Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 26:31 - ಕನ್ನಡ ಸತ್ಯವೇದವು J.V. (BSI)

31 ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು. ನಿಮ್ಮ ದೇವಸ್ಥಾನಗಳನ್ನು ನಾಶಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಸುವಾಸನೆಯನ್ನು ನಾನು ಮೂಸಿನೋಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು. ನಿಮ್ಮ ದೇವಸ್ಥಾನಗಳನ್ನು ನಾಶಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಪರಿಮಳವನ್ನು ನಾನು ಮೂಸಿಯೂ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ನಿಮ್ಮ ಪಟ್ಟಣಗಳನ್ನು ಹಾಳುಮಾಡುವೆನು; ನಿಮ್ಮ ದೇವಸ್ಥಾನಗಳನ್ನು ನೆಲಸಮ ಮಾಡುವೆನು; ನೀವು ಸಮರ್ಪಿಸುವ ಸುಗಂಧದ್ರವ್ಯಗಳ ಸುವಾಸನೆಯನ್ನು ನಾನು ಮೂಸಿಯೂ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ನಾನು ನಿಮ್ಮ ಪಟ್ಟಣಗಳನ್ನು ನಾಶಮಾಡುವೆ. ನಿಮ್ಮ ಪವಿತ್ರಸ್ಥಳಗಳನ್ನು ಬರಿದುಮಾಡುವೆ. ನಿಮ್ಮ ಯಜ್ಞಗಳ ಸುವಾಸನೆಯನ್ನು ನಾನು ಮೂಸಿ ನೋಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ನಿಮ್ಮ ಪಟ್ಟಣಗಳನ್ನು ನಾನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳು ಮಾಡಿ, ನಿಮ್ಮ ಸುವಾಸನೆಗಳನ್ನು ಮೂಸಿ ನೋಡದೆ ಇರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 26:31
45 ತಿಳಿವುಗಳ ಹೋಲಿಕೆ  

ನಾನು ಅರಸನಿಗೆ - ಅರಸನು ಚಿರಂಜೀವಿಯಾಗಿರಲಿ. ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ ಅದರ ಬಾಗಲುಗಳು ಬೆಂಕಿಯಿಂದ ಸುಟ್ಟು ಹೋಗಿವೆ; ಹೀಗಿರುವಲ್ಲಿ ನನ್ನ ಮುಖವು ಕಳೆಗುಂದದೆ ಇರುವದು ಹೇಗೆ ಎಂದು ಹೇಳಿದೆನು.


ಯಾಕಂದರೆ ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ;


ವೃದ್ಧ, ಯುವಕ, ಯುವತಿ, ಸ್ತ್ರೀ, ಬಾಲಕ ಎನ್ನದೆ ಸಕಲರನ್ನೂ ಸಂಹಾರಮಾಡಿಬಿಡಿರಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿರಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿರಿ ಎಂಬದಾಗಿ ಆತನು ನನಗೆ ಕೇಳಿಸುವಂತೆ ಅಪ್ಪಣೆಮಾಡಿದನು. ಆಗ ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.


ಕರ್ತನು ತನ್ನ ಯಜ್ಞವೇದಿಯನ್ನು ತಿರಸ್ಕರಿಸಿ ತನ್ನ ಪವಿತ್ರಾಲಯಕ್ಕೆ ಅಸಹ್ಯಪಟ್ಟು ಚೀಯೋನಿನ ಅರಮನೆಗಳ ಗೋಡೆಗಳನ್ನು ಶತ್ರು ವಶಮಾಡಿದ್ದಾನೆ; ಉತ್ಸವದಿನದಲ್ಲಿ ಘೋಷಿಸುವಂತೆ ಶತ್ರುಗಳು ಯೆಹೋವನ ಮಂದಿರದಲ್ಲಿ ಜಯಘೋಷವೆತ್ತಿದ್ದಾರೆ.


ವಿರೋಧಿಯು ಕೈಚಾಚಿ ಅವಳ ಭೋಗ್ಯ ವಸ್ತುಗಳನ್ನೆಲ್ಲಾ ಬಾಚಿಬಿಟ್ಟನು; ಮ್ಲೇಚ್ಫರು ನಿನ್ನ ಸಭೆಗೆ ಸೇರಬಾರದು ಎಂದು ನೀನು ಆಜ್ಞಾಪಿಸಿದರೂ ಅಂಥವರೇ ತನ್ನಲ್ಲಿನ ಪವಿತ್ರಾಲಯದೊಳಗೆ ಸೇರುವದನ್ನು ಆಕೆಯು ಕಾಣಬೇಕಾಯಿತು.


ಜನಾಂಗಘಾತುಕವಾದ ಒಂದು ಸಿಂಹವು ತನ್ನ ಪೊದೆಯೊಳಗಿಂದ ಎದ್ದಿದೆ; ಹೊರಟಿದೆ, ಸ್ಥಳದಿಂದ ತೆರಳಿದೆ; ನಿನ್ನ ದೇಶವನ್ನು ಹಾಳುಮಾಡುವದು, ನಿನ್ನ ಪಟ್ಟಣಗಳು ಪಾಳುಬಿದ್ದು ನಿರ್ನಿವಾಸಿಗಳಾಗುವವು.


ಆ ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆ ನಮಗೆ ನೇವಿುಸಿರುವ ಆಚಾರಗಳನ್ನು ಬೇರೆ ಮಾಡುವನೆಂಬದಾಗಿ ಇವನು ಹೇಳುವದನ್ನು ನಾವು ಕೇಳಿದ್ದೇವೆ ಅಂದರು.


ಅವರು ಕತ್ತಿಯ ಬಾಯಿಗೆ ಬೀಳುವರು; ಅವರನ್ನು ಅನ್ಯದೇಶಗಳಿಗೆಲ್ಲಾ ಸೆರೆಹಿಡಿದುಕೊಂಡು ಹೋಗುವರು; ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು.


ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಗೇಯಲ್ಪಡುವದು, ಯೆರೂಸಲೇಮು ಹಾಳುದಿಬ್ಬಗಳಾಗುವದು, ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವದು.


ಇಸ್ರಾಯೇಲ್ ವಂಶದವರಿಗೆ ಹೀಗೆ ಸಾರು - ಹಾ, ನಿಮಗೆ ಮುಖ್ಯಬಲವೂ ನೇತ್ರಾನಂದವೂ ಪ್ರಾಣಪ್ರಿಯವೂ ಆದ ನನ್ನ ಪವಿತ್ರಾಲಯವನ್ನು ನಾನು ಹೊಲೆಮಾಡಿಸುವೆನು. ನೀವು ಬಿಟ್ಟುಬಂದಿರುವ ನಿಮ್ಮ ಗಂಡುಹೆಣ್ಣುಮಕ್ಕಳು ಖಡ್ಗಕ್ಕೆ ತುತ್ತಾಗುವರು ಎಂಬದಾಗಿ ಕರ್ತನಾದ ಯೆಹೋವನು ನುಡಿದಿದ್ದಾನೆ.


ಅವರ ಹೃದಯವು ನೀರಾಗಿ ಬಹುಜನ ಎಡವಿಬೀಳುವಂತೆ ಸಂಹರಿಸುವ ಖಡ್ಗವನ್ನು ಅವರ ಪುರದ್ವಾರಗಳಿಗೆಲ್ಲಾ ತಂದಿದ್ದೇನೆ. ಆಹಾ, ವಿುಂಚಿನಂತೆ ವಿುಂಚುತ್ತದೆ, ವಧೆಗಾಗಿ ಉಜ್ಜಿದೆ!


ಏಕೆ ನರಳಾಡುತ್ತೀ ಎಂದು ಅವರು ನಿನ್ನನ್ನು ಕೇಳಲು ನೀನು ಅವರಿಗೆ - ದುರ್ವಾರ್ತೆಯ ನಿವಿುತ್ತ ನರಳುತ್ತೇನೆ; ಇಗೋ, ವಿಪತ್ತು ಬಂತು; ಎಲ್ಲರ ಹೃದಯವು ಕರಗಿ ನೀರಾಗುವದು; ಎಲ್ಲರ ಕೈ ಜೋಲು ಬೀಳುವದು, ಎಲ್ಲರ ಮನಸ್ಸು ಕುಂದುವದು, ಎಲ್ಲರ ಮೊಣಕಾಲು ನೀರಿನಂತೆ ಚಂಚಲವಾಗುವದು; ಇಗೋ, ಬಂತು, ಆಯಿತು; ಇದು ಕರ್ತನಾದ ಯೆಹೋವನ ನುಡಿ ಎಂದು ಉತ್ತರಕೊಡು.


ನೀವು ವಾಸಿಸುವ ದೇಶದಲ್ಲೆಲ್ಲಾ ಊರುಗಳು ಹಾಳಾಗುವದರಿಂದಲೂ ಪೂಜಾಸ್ಥಳಗಳು ಪಾಳು ಬೀಳುವದರಿಂದಲೂ ನಿಮ್ಮ ಯಜ್ಞವೇದಿಗಳು ಹಾಳುಪಾಳಾಗುವವು, ನಿಮ್ಮ ಬೊಂಬೆಗಳು ಒಡೆಯಲ್ಪಟ್ಟು ಇಲ್ಲವಾಗುವವು, ನಿಮ್ಮಸೂರ್ಯಸ್ತಂಭಗಳು ಕಡಿಯಲ್ಪಡುವವು, ನೀವು ರೂಪಿಸಿದ ವಿಗ್ರಹಗಳು ಅಳಿದುಹೋಗುವವು,


ಅಯ್ಯೋ, ಜನಭರಿತವಾಗಿದ್ದ ನಗರಿಯು ಒಂಟಿಯಾಗಿ ಕೂತು ಬಿಟ್ಟಳಲ್ಲಾ! ಜನಾಂಗಗಳಲ್ಲಿ ರತ್ನವಾಗಿದ್ದವಳು ವಿಧವೆಯಾದಳು, ಸಂಸ್ಥಾನಗಳಲ್ಲಿ ಶಿರೋಮಣಿಯಾಗಿದ್ದವಳು ಬಿಟ್ಟಿಯಾಳಾದಳು.


ಯೆಹೋವನ ಆಲಯವನ್ನೂ ಅರಮನೆಯನ್ನೂ ಯೆರೂಸಲೇವಿುನ ಎಲ್ಲಾ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.


ನೀನು ಯೆಹೋವನ ಹೆಸರೆತ್ತಿ ಪ್ರವಾದಿಸುತ್ತಾ - ಈ ಆಲಯವು ಶಿಲೋವಿನ ಗತಿಗೆ ಬರುವದು, ಈ ಪಟ್ಟಣವು ಒಕ್ಕಲಿಲ್ಲದೆ ಹಾಳುಬೀಳುವದು ಎಂದು ಏಕೆ ನುಡಿದೆ ಅಂದರು. ಆಗ ಯೆಹೋವನ ಆಲಯದಲ್ಲಿ ಎಲ್ಲಾ ಜನರು ಯೆರೆಮೀಯನ ಸುತ್ತಲು ಸುತ್ತಿಕೊಂಡಿದ್ದರು.


ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ತಂದು ಈ ಪಟ್ಟಣವು ಲೋಕದ ಸಮಸ್ತಜನಾಂಗಗಳಲ್ಲಿ ಶಾಪದ ಮಾತಾಗುವಂತೆ ಮಾಡುವೆನು.


ನೀವು ಈ ಮಾತುಗಳನ್ನು ಕೇಳದಿದ್ದರೆ ಈ ಅರಮನೆಯು ಹಾಳುಬೀಳುವದು ಎಂದು ನನ್ನ ಮೇಲೆ ಆಣೆಯಿಡುತ್ತೇನೆ. ಇದು ಯೆಹೋವನ ನುಡಿ.


ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಗೈದು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂವಿುಯನ್ನಾಗಿ ಮಾಡುವೆನು [ಎಂದು ಯೆಹೋವನು ಹೇಳಿದ್ದಾನಲ್ಲಾ].


ಹೋರಿಯನ್ನು ವಧಿಸುವವನು ನರಬಲಿಯನ್ನು ಕೊಡುತ್ತಾನೆ; ಕುರಿಯನ್ನು ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ; ನೈವೇದ್ಯಮಾಡುವವನು ಹಂದಿಯ ರಕ್ತವನ್ನು ಅರ್ಪಿಸುತ್ತಾನೆ; ಧೂಪಹಾಕುವವನು ವಿಗ್ರಹಾರಾಧನೆ ಮಾಡುತ್ತಾನೆ; ಇವರು ಮನಸ್ಸಿಗೆ ಬಂದ ಮಾರ್ಗಗಳನ್ನು ಆರಿಸಿಕೊಂಡು ತಮ್ಮ ಅಸಹ್ಯಕಾರ್ಯಗಳಲ್ಲಿ ಮನಃಪೂರ್ವಕವಾಗಿ ಆನಂದಿಸುತ್ತಾರೆ;


ನಿಮ್ಮ ದೇಶವು ಹಾಳಾಗಿದೆ; ನಿಮ್ಮ ಪಟ್ಟಣಗಳು ಸುಟ್ಟು ಹೋಗಿವೆ; ನಿಮ್ಮ ಭೂವಿುಯನ್ನು ಅನ್ಯರು ನಿಮ್ಮೆದುರಿಗೆ ನುಂಗಿಬಿಡುತ್ತಿದ್ದಾರೆ; ಅನ್ಯದೇಶಗಳು ನಾಶನವಾದಂತೆಯೇ ನಿಮ್ಮ ಭೂವಿುಯೂ ಹಾಳಾಯಿತು.


ಆಗ ನಾನು ಅವರಿಗೆ - ನಮ್ಮ ದುರವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೋ; ಯೆರೂಸಲೇಮ್ ಪಟ್ಟಣವು ಹಾಳುಬಿದ್ದದೆ, ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ; ಬನ್ನಿರಿ, ಯೆರೂಸಲೇವಿುನ ಗೋಡೆಯನ್ನು ಕಟ್ಟೋಣ. ಹೀಗೆ ಮಾಡಿದರೆ ನಮ್ಮ ಮೇಲಣ ನಿಂದೆಯು ಹೋಗುವದು ಎಂದು ಹೇಳಿದೆನು.


[ಅವನ ಜನರು] ಯೆರೂಸಲೇವಿುನ ಪೌಳಿಗೋಡೆಗಳನ್ನು ಕೆಡವಿ ಅವರ ಎಲ್ಲಾ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟುಬಿಟ್ಟು ಅಮೂಲ್ಯ ವಸ್ತುಗಳನ್ನು ನಾಶಮಾಡಿದರು.


ಅದರ ಸುವಾಸನೆಯು ಯೆಹೋವನಿಗೆ ಗಮಗವಿುಸಲು ಆತನು ಹೃದಯದೊಳಗೆ - ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು; ಆದರೂ ನಾನು ಇನ್ನು ಮೇಲೆ ಅವರ ನಿವಿುತ್ತವಾಗಿ ಭೂವಿುಯನ್ನು ಶಪಿಸುವದಿಲ್ಲ; ನಾನು ಎಲ್ಲಾ ಜೀವಿಗಳನ್ನೂ ಈಗ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವದಿಲ್ಲ.


ನಾನು ಈ ದೇಶವನ್ನೂ ನಿವಾಸಿಗಳನ್ನೂ ಶಾಪ ವಿಸ್ಮಯಗಳಿಗೆ ಗುರಿಮಾಡುವೆನೆಂಬದನ್ನು ನೀನು ಕೇಳಿದಾಗ ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.


ಅದಕ್ಕೆ ನಾನು - ಕರ್ತನೇ, ಇದು ಎಂದಿನ ತನಕ? ಎಂದು ಕೇಳಲು ಆತನು - ಯೆಹೋವನು ಜನರನ್ನು ದೂರ ತೊಲಗಿಸಿ


ನಿನ್ನ ಸ್ವಕೀಯಜನರು ಸ್ವಲ್ಪಕಾಲ ಮಾತ್ರ [ನಿನ್ನ ಸ್ವಾಸ್ತ್ಯವನ್ನು] ಅನುಭವಿಸುತ್ತಿದ್ದರು; ಈಗ ನಮ್ಮ ವೈರಿಗಳು ನಿನ್ನ ಪವಿತ್ರಾಲಯವನ್ನು ತುಳಿದುಬಿಟ್ಟಿದ್ದಾರೆ.


ಇಸ್ರಾಯೇಲಿನ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನಾನು ಯೆರೂಸಲೇವಿುಗೂ ಯೆಹೂದದ ಎಲ್ಲಾ ಊರುಗಳಿಗೂ ಬರಮಾಡಿದ ಕೇಡನ್ನು ನೀವು ನೋಡಿದ್ದೀರಷ್ಟೆ;


ಆದಕಾರಣ ನನ್ನ ಉಗ್ರರೋಷಾಗ್ನಿಯು ಸುರಿದು ಯೆಹೂದದ ಊರುಗಳಲ್ಲಿಯೂ ಯೆರೂಸಲೇವಿುನ ಬೀದಿಗಳಲ್ಲಿಯೂ ಧಗಧಗಿಸಿತು; ಅವು ಈಗಲೂ ಹಾಳುಹಾಳಾಗಿವೆ.


ಆಗ ರಾಜನಾದ ನೆಬೂಕದ್ನೆಚ್ಚರನು ಅಡ್ಡಬಿದ್ದು ದಾನಿಯೇಲನನ್ನು ಪೂಜಿಸಿ ಅವನಿಗೆ ನೈವೇದ್ಯ ಮಾಡಿ ಧೂಪಹಾಕಬೇಕೆಂದು ಆಜ್ಞಾಪಿಸಿ


ಇಸಾಕನ ವಂಶದವರ ಪೂಜಾಸ್ಥಳಗಳು ಹಾಳಾಗುವವು, ಇಸ್ರಾಯೇಲಿನ ಪವಿತ್ರಾಲಯಗಳು ಬೀಡುಬೀಳುವವು; ನಾನು ಕತ್ತಿಹಿರಿದು ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು ಅಂದನು.


[ಯೆಹೋವನು ಇಂತೆನ್ನುತ್ತಾನೆ - ] ನಾನು ಜನಾಂಗಗಳನ್ನು ಧ್ವಂಸಪಡಿಸಿದ್ದೇನೆ, ಅವುಗಳ ಕೊತ್ತಲಗಳು ಪಾಳುಬಿದ್ದವು, ಅವುಗಳ ಬೀದಿಗಳನ್ನು ಹಾಳುಮಾಡಿದ್ದೇನೆ, ಯಾರೂ ಹಾದುಹೋಗರು; ಅವುಗಳ ಪಟ್ಟಣಗಳು ನಾಶವಾದವು, ಜನರೇ ಇಲ್ಲ, ನಿರ್ನಿವಾಸವಾಗಿವೆ.


ಅವರು ನನಗೆ - ಸೆರೆಯವರೊಳಗೆ ತಪ್ಪಿಸಿಕೊಂಡು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇವಿುನ ಪೌಳಿಗೋಡೆಯು ಕೆಡವಲ್ಪಟ್ಟಿರುತ್ತದೆ; ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ ಎಂದು ಹೇಳಿದರು.


ಯೆಹೋವನೇ, ಅತಿರೋಷಗೊಳ್ಳದಿರು, ನಮ್ಮ ಅಧರ್ಮವನ್ನು ಕಡೆಯವರೆಗೂ ಜ್ಞಾಪಕದಲ್ಲಿಡಬೇಡ; ಎಲೈ, ಸ್ವಾಮೀ, ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ.


ನಾನು ನೋಡಲಾಗಿ ಫಲವತ್ತಾದ ಭೂವಿುಯು ಕಾಡಾಗಿತ್ತು. ಅಕಟಾ! ಅಲ್ಲಿನ ಊರುಗಳೆಲ್ಲಾ ರೋಷಾಗ್ನಿಯುಕ್ತನಾದ ಯೆಹೋವನ ಪ್ರತ್ಯಕ್ಷತೆಯಿಂದ ಬಿದ್ದು ಹೋಗಿದ್ದವು.


ಯೆಹೋವನು ಹೀಗನ್ನುತ್ತಾನೆ - ದೇಶವೆಲ್ಲಾ ಬಟ್ಟಬರಿದಾಗುವದು, ಆದರೆ ನಾನು ಸಂಪೂರ್ಣವಾಗಿ ಲಯಮಾಡೆನು.


ತನ್ನ ಸಾನ್ನಿಧ್ಯದ ಗುಡಾರವನ್ನು ತೋಟದ ಗುಡಿಸಲನ್ನೋ ಎಂಬಂತೆ ಹಾಳುಮಾಡಿ ತನ್ನ ಉತ್ಸವಸ್ಥಾನವನ್ನು ನಾಶಪಡಿಸಿದ್ದಾನೆ; ಮಹೋತ್ಸವಗಳು ಮತ್ತು ಸಬ್ಬತ್ ದಿನಗಳು ಚೀಯೋನಿನಲ್ಲಿ ಯಾರ ನೆನಪಿಗೂ ಬಾರದಂತೆ ಮಾಡಿ ಯೆಹೋವನು ಅತಿರೋಷಗೊಂಡು ರಾಜನನ್ನೂ ಯಾಜಕನನ್ನೂ ಧಿಕ್ಕರಿಸಿದ್ದಾನೆ.


ಆಗ ಜನ ತುಂಬಿದ ಊರುಗಳು ಹಾಳಾಗಿ ದೇಶವು ಬೀಡುಬೀಳುವದು; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು