Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 14:35 - ಕನ್ನಡ ಸತ್ಯವೇದವು J.V. (BSI)

35 ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು - ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಉಂಟಾದಂತೆ ತೋರುತ್ತದೆ ಎಂದು ಅವನಿಗೆ ತಿಳಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಉಂಟಾದಂತೆ ತೋರುತ್ತದೆ’ ಎಂದು ಅವನಿಗೆ ತಿಳಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಆ ಮನೆಯ ಒಡೆಯನು ಯಾಜಕನ ಬಳಿಗೆ ಬಂದು - “ನನ್ನ ಮನೆಯಲ್ಲಿ ಕುಷ್ಠರೋಗದ ಗುರುತು ಇರುವಂತೆ ತೋರುತ್ತದೆ,” ಎಂದು ಅವನಿಗೆ ತಿಳಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಆ ಮನೆಯ ಯಾಜಮಾನನು ಬಂದು, ‘ನನ್ನ ಮನೆಯಲ್ಲಿ ಬೂಷ್ಟು ಬಂದಿದೆ’ ಎಂದು ಯಾಜಕನಿಗೆ ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಮನೆಯವನು ಯಾಜಕನ ಬಳಿಗೆ ಬಂದು, ‘ನನ್ನ ಮನೆಯಲ್ಲಿ ಬೂಜಿನ ಗುರುತಿದ್ದಂತೆ ಕಾಣುತ್ತಿದೆ,’ ಎಂದು ಹೇಳಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 14:35
8 ತಿಳಿವುಗಳ ಹೋಲಿಕೆ  

ಯಾವ ಕೇಡೂ ನಿನಗೆ ಸಂಭವಿಸದು; ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು.


ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನನ್ನ ಅಪ್ಪಣೆಯಂತೆ ಇದು ಹೊರಟು ಕಳ್ಳನ ಮನೆಯೊಳಗೂ ನನ್ನ ಹೆಸರೆತ್ತಿ ಸುಳ್ಳುಸಾಕ್ಷಿ ಹೇಳುವವನ ಮನೆಯೊಳಗೂ ನುಗ್ಗಿ ನಟ್ಟನಡುವೆ ನೆಲೆಗೊಂಡು ಅದನ್ನು ಕಲ್ಲುಮರ ಸಹಿತವಾಗಿ ನಾಶಮಾಡುವದು ಎಂದು ಹೇಳಿದನು.


ಅದು ಕೇವಲ ಯೆಹೋವನದಾಗುವದಕ್ಕೆ ನಾಶವಾಗತಕ್ಕದ್ದಾಗಿರುವದರಿಂದ ನೀವು ಅಂಥ ವಸ್ತುವನ್ನು ಮನೆಯೊಳಕ್ಕೆ ತಂದು ಅದರಂತೆಯೇ ನಾಶಕ್ಕೆ ಗುರಿಯಾಗಬಾರದು. ನೀವು ಅದನ್ನು ಅಸಹ್ಯಪಟ್ಟು ಮುಟ್ಟದಿರಬೇಕು.


ಯೆಹೋವನು ದುಷ್ಟನ ಮನೆಯನ್ನು ಶಪಿಸುವನು, ನೀತಿವಂತರ ನಿವಾಸವನ್ನೋ ಆಶೀರ್ವದಿಸುವನು.


ಈ ಕಾರಣದಿಂದ ಯಾರೊಬ್ಬಾಮನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ತೆಗೆದುಹಾಕಲ್ಪಟ್ಟು ನಿರ್ನಾಮವಾದರು.


ಯಾಜಕನು ತಾನು ಆ ರೋಗದ ಗುರುತನ್ನು ನೋಡಲು ಬರುವದಕ್ಕೆ ಮುಂಚೆ ಆ ಮನೆಯನ್ನು ಬರಿದುಮಾಡಲಾಜ್ಞಾಪಿಸಬೇಕು. ಹಾಗೆ ಬರಿದುಮಾಡದಿದ್ದರೆ ಆ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ಅಶುದ್ಧವಾದಾವು. ಬರಿದುಮಾಡಿದ ಮೇಲೆ ಯಾಜಕನು ಆ ಮನೆಯನ್ನು ನೋಡುವದಕ್ಕೆ ಒಳಗೆ ಹೋಗಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು