ಯಾಜಕಕಾಂಡ 13:31 - ಕನ್ನಡ ಸತ್ಯವೇದವು J.V. (BSI)31 ಯಾಜಕನು ಆ ದದ್ದನ್ನು ನೋಡುವಾಗ ಅದು ವಿುಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದಾಗ್ಯೂ ಅದು ಇರುವ ಕಡೆ ಕರೇಕೂದಲು ಇಲ್ಲದಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201931 ಯಾಜಕನು ಆ ಗಾಯವನ್ನು ನೋಡುವಾಗ ಅದು ಬೇರೆ ಚರ್ಮಕ್ಕಿಂತ ಆಳವಾಗಿ ಕಾಣದೆ ಹೋದಾಗ್ಯೂ, ಅದು ಇರುವ ಭಾಗದಲ್ಲಿ ಕಪ್ಪು ಕೂದಲು ಇಲ್ಲದಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)31 ಯಾಜಕನು ಆ ಇಸಬನ್ನು ನೋಡುವಾಗ ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದಾಗ್ಯೂ ಅದು ಇರುವ ಕಡೆ ಕರೇಕೂದಲು ಇಲ್ಲದಿದ್ದರೆ ಯಾಜಕರು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್31 ರೋಗವು ಚರ್ಮಕ್ಕಿಂತ ತಗ್ಗಾಗಿಲ್ಲವೆಂದು ಕಂಡುಬಂದರೂ ಅದರಲ್ಲಿ ಕಪ್ಪಾದ ಕೂದಲು ಇಲ್ಲದ್ದಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ31 ಯಾಜಕನು ಆ ಇಸಬಿನ ವ್ಯಾಧಿಯನ್ನು ನೋಡಿದಾಗ, ಅದು ಉಳಿದ ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪುಕೂದಲು ಇರದಿದ್ದರೆ, ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಬೇಕು. ಅಧ್ಯಾಯವನ್ನು ನೋಡಿ |