ಯಾಜಕಕಾಂಡ 8:7 - ಕನ್ನಡ ಸತ್ಯವೇದವು J.V. (BSI)7 ಆಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ ನಡುಕಟ್ಟನ್ನು ಸುತ್ತಿ ಮೇಲಂಗಿಯನ್ನು ತೊಡಿಸಿ ಕವಚವನ್ನು ಹಾಕಿಸಿ ಕವಚದ ಮೇಲಣ ವಿಚಿತ್ರವಾದ ನಡುಕಟ್ಟನ್ನು ಕಟ್ಟಿ ಅದರಿಂದ ಕವಚವನ್ನು ಅವನಿಗೆ ಬಂಧಿಸಿ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಆ ಮೇಲೆ ಯೆಹೋವನು ಆಜ್ಞಾಪಿಸಿದಂತೆ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿ, ಮೇಲಂಗಿಯನ್ನು ತೊಡಿಸಿ, ಏಫೋದ್ ಕವಚವನ್ನು ಹಾಕಿಸಿ, ಕವಚದ ಮೇಲೆ ಸೊಗಸಾಗಿ ನೇಯ್ದ ನಡುಕಟ್ಟನ್ನು ಕಟ್ಟಿದನು, ಅದರಿಂದ ಕವಚವನ್ನು ಅವನಿಗೆ ಹೊದಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)7 ಆಮೇಲೆ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಆರೋನನಿಗೆ ನಿಲುವಂಗಿಯನ್ನು ತೊಡಿಸಿ, ನಡುಕಟ್ಟನ್ನು ಸುತ್ತಿಸಿ, ಅದರಿಂದ ಅವನ ಕವಚವನ್ನು ಕಟ್ಟಿ, ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ನಿಲುವಂಗಿಯನ್ನು ಆರೋನನಿಗೆ ತೊಡಿಸಿದನು; ನಡುಕಟ್ಟನ್ನು ಕಟ್ಟಿದನು; ಮೇಲಂಗಿಯನ್ನು ತೊಡಿಸಿದನು. ಏಫೋದನ್ನು ಹಾಕಿಸಿ ಕವಚದ ಮೇಲಿನ ವಿಶೇಷವಾದ ನಡುಕಟ್ಟನ್ನು ಕಟ್ಟಿದನು; ಎದೆಕವಚವನ್ನು ಬಿಗಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಆರೋನನಿಗೆ ನಿಲುವಂಗಿಯನ್ನು ಹೊದಿಸಿ, ನಡುಕಟ್ಟಿನಿಂದ ಅವನ ನಡುವನ್ನು ಕಟ್ಟಿ, ಅವನಿಗೆ ಮೇಲಂಗಿಯನ್ನು ತೊಡಿಸಿ, ಅವನ ಮೇಲೆ ಏಫೋದನ್ನು ಹಾಕಿ, ಏಫೋದಿನ ಕಲಾತ್ಮಕವಾದ ನಡುಕಟ್ಟಿನಿಂದ ಅವನ ನಡುವನ್ನೂ ಕಟ್ಟಿ, ಅದರಿಂದ ಅವನನ್ನು ಬಿಗಿದನು. ಅಧ್ಯಾಯವನ್ನು ನೋಡಿ |