Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 14:4 - ಕನ್ನಡ ಸತ್ಯವೇದವು J.V. (BSI)

4 ದೇಶದಲ್ಲಿ ಮಳೆಯಿಲ್ಲದೆ ಭೂವಿುಯು ಬಿರುಕುಬಿಟ್ಟಿರುವದರಿಂದ ರೈತರು ನಾಚಿಕೆಪಟ್ಟು ಮೋರೆಮುಚ್ಚಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ದೇಶದಲ್ಲಿ ಮಳೆಯಿಲ್ಲದೆ ಭೂಮಿಯು ಬಿರುಕುಬಿಟ್ಟಿರುವುದರಿಂದ ರೈತರು ನಾಚಿಕೆಪಟ್ಟು ಮುಖವನ್ನು ಮುಚ್ಚಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಾಡಿನಲ್ಲಿ ಮಳೆಯಿಲ್ಲದೆ ಭೂಮಿ ಬಿರುಕುಬಿಟ್ಟಿದೆ ನೇಗಿಲಯೋಗಿ ನಿರಾಶೆಗೊಂಡು ಮೋರೆ ಮುಚ್ಚಿಕೊಳ್ಳುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಭೂಮಿಗೆ ಮಳೆ ಬೀಳುವದಿಲ್ಲ. ಯಾರೂ ಬಿತ್ತನೆಗಾಗಿ ಭೂಮಿಯನ್ನು ಉಳುವದಿಲ್ಲ. ರೈತರು ಎದೆಗುಂದುತ್ತಾರೆ. ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ದೇಶದಲ್ಲಿ ಮಳೆ ಇಲ್ಲದ ಕಾರಣ ಭೂಮಿಯು ಬಿರುಕುಬಿಟ್ಟಿದೆ. ಒಕ್ಕಲಿಗರು ನಿರಾಶರಾಗಿ ತಮ್ಮ ತಲೆಗಳನ್ನು ಮುಚ್ಚಿಕೊಳ್ಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 14:4
10 ತಿಳಿವುಗಳ ಹೋಲಿಕೆ  

ರೈತರೇ, ಕಂಗೆಡಿರಿ! ತೋಟಗಾರರೇ, ಗೋಳಾಡಿರಿ! ಗೋದಿಯೂ ಜವೆಗೋದಿಯೂ ಹಾಳಾಗಿವೆ; ಹೊಲದ ಬೆಳೆಯು ನಾಶವಾಗಿದೆ.


ಆದಕಾರಣ ಹದಮಳೆಗೆ ಅಡ್ಡಿಯಾಯಿತು, ಹಿಂಗಾರೂ ಆಗಲಿಲ್ಲ; ಆದರೂ ನೀನು ಸೂಳೆಯ ಮುಖವುಳ್ಳವಳಾಗಿ ನಾಚಿಕೆಗೆಟ್ಟಿದ್ದೀ.


ಬೀಜಗಳು ಹೆಂಟೆಗಳ ಕೆಳಗೆ ಒಣಗುತ್ತವೆ; ಹಗೇವುಗಳು ಬರಿದಾಗಿವೆ, ಕಣಜಗಳು ಬಿದ್ದುಹೋಗಿವೆ; ಧಾನ್ಯಕ್ಕೆ ಸಂಕೋಚವಾಯಿತಷ್ಟೆ.


ಎಲ್ಲಾ ಜನಾಂಗಗಳವರೂ ನಿಮ್ಮ ಆ ದೇಶವು ಯಾವ ವ್ಯವಸಾಯವಾದರೂ ಇಲ್ಲದೆ ಹುಲ್ಲಾದರೂ ಬೆಳೆಯದೆ ಹಾಳುಬಿದ್ದು ಯೆಹೋವನು ಮಹಾ ಕೋಪದಿಂದ ಕೆಡವಿದ ಸೊದೋಮ್ ಗೊಮೋರ ಅದ್ಮಾ ಚೆಬೋಯೀಮ್ ಎಂಬ ಪಟ್ಟಣಗಳ ಪ್ರದೇಶದಂತೆ ಸುಟ್ಟುಹೋದದ್ದಾಗಿ ಎಲ್ಲಾ ಕಡೆಗಳಲ್ಲಿಯೂ ಗಂಧಕ ಉಪ್ಪುಗಳಿಂದ ತುಂಬಿರುವದನ್ನು ಕಂಡು -


ಅಲ್ಲಿಂದಲೂ ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವಿ; ಏಕಂದರೆ ನಿನ್ನ ಭರವಸಗಳನ್ನು ಯೆಹೋವನು ನಿರಾಕರಿಸಿದ್ದಾನೆ; ಅವುಗಳ ಮುಖಾಂತರ ನಿನ್ನ ಕಾರ್ಯವು ಸಾಗದು.


ಎರಡು ಮೂರು ಊರಿನವರು ನೀರು ಕುಡಿಯುವದಕ್ಕೆ ಮತ್ತೊಂದು ಊರಿಗೆ ಬಳಲುತ್ತಾ ಹೋಗುತ್ತಿದ್ದರು; ಬಾಯಾರಿಕೆ ತೀರಲಿಲ್ಲ; ಹೀಗೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ ಎಂದು ಯೆಹೋವನು ನುಡಿಯುತ್ತಾನೆ.


ಇಷ್ಟಾದರೂ ನೀವು ನನ್ನ ಮಾತಿಗೆ ಲಕ್ಷ್ಯಕೊಡದೆಹೋದರೆ ನಾನು ನಿಮ್ಮ ಪಾಪಗಳ ನಿವಿುತ್ತ ಏಳರಷ್ಟಾಗಿ ನಿಮ್ಮನ್ನು ಶಿಕ್ಷಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು