


ಇವರು ಮೊದಲು ಬಾಳನ ಹೆಸರೆತ್ತಿ ಪ್ರಮಾಣಮಾಡುವ ಅಭ್ಯಾಸವನ್ನು ನನ್ನ ಜನರಿಗೆ ಕಲಿಸಿಕೊಟ್ಟ ಪ್ರಕಾರ ಈಗ ನನ್ನ ಹೆಸರನ್ನೆತ್ತಿ ಯೆಹೋವನ ಜೀವದಾಣೆ ಎಂದು ಪ್ರಮಾಣ ಮಾಡುವ ನನ್ನ ಜನರ ಅಭ್ಯಾಸವನ್ನು ಚೆನ್ನಾಗಿ ಮಾಡಿಕೊಂಡರೆ ನನ್ನ ಜನರ ಮಧ್ಯದಲ್ಲಿ ನೆಲೆಗೊಂಡು ವೃದ್ಧಿಯಾಗುವರು.


ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಮೇಲುಗಳ ಸುದ್ದಿಯನ್ನು ಕೇಳಿ ನಾನು ಈ ಪಟ್ಟಣಕ್ಕೆ ಉಂಟುಮಾಡುವ ಸುಖಸಮಾಧಾನಗಳನ್ನು ನೋಡಿ ಹೆದರಿ ನಡುಗುವ ಸಕಲ ಭೂರಾಜ್ಯಗಳ ಮುಂದೆ ಈ ಪಟ್ಟಣವು ನನ್ನ ಕೀರ್ತಿಯೂ ಮಹಿಮೆಯೂ ಆನಂದದ ಬಿರುದೂ ಆಗುವದು.


ಯೆಹೋವನು ಚೀಯೋನಿನಿಂದ ಗರ್ಜಿಸುತ್ತಾನೆ, ಯೆರೂಸಲೇವಿುನಿಂದ ದನಿಗೈಯುತ್ತಾನೆ; ಭೂಮ್ಯಾಕಾಶಗಳು ನಡುಗುತ್ತವೆ. ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ ಇಸ್ರಾಯೇಲ್ಯರಿಗೆ ರಕ್ಷಣದುರ್ಗವೂ ಆಗುವನು.


ಯೆಹೋವನು ಇಂತೆನ್ನುತ್ತಾನೆ - ಯೆಹೂದವು ಮೂರು ಹೌದು ನಾಲ್ಕು ದ್ರೋಹಗಳನ್ನು ಮಾಡಿದ್ದರಿಂದ ಅದಕ್ಕಾಗುವ ದಂಡನೆಯನ್ನು ನಾನು ತಪ್ಪಿಸುವದೇ ಇಲ್ಲ; ಯೆಹೂದ್ಯರು ಯೆಹೋವನ ಧರ್ಮೋಪದೇಶವನ್ನು ನಿರಾಕರಿಸಿ ಆತನ ವಿಧಿಗಳನ್ನು ಕೈಕೊಳ್ಳದೆ ಅವರ ಪಿತೃಗಳು ಹಿಂಬಾಲಿಸಿದ ಸುಳ್ಳುದೇವತೆಗಳ ಮೂಲಕ ಸನ್ಮಾರ್ಗವನ್ನು ತಪ್ಪಿದರಷ್ಟೆ;


ಯೆಹೋವನು ಸ್ತೋತ್ರಕ್ಕೆ ಅರ್ಹನು; ಆತನಿಗೆ ನಾನು ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.


ನನ್ನ ಪಾಪಗಳನ್ನು ನಿವಾರಿಸಲು ನನ್ನಿಂದಾಗುವದಿಲ್ಲ. ಆದರೆ ನಮ್ಮ ದೋಷಪರಿಹಾರಕನು ನೀನೇ.


ಜನಾಂಗಗಳ ಕಟ್ಟಳೆಗಳು ಬರಿದೇ; ಅರಣ್ಯದ ಮರವನ್ನು ಕತ್ತರಿಸುವರು, ಬಡಗಿಯು ಅದನ್ನು ಕೈಯಿಂದ, ಬಾಚಿಯಿಂದ ರೂಪಿಸುವನು.


ಇಸ್ರಾಯೇಲ್ಯರ ನಿರೀಕ್ಷೆಯೇ, ಇಕ್ಕಟ್ಟಿನಲ್ಲಿ ಅವರಿಗೆ ರಕ್ಷಕನೇ, ಏಕೆ ದೇಶದಲ್ಲಿ ಪರದೇಶಿಯಂತೆಯೂ ಇಳಿದುಕೊಳ್ಳುವದಕ್ಕೆ ಗುಡಾರಹಾಕಿಕೊಳ್ಳುವ ಪ್ರಯಾಣಿಕನ ಹಾಗೆಯೂ ಇದ್ದೀ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು