ಯಾಜಕಕಾಂಡ 4:20 - ಕನ್ನಡ ಸತ್ಯವೇದವು J.V. (BSI)20 ಅವನು [ಅಭಿಷಿಕ್ತ ಯಾಜಕನ] ದೋಷಪರಿಹಾರಕಯಜ್ಞದ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲ್ಪಟ್ಟಿತೋ ಇದರ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದನಂತರ ಅವರಿಗೆ ಕ್ಷಮಾಪಣೆಯಾಗುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಅವನು (ಅಭಿಷಿಕ್ತ ಯಾಜಕ) ದೋಷಪರಿಹಾರಕ ಯಜ್ಞದ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲ್ಪಟ್ಟಿತೋ, ಇದರ ವಿಷಯದಲ್ಲಿಯೂ ಹಾಗೆಯೇ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದನಂತರ ಅವರಿಗೆ ಕ್ಷಮಾಪಣೆಯಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)20 ಅಭಿಷಿಕ್ತ ಯಾಜಕನು ದೋಷಪರಿಹಾರಕ ಹೋರಿಯ ವಿಷಯದಲ್ಲಿ ಹೇಗೆ ಮಾಡಬೇಕೆಂದು ವಿಧಿಸಲಾಯಿತೋ ಹಾಗೆಯೆ ಇದರ ವಿಷಯದಲ್ಲೂ ಮಾಡಬೇಕು. ಯಾಜಕನು ಅವರಿಗೋಸ್ಕರ ದೋಷಪರಿಹಾರ ಮಾಡಿದ ನಂತರ ಅವರಿಗೆ ಕ್ಷಮಾಪಣೆಯಾಗುವುದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಯಾಜಕನು ಪಾಪಪರಿಹಾರಕ ಯಜ್ಞದ ಹೋರಿಯ ಭಾಗಗಳನ್ನು ಸಮರ್ಪಿಸಿದಂತೆಯೇ ಈ ಭಾಗಗಳನ್ನು ಅರ್ಪಿಸಬೇಕು. ಈ ರೀತಿಯಾಗಿ, ಯಾಜಕನು ಜನರಿಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ದೇವರು ಅವರನ್ನು ಕ್ಷಮಿಸುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಪಾಪ ಪರಿಹಾರದ ಬಲಿಗಾಗಿ ಇರುವ ಆ ಹೋರಿಗೆ ಮಾಡಿದಂತೆಯೇ, ಈ ಹೋರಿಗೂ ಮಾಡಬೇಕು. ಇದಲ್ಲದೆ ಯಾಜಕನು ಅವರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು, ಆಗ ಅವರಿಗೆ ಕ್ಷಮಾಪಣೆಯಾಗುವುದು. ಅಧ್ಯಾಯವನ್ನು ನೋಡಿ |
ಅಧರ್ಮವನ್ನು ಕೊನೆಗಾಣಿಸುವದು, ಪಾಪಗಳನ್ನು ತೀರಿಸುವದು, ಅಪರಾಧವನ್ನು ನಿವಾರಿಸುವದು, ಸನಾತನ ಧರ್ಮವನ್ನು ಸ್ಥಾಪಿಸುವದು, ಕನಸನ್ನೂ ಪ್ರವಾದಿಯ ನುಡಿಯನ್ನೂ ಮುದ್ರೆಹಾಕಿ ಯಥಾರ್ಥಮಾಡುವದು, ಅತಿಪರಿಶುದ್ಧವಾದದ್ದನ್ನು ಅಭಿಷೇಕಿಸುವದು, ಇವೆಲ್ಲಾ ನೆರವೇರುವದಕ್ಕೆ ಮೊದಲು ನಿನ್ನ ಜನಕ್ಕೂ ನಿನ್ನ ಪರಿಶುದ್ಧಪುರಕ್ಕೂ ಎಪ್ಪತ್ತು ವಾರಗಳು ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.