Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಕೋಬನು 5:4 - ಕನ್ನಡ ಸತ್ಯವೇದವು J.V. (BSI)

4 ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಅಗೋ, ಆ ಕೂಲಿ ನಿಮ್ಮ ಮೇಲೆ ಕೂಗಿಕೊಳ್ಳುತ್ತದೆ; ಮತ್ತು ಕೊಯಿದವರ ಕೂಗು ಸಕಲಸೇನಾಧಿಪತಿಯಾಗಿರುವ ಕರ್ತನ ಕಿವಿಗಳಲ್ಲಿ ಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಇಗೋ, ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು ಪೈರು ಕೊಯ್ದದವರ ಕೂಗು ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಇಗೋ ನಿಮ್ಮ ಹೊಲಗಳನ್ನು ಕೊಯಿದವರ ಕೂಲಿಯನ್ನು ನೀವು ಅನ್ಯಾಯವಾಗಿ ಹಿಡಿದುಕೊಂಡಿದ್ದೀರಿ. ಆ ಕೂಲಿ ಕೂಗಿಕೊಳ್ಳುತ್ತದೆ. ಕೊಯಿದವರ ಕೂಗು ಸೈನ್ಯಗಳ ಅಧಿಪತಿ ಆಗಿರುವ ಕರ್ತದೇವರ ಕಿವಿಗಳಲ್ಲಿ ಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

4 ಆಯ್ಕಾ ತುಮ್ಚ್ಯಾ ಸೆತಾತ್ಲಿ ಫೈರಾ ಕಾಪುಕ್ ಮನುನ್ ಯೆಲ್ಲ್ಯಾಂಚಿ ಮಜುರಿ ತುಮಿ ದಿವ್ಕನ್ಯಾಸಿ, ತೆನಿ ಬೊಬ್ ಮಾರುಕ್‌ ಲಾಗ್ಲಾತ್ ಅನಿ ಕಾತ್ರನಿಕ್ ಯೆಲ್ಲ್ಯಾ ಲೊಕಾಂಚಿ ಬೊಬ್ ದೆವಾಚ್ಯಾ ಸಗ್ಳ್ಯಾಚ್ಯಾನ್ಕಿ ಮೊಟ್ಯಾ ಧನಿಯಾಚ್ಯಾ ಕಾನಾರ್ ಪಡ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಕೋಬನು 5:4
23 ತಿಳಿವುಗಳ ಹೋಲಿಕೆ  

ಮತ್ತೊಬ್ಬನನ್ನು ಬಲಾತ್ಕರಿಸಬಾರದು; ಅವನ ಸೊತ್ತನ್ನು ಅಪಹರಿಸಬಾರದು. ಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲಿ ಇಟ್ಟುಕೊಳ್ಳಬಾರದು.


ತನ್ನ ಅರಮನೆಯನ್ನು ದುರ್ನೀತಿಯಿಂದಲೂ ಮಹಡಿಗಳನ್ನು ಅನ್ಯಾಯದಿಂದಲೂ ಕಟ್ಟಿಸಿಕೊಳ್ಳುವವನ ಗತಿಯನ್ನು ಏನು ಹೇಳಲಿ! ಕೂಲಿಕೊಡದೆ ನೆರೆಯವನಿಂದ ಬಿಟ್ಟಿಕೆಲಸವನ್ನು ಮಾಡಿಸಿ -


ಸೇನಾಧೀಶ್ವರನಾದ ಕರ್ತನು ನಮಗೆ ಸಂತಾನವನ್ನು ಉಳಿಸದೆ ಹೋಗಿದ್ದರೆ ಸೊದೋವಿುನ ಗತಿಯೇ ನಮಗಾಗುತ್ತಿತ್ತು, ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು ಎಂದು ಹೇಳುತ್ತಾನೆ.


ನಾನು ನ್ಯಾಯತೀರಿಸುವದಕ್ಕೆ ನಿಮ್ಮ ಬಳಿಗೆ ಬರುವೆನು; ಮಾಟಗಾರ, ಸೂಳೆಗಾರ, ಸುಳ್ಳುಸಾಕ್ಷಿ, ಕೂಲಿಹಿಡಿದು ಕೂಲಿಯವನನ್ನು ಮೋಸಪಡಿಸುವವನು, ವಿಧವೆಯರನ್ನೂ ಅನಾಥರನ್ನೂ ಬಾಧಿಸುವವನು, ವಿದೇಶಿಯ ನ್ಯಾಯತಪ್ಪಿಸುವವನು, ಅಂತು ನನಗಂಜದಿರುವ ಇವರೆಲ್ಲರಿಗೆ ವಿರುದ್ಧವಾಗಿ ನಾನು ಶೀಘ್ರಸಾಕ್ಷಿಯಾಗಿರುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.


ಅವನಿಗೆ ಬೇರೆ ಯಾವ ಹೊದಿಕೆಯಿಲ್ಲವಲ್ಲಾ; ಅದನ್ನೇ ಮೈಗೆ ಕಟ್ಟಿಕೊಳ್ಳಬೇಕು; ಬೇರೆ ಯಾವದನ್ನು ಸುತ್ತಿಕೊಂಡು ಮಲಗಾನು? ಅವನು ನನಗೆ ಮೊರೆಯಿಟ್ಟರೆ ಕೇಳುವೆನು; ನಾನು ದಯಾಪರನೇ.


ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯ ತೀರಿಸುವನೆಂದು ನಿಮಗೆ ಹೇಳುತ್ತೇನೆ.


ಆತನು ಕುಗ್ಗಿದವರ ಮೊರೆಯನ್ನು ಮರೆಯದೆ ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವವನಾಗಿ ಅವರನ್ನು ಜ್ಞಾಪಕಮಾಡಿಕೊಂಡನು.


ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲೈಸಿದ್ದನು.


ಈಗ ಕೇಳು, ಇಸ್ರಾಯೇಲ್ಯರ ಕೂಗು ನನಗೆ ಮುಟ್ಟಿತು; ಐಗುಪ್ತ್ಯರು ಅವರಿಗೆ ಕೊಡುವ ಉಪದ್ರವವನ್ನು ನಾನು ನೋಡಿದ್ದೇನೆ.


ಅದಕ್ಕೆ ಯೆಹೋವನು - ನೀನು ಏನು ಮಾಡಿದಿ? ನಿನ್ನ ತಮ್ಮನ ರಕ್ತವು ಭೂವಿುಯ ಕಡೆಯಿಂದ ನನ್ನನ್ನು ಕೂಗುತ್ತದೆ, ಕೇಳು.


ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರಿಗೆ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡಿರಿ.


ಗೋಡೆಯೊಳಗಿಂದ ಕಲ್ಲು [ನಿನ್ನ ಮೇಲೆ ತಪ್ಪುಹೊರಿಸಿ] ಕೂಗುವದು; [ಚಾವಣಿಯ] ಮರಗಳೊಳಗಿಂದ ತೊಲೆಯು ಹೌದೆನ್ನುವದು.


ಸೇನಾಧೀಶ್ವರನಾದ ಯೆಹೋವನ ದ್ರಾಕ್ಷೆಯ ತೋಟವು ಇಸ್ರಾಯೇಲ್ಯರ ಮನೆತನ, ಯೆಹೂದದ ಜನವೋ ಆತನ ಇಷ್ಟದ ಗಿಡವೇ; ಆತನು ನ್ಯಾಯವನ್ನು ನಿರೀಕ್ಷಿಸಿದಾಗ ಆಹಾ, ಸಿಕ್ಕಿದ್ದು ನರಹತ್ಯವೇ; ಧರ್ಮವನ್ನು ಎದುರುನೋಡಿದಾಗ ಆಹಾ, ದೊರಕಿದ್ದು ಅರಚಾಟವೇ.


ಸೇನಾಧೀಶ್ವರನಾದ ಯೆಹೋವನು ನಮಗೆ ಕೊಂಚ ಜನವನ್ನೂ ಉಳಿಸದೆ ಹೋಗಿದ್ದರೆ ಸೊದೋವಿುನ ಗತಿಯೇ ನಮಗಾಗುತ್ತಿತ್ತು. ಗೊಮೋರದ ದುರ್ದಶೆಯೇ ಸಂಭವಿಸುತ್ತಿತ್ತು.


ನೀವು - ಬಿಡುಗಡೆಯುಂಟಾಗುವ ಏಳನೆಯ ವರುಷವು ಸಮೀಪವಾಯಿತೆಂದು ನೀಚವಾದ ಆಲೋಚನೆಯನ್ನು ಮಾಡಿ ಆ ಬಡ ಸಹೋದರನ ವಿಷಯದಲ್ಲಿ ಮೋರೆ ಕರ್ರಗೆಮಾಡಿಕೊಂಡು ಏನೂ ಕೊಡದೆ ಇರಬಾರದು, ನೋಡಿರಿ. [ಹಾಗೆ ಧಿಕ್ಕರಿಸಿದರೆ] ಅವನು ಒಂದು ವೇಳೆ ನಿಮ್ಮ ವಿಷಯದಲ್ಲಿ ಯೆಹೋವನಿಗೆ ಮೊರೆಯಿಟ್ಟಾನು, ನೀವು ದೋಷಿಗಳಾಗಿ ತೋರಿಬಂದೀರಿ.


ನನ್ನ ಕಿವಿಯಲ್ಲಿ ಸೇನಾಧೀಶ್ವರನಾದ ಯೆಹೋವನ ಒಂದು ಮಾತು ಬಿದ್ದಿತು, ನೋಡಿರಿ - ಸೊಗಸಾದ ಅನೇಕ ದೊಡ್ಡ ಮನೆಗಳು ವಾಸಿಸುವವರೇ ಇಲ್ಲದೆ ಖಂಡಿತವಾಗಿ ಹಾಳಾಗುವವು.


ಆಗ ತನ್ನ ಶಿಷ್ಯರಿಗೆ - ಬೆಳೆಯು ಬಹಳ, ಕೆಲಸದವರು ಸ್ವಲ್ಪ;


ನಾನು ಸಂಜೆಯನ್ನು ಬಯಸುವ ದಾಸನಂತೆಯೂ ಕೂಲಿಯನ್ನು ನಿರೀಕ್ಷಿಸುವ ಆಳಿನಂತೆಯೂ ಇದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು