Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 12:4 - ಕನ್ನಡ ಸತ್ಯವೇದವು J.V. (BSI)

4 ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲು ಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವದು? ಅಲ್ಲಿನ ನಿವಾಸಿಗಳು ದುಷ್ಟರಾಗಿರುವದರಿಂದ ಮೃಗಪಕ್ಷಿಗಳು ಬಡಿದುಕೊಂಡು ಹೋಗಿವೆ; ಆಹಾ, ಅವನು ನಮ್ಮ ಅಂತ್ಯಗತಿಯನ್ನು ನೋಡುವದೇ ಇಲ್ಲ ಎಂದು ಹೇಳಿದ್ದಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲುಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವುದು? ಅಲ್ಲಿನ ನಿವಾಸಿಗಳು ದುಷ್ಟರಾಗಿರುವುದರಿಂದ ಮೃಗ ಹಾಗು ಪಕ್ಷಿಗಳು ಬಡಿದುಕೊಂಡು ಹೋಗಿವೆ. “ಆಹಾ, ಅವನು ನಮ್ಮ ಅಂತ್ಯಗತಿಯನ್ನು ನೋಡುವುದೇ ಇಲ್ಲ” ಎಂದು ಹೇಳಿದ್ದಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಇನ್ನೆಷ್ಟರವರೆಗೆ ನಾಡು ದುಃಖಿಸುತ್ತಿರಬೇಕು? ಅದರ ಎಲ್ಲೆಎಲ್ಲೆಗಳಲ್ಲಿ ಹುಲ್ಲು ಸೊಪ್ಪು ಒಣಗಿರಬೇಕು? ನಾಡಜನರ ನೀಚತನದ ನಿಮಿತ್ತ ಮಾಯವಾಗಿವೆ ಪ್ರಾಣಪಕ್ಷಿಗಳು ಕೂಡ. ‘ನಮ್ಮ ನಡತೆಯನ್ನು ಗಮನಿಸರು ದೇವರು’ ಎಂದುಕೊಳ್ಳುತ್ತಿರುವರು ಆ ಜನರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಎಷ್ಟು ಕಾಲದವರೆಗೆ ಭೂಮಿಯು ಒಣಗಿರಬೇಕು? ಎಷ್ಟು ಕಾಲದವರೆಗೆ ಹುಲ್ಲು ಒಣಗಿ ನಿರ್ಜೀವವಾಗಿರಬೇಕು? ದೇಶದಲ್ಲಿ ಪಶುಪಕ್ಷಿಗಳು ಸತ್ತುಹೋಗಿವೆ. ಇದು ದುಷ್ಟರ ತಪ್ಪಾದರೂ ಆ ದುಷ್ಟರು, “ನಮಗೆ ಏನಾಗುವದೆಂದು ನೋಡಲು ಯೆರೆಮೀಯನು ಬಹಳ ದಿವಸ ಬದುಕಿರಲಾರ” ಎಂದು ಹೇಳುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಇನ್ನೆಷ್ಟರವರೆಗೆ ಎಲ್ಲಾ ಸೀಮೆಯ ಹುಲ್ಲು, ಸೊಪ್ಪು ಒಣಗಿ ದೇಶವು ದುಃಖಿಸುತ್ತಿರುವುದು? ಅಲ್ಲಿನ ನಿವಾಸಿಗಳು ದುಷ್ಟರಾಗಿರುವುದರಿಂದ ಮೃಗ ಪಕ್ಷಿಗಳು ಬಡಿದುಕೊಂಡು ಹೋಗಿವೆ; ಆಹಾ, ಅವನು ನಮ್ಮ ಅಂತ್ಯ ಗತಿಯನ್ನು ನೋಡುವುದೇ ಇಲ್ಲ, ಎಂದು ಹೇಳಿದ್ದಾರಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 12:4
22 ತಿಳಿವುಗಳ ಹೋಲಿಕೆ  

ನಾನು ಪರ್ವತಗಳಿಗಾಗಿ ಅತ್ತು ಗೋಳಾಡುವೆನು, ಅಡವಿಯ ಕಾವಲುಗಳಿಗಾಗಿ ಶೋಕಗೀತವನ್ನು ಹಾಡುವೆನು; ಅವು ಸುಟ್ಟುಹೋಗಿವೆ, ಯಾರೂ ಹಾದುಹೋಗರು, ದನದ ಸದ್ದು ಕಿವಿಗೆ ಬೀಳದು, ಮೃಗಪಕ್ಷಿಗಳು ತೊಲಗಿಹೋಗಿವೆ.


ನಾನು ನೋಡಲಾಗಿ ಅಯ್ಯೋ, ಜನವೇ ಇರಲಿಲ್ಲ, ಆಕಾಶದ ಸಕಲ ಪಕ್ಷಿಗಳು ಹಾರಿಹೋಗಿದ್ದವು.


ಬುಗ್ಗೆಗಳನ್ನು ಒಣನೆಲವಾಗುವಂತೆಯೂ ಫಲಭೂವಿುಯನ್ನು ಉಪ್ಪುನೆಲವಾಗುವಂತೆಯೂ ಮಾಡಿದನು.


ಜಗತ್ತೆಲ್ಲಾ ಇಂದಿನವರೆಗೂ ನರಳುತ್ತಾ ಪ್ರಸವ ವೇದನೆಪಡುತ್ತಾ ಇರುತ್ತದೆಂದು ನಾವು ಬಲ್ಲೆವು.


ಹೀಗಿರಲು ದೇಶವು ನರಳುವದು, ಅದರಲ್ಲಿ ವಾಸಿಸುವ ಸಕಲ ಭೂಜಂತುಗಳೂ ಆಕಾಶಪಕ್ಷಿಗಳೂ ಬಳಲಿಹೋಗುವವು; ಸಮುದ್ರದ ಮೀನುಗಳು ಸಹ ನೀಗಿಹೋಗುವವು.


ಸೀಮೆಯು ಸೂಳೆಗಾರರಿಂದ ತುಂಬಿದೆ, ದೈವಶಾಪದ ನಿವಿುತ್ತ ದೇಶವು ದುಃಖಿಸುತ್ತದೆ; ಅಡವಿಯ ಹುಲ್ಗಾವಲು ಬಾಡಿದೆ; ದೇಶದವರು ತ್ವರೆಪಡುವ ಮಾರ್ಗವು ದುರ್ಮಾರ್ಗ, ಅವರ ಶೌರ್ಯವು ಅನ್ಯಾಯಸಾಧಕ.


ಹೀಗಿರಲು ಕರ್ತನಾದ ಯೆಹೋವನ ಈ ಮಾತನ್ನು ಕೇಳಿರಿ - ಆಹಾ, ನನ್ನ ಕೋಪವೆಂಬ ರೋಷಾಗ್ನಿಯು ಈ ಸ್ಥಳದಲ್ಲಿ ಸುರಿಯಲ್ಪಡುವದು; ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಕಾಡುಮರಗಳ ಮೇಲೆಯೂ ಭೂವಿುಯ ಬೆಳೆಯ ಮೇಲೆಯೂ ಅದನ್ನು ಸುರಿಯುವೆನು; ಆರದೆ ದಹಿಸುವದು.


ಆಹಾ, ಅಂಜೂರವು ಚಿಗುರದಿದ್ದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರವನ್ನು ಕೊಡದೆಹೋದರೂ ಹಿಂಡು ಹಟ್ಟಿಯೊಳಗಿಂದ ನಾಶವಾದರೂ ಮಂದೆಯು ಕೊಟ್ಟಿಗೆಗಳೊಳಗೆ ಇಲ್ಲದಿದ್ದರೂ


ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರ ಹೊಂದಿ ದೊರೆತನ ಮಾಡುತ್ತಾರೆ, ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?


ಯೆಹೂದವು ದುಃಖಿಸುತ್ತದೆ, ಅದರ ಊರುಗಳವರು ಕಂಗೆಟ್ಟು ಕರ್ರಗಾಗಿ ನೆಲದ ಮೇಲೆ ಬಿದ್ದಿದ್ದಾರೆ, ಯೆರೂಸಲೇವಿುನವರ ಗೋಳಾಟವು ಕೇಳಿಸುತ್ತದೆ.


ಪ್ರವಾದಿಗಳು ಬರೀ ಗಾಳಿಯೇ, ದೈವೋಕ್ತಿಯು ಅವರಲ್ಲಿಲ್ಲ; ಅವರಿಗೇ ಹೀಗಾಗಲಿ ಅಂದುಕೊಂಡಿದ್ದಾರೆ.


ಇದಕ್ಕಾಗಿ ಭೂಲೋಕವು ಪ್ರಲಾಪಿಸುವದು, ಮೇಲೆ ಆಕಾಶವು ಕಪ್ಪಾಗುವದು; ನಾನು ನುಡಿದಿದ್ದೇನೆ, ಪಶ್ಚಾತ್ತಾಪಪಡೆನು; ಉದ್ದೇಶಿಸಿದ್ದೇನೆ, ಹಿಂದೆಗೆಯೆನು.


ನೀವು ಹೀಗೆ ಮಾಡಿದರೂ ನಾನು ಸುಮ್ಮನೆ ಇದ್ದದರಿಂದ ದೇವರೂ ನಮ್ಮಂಥವನೇ ಎಂದು ನೆನಸಿಕೊಂಡಿರಿ. ಈಗಲಾದರೋ ನಾನು ಎಲ್ಲವನ್ನು ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು.


ಹೌದು, ಹಾಳು ಮಾಡಿದ್ದಾರೆ, ಅದು ಹಾಳಾಗಿ ನನಗೆ ಗೋಳಿಡುತ್ತದೆ; ಯಾವನೂ ಮನಸ್ಸಿಗೆ ತಾರದ್ದರಿಂದ ದೇಶವೆಲ್ಲಾ ಹಾಳುಬಿದ್ದಿದೆ.


ಅಯ್ಯೋ, ಪಶುಗಳು ಎಷ್ಟೋ ನರಳುತ್ತವೆ! ಮೇವಿಲ್ಲದ ಕಾರಣ ದನದ ಮಂದೆಗಳು ಭ್ರಮೆಗೊಂಡಿವೆ, ಕುರಿಯ ಹಿಂಡುಗಳು ದಂಡನೆಗೆ ಗುರಿಯಾಗಿವೆ.


ಆಮೋಸನು ಹೀಗೆ ಪ್ರಕಟಿಸಿದನು - ಯೆಹೋವನು ಚೀಯೋನಿನಿಂದ ಗರ್ಜಿಸಿ ಯೆರೂಸಲೇವಿುನಿಂದ ದನಿಗೈಯುವನು; ಆಗ ಕುರುಬರ ಕಾವಲುಗಳು ಗೋಳಿಡುವವು, ಕರ್ಮೆಲ್ ಬೆಟ್ಟದ ತುದಿಯು ಒಣಗುವದು.


ಇದನ್ನು ಕೇಳಿ ಯೆಹೋವನ ದೂತನು - ಸೇನಾಧೀಶ್ವರ ಯೆಹೋವನೇ, ನೀನು ಎಪ್ಪತ್ತು ವರುಷಗಳಿಂದ ರೋಷಗೊಂಡಿರುವ ಯೆರೂಸಲೇಮು ಮೊದಲಾದ ಯೆಹೂದದ ಪಟ್ಟಣಗಳನ್ನು ಎಷ್ಟು ಕಾಲ ಕರುಣಿಸದೆ ಇರುವಿ ಎಂದು ಬಿನ್ನವಿಸಲು


ಭೂವಿುಯು ಪ್ರಲಾಪಿಸುತ್ತಾ ಬಳಲಿದೆ, ಲೋಕವು ಕುಗ್ಗಿ ಹೋಗಿದೆ, ಲೋಕೋನ್ನತರು ಕಂಗೆಟ್ಟಿದ್ದಾರೆ.


ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ, ಅಲ್ಲಿನವರು ದಂಡನೆಗೆ ಒಳಗಾಗಿದ್ದಾರೆ; ಭೂನಿವಾಸಿಗಳು ಸುಟ್ಟುಹೋಗಿ ಕೆಲವರು ಮಾತ್ರ ಉಳಿದಿದ್ದಾರೆ.


ನಾನು ಅವರನ್ನು ಇವುಗಳಿಗಾಗಿ ದಂಡಿಸಬಾರದೋ? ಇಂಥಾ ಜನಾಂಗದ ಮೇಲೆ ನನ್ನ ರೋಷವನ್ನು ತೀರಿಸದಿರುವೆನೋ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು