Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 18:17 - ಕನ್ನಡ ಸತ್ಯವೇದವು J.V. (BSI)

17 ಒಬ್ಬ ಸ್ತ್ರೀಯನ್ನು ಮದುವೆಮಾಡಿಕೊಂಡರೆ ಆಕೆಯ ಮಗಳನ್ನಾಗಲಿ ಮೊಮ್ಮಗಳನ್ನಾಗಲಿ ಸಂಗವಿುಸಬಾರದು; ಅವರು ರಕ್ತಸಂಬಂಧಿಗಳಾದದರಿಂದ ಅದು ದುಷ್ಕಾರ್ಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಒಬ್ಬ ಸ್ತ್ರೀಯನ್ನು ಮದುವೆಮಾಡಿಕೊಂಡರೆ ಆಕೆಯ ಮಗಳನ್ನಾಗಲಿ ಇಲ್ಲವೇ ಮೊಮ್ಮಗಳನ್ನಾಗಲಿ ಸಂಗಮಿಸಬಾರದು; ಅವರು ರಕ್ತಸಂಬಂಧಿಗಳಾದುದರಿಂದ ಅದು ದುಷ್ಟ ಕಾರ್ಯವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 “ಮದುವೆ ಮಾಡಿಕೊಂಡವಳ ಮಗಳನ್ನಾಗಲಿ ಮೊಮ್ಮಗಳನ್ನಾಗಲಿ ಸಂಗಮಿಸಬಾರದು. ಅವರು ರಕ್ತಸಂಬಂಧಿಗಳು, ಅದು ಅಧರ್ಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ಒಬ್ಬ ಸ್ತ್ರೀಯೊಡನೆಯೂ ಆಕೆಯ ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಆ ಸ್ತ್ರೀಯ ಮೊಮ್ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಈ ಮೊಮ್ಮಗಳು ಈ ಸ್ತ್ರೀಯ ಮಗನ ಅಥವಾ ಮಗಳ ಮಗಳಾಗಿರಬಹುದು. ಆಕೆಯ ಮೊಮ್ಮಕ್ಕಳಾದ ಹೆಣ್ಣುಮಕ್ಕಳು ಆಕೆಯ ಹತ್ತಿರದ ಸಂಬಂಧಿಕರಾಗಿದ್ದಾರೆ. ಆಕೆಯೊಡನೆ ಲೈಂಗಿಕ ಸಂಬಂಧ ಮಾಡುವುದು ತಪ್ಪು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 “ ‘ಸ್ತ್ರೀಯೊಂದಿಗೂ, ಆಕೆಯ ಮಗಳೊಂದಿಗೂ ಒಟ್ಟಿಗೆ ಲೈಂಗಿಕ ಸಂಪರ್ಕ ಬೇಡ. ಆಕೆಯ ಮಗನ ಮಗಳೊಂದಿಗಾದರೂ, ಮಗಳ ಮಗಳೊಂದಿಗಾದರೂ ಲೈಂಗಿಕ ಸಂಪರ್ಕ ಬೇಡ. ಅವರು ಆಕೆಯ ಹತ್ತಿರ ಸಂಬಂಧಿಗಳು. ಅದು ದುಷ್ಟತನ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 18:17
4 ತಿಳಿವುಗಳ ಹೋಲಿಕೆ  

ಯಾವನಾದರೂ ಒಬ್ಬ ಸ್ತ್ರೀಯನ್ನೂ ಅವಳ ತಾಯಿಯನ್ನೂ ಇಟ್ಟುಕೊಂಡರೆ ಅದು ಅತಿದುಷ್ಟಕಾರ್ಯವಾದದರಿಂದ ಆ ಮೂರು ಮಂದಿಯನ್ನೂ ಬೆಂಕಿಯಿಂದ ಸುಡಿಸಿಬಿಡಬೇಕು; ಅಂಥ ದುರಾಚಾರವು ನಿಮ್ಮಲ್ಲಿ ಎಷ್ಟುಮಾತ್ರವೂ ನಡೆಯಬಾರದು.


ಬಡವನು ತಲೆಯ [ಮೇಲೆ ಎರಚಿಕೊಂಡ] ನೆಲದ ದೂಳನ್ನೂ ಆತುರವಾಗಿ ಆಶಿಸುತ್ತಾರೆ; ದೀನರ ದಾರಿಗೆ ಅಡ್ಡಿಹಾಕುತ್ತಾರೆ; ಮಗನೂ ತಂದೆಯೂ ಒಬ್ಬಳಲ್ಲೇ ಹೋಗಿ ನನ್ನ ಪವಿತ್ರನಾಮವನ್ನು ಅಪಕೀರ್ತಿಗೆ ಗುರಿಮಾಡುತ್ತಾರೆ;


ಅವರು - ಅತ್ತೆಯನ್ನು ಸಂಗವಿುಸಿದವನು ಶಾಪಗ್ರಸ್ತ ಎನ್ನಲಾಗಿ ಜನರೆಲ್ಲರೂ - ಹೌದು ಅನ್ನಬೇಕು.


ಹೆಂಡತಿ ಜೀವದಿಂದಿರುವಾಗಲೇ ಆಕೆಯ ಒಡಹುಟ್ಟಿದವಳನ್ನೂ ಮದುವೆಮಾಡಿಕೊಂಡು ಹೆಂಡತಿಗೆ ಮನಸ್ತಾಪವನ್ನುಂಟುಮಾಡಬಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು