ಯಾಜಕಕಾಂಡ 14:4 - ಕನ್ನಡ ಸತ್ಯವೇದವು J.V. (BSI)4 ಆಗ ಅವನಲ್ಲಿದ್ದ ಕುಷ್ಠವು ವಾಸಿಯಾಯಿತೆಂದು ಕಂಡರೆ ಶುದ್ಧ ಮಾಡಿಸಿಕೊಳ್ಳುವವನಿಗೋಸ್ಕರ ಸಜೀವವಾದ ಎರಡು ಶುದ್ಧ ಪಕ್ಷಿಗಳನ್ನೂ ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್‍ಗಿಡದ ಬರಲನ್ನೂ ತರಬೇಕೆಂದು ಯಾಜಕನು ಆಜ್ಞಾಪಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ವಾಸಿಯಾಗಿದೆ ಎಂದು ಕಂಡು ಬಂದರೆ ಶುದ್ಧ ಮಾಡಿಸಿಕೊಳ್ಳುವವನಿಗಾಗಿ ಸಜೀವವಾದ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನು, ದೇವದಾರಿನ ಕಟ್ಟಿಗೆಯನ್ನು, ರಕ್ತವರ್ಣವುಳ್ಳ ದಾರವನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತರಬೇಕೆಂದು ಯಾಜಕನು ಆಜ್ಞಾಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಶುದ್ಧಮಾಡಿಸಿಕೊಳ್ಳುವವನ ಪರವಾಗಿ ಸಜೀವವಾದ ಎರಡು ಶುದ್ಧಪಕ್ಷಿಗಳನ್ನೂ ದೇವದಾರಿನ ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪ್ ಗಿಡದ ಬರಲನ್ನೂ ತರಬೇಕೆಂದು ಯಾಜಕನು ಆಜ್ಞಾಪಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಆ ವ್ಯಕ್ತಿಯು ಆರೋಗ್ಯವಂತನಾಗಿದ್ದರೆ, ಆಗ ಯಾಜಕನು ಈ ಸಂಗತಿಗಳನ್ನು ಮಾಡುವುದಕ್ಕೆ ಅವನಿಗೆ ಹೇಳುವನು. ಆ ವ್ಯಕ್ತಿಯು ಎರಡು ಜೀವಂತವಾದ ಶುದ್ಧ ಪಕ್ಷಿಗಳನ್ನು ತರಬೇಕು. ಅಲ್ಲದೆ, ಅವನು ದೇವದಾರುಮರದ ತುಂಡನ್ನು, ಕೆಂಪು ಬಣ್ಣದ ಬಟ್ಟೆಯ ತುಂಡನ್ನು ಮತ್ತು ಹಿಸ್ಸೋಪ್ ಗಿಡದ ಬರಲನ್ನು ತರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಆಗ ಶುದ್ಧಮಾಡಿಕೊಳ್ಳುವವನಿಗೋಸ್ಕರ ಜೀವವುಳ್ಳ ಮತ್ತು ಶುದ್ಧವಾದ ಎರಡು ಪಕ್ಷಿಗಳನ್ನೂ, ದೇವದಾರು ಕಟ್ಟಿಗೆಯನ್ನೂ, ರಕ್ತವರ್ಣದ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳುವಂತೆ ಯಾಜಕನು ಆಜ್ಞಾಪಿಸಬೇಕು. ಅಧ್ಯಾಯವನ್ನು ನೋಡಿ |