Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 9:17 - ಕನ್ನಡ ಸತ್ಯವೇದವು J.V. (BSI)

17 ಆ ಗುಂಪಿನಲ್ಲಿ ಒಬ್ಬನು - ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರಕೊಂಡು ಬಂದೆನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಅದಕ್ಕೆ ಆ ಗುಂಪಿನಲ್ಲಿ ಒಬ್ಬನು, “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; ಅವನಿಗೊಂದು ದೆವ್ವ ಹಿಡಿದದೆ ಅದು ಅವನನ್ನು ಮೂಗನನ್ನಾಗಿಸಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಸಮೂಹದಲ್ಲಿದ್ದ ಒಬ್ಬನು, “ಬೋಧಕರೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತೆಗೆದುಕೊಂಡು ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ತನ್ನಾ ತ್ಯಾ ಲೊಕಾನಿತ್ಲ್ಯಾ ಎಕ್ ಮಾನ್ಸಾನ್ “ಗುರುಜಿ,ಮಾಜ್ಯಾ ಲೆಕಾಕ್ ಮಿಯಾ ತುಜೆಕ್ಡೆ ಘೆವ್ನ್ ಯೆಲಾ, ತೆಕಾ ಗಿರೊಲಾಗ್ಲಾ ತೆಕಾ ಬೊಲುಕ್ ಹೊಯ್ನಾ.” ಮನುನ್ ಜೆಜುಕ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 9:17
12 ತಿಳಿವುಗಳ ಹೋಲಿಕೆ  

ಒಂದಾನೊಂದು ಸಮಯದಲ್ಲಿ ಆತನು ಮೂಕ ದೆವ್ವವನ್ನು ಬಿಡಿಸುತ್ತಿದ್ದನು. ಆ ದೆವ್ವವು ಬಿಟ್ಟುಹೋದ ಮೇಲೆ ಮೂಕನು ಮಾತಾಡಿದನು; ಅದಕ್ಕೆ ಜನರು ಆಶ್ಚರ್ಯಪಟ್ಟರು.


ಆಗ ಯೇಸು ಜನರ ಗುಂಪು ಓಡಿಬರುವದನ್ನು ಕಂಡು ಆ ದೆವ್ವವನ್ನು ಗದರಿಸಿ - ಎಲೇ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟುಹೋಗು; ಇನ್ನು ಮುಂದೆ ಹಿಡಿಯಬೇಡವೆಂದು ನಾನು ನಿನಗೆ ಅಪ್ಪಣೆಕೊಡುತ್ತೇನೆ ಅಂದನು.


ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಪ್ರಧಾನನು ಕೇಳಿದಾಗ ತನ್ನ ಮಗನು ಸಾಯುವ ಹಾಗಿದ್ದದರಿಂದ ಯೇಸುವಿನ ಬಳಿಗೆ ಹೋಗಿ - ನೀನು ಇಳಿದು ಬಂದು ನನ್ನ ಮಗನನ್ನು ಸ್ವಸ್ಥಮಾಡಬೇಕೆಂದು ಬೇಡಿಕೊಂಡನು;


ಆಗ ಆ ಗುಂಪಿನಲ್ಲಿ ಒಬ್ಬನು - ಬೋಧಕನೇ, ನನ್ನ ಮಗನ ಮೇಲೆ ದೃಷ್ಟಿಯಿಡಬೇಕು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು. ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ.


ಬಳಿಕ ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು ಶಿಷ್ಯರು ಅವರನ್ನು ಗದರಿಸಿದರು.


ಆಕೆಯ ಮಗಳಿಗೆ ದೆವ್ವ ಹಿಡಿದಿತ್ತು. ಆ ಹೆಂಗಸು ಅನ್ಯಮತದವಳೂ ಸುರೋಪೊಯಿನಿಕ್ಯರವಳೂ ಆಗಿದ್ದಳು.


ನನ್ನ ಚಿಕ್ಕ ಮಗಳು ಈಗ ಸಾಯುತ್ತಾಳೆ; ಆಕೆಯು ವಾಸಿಯಾಗಿ ಬದುಕಿಕೊಳ್ಳುವಂತೆ ನೀನು ಬಂದು ಆಕೆಯ ಮೇಲೆ ಕೈಯಿಡಬೇಕು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.


ಸ್ವಾಮೀ, ನನ್ನ ಮಗನನ್ನು ಕರುಣಿಸು; ಅವನು ಮೂರ್ಛಾರೋಗದಿಂದ ಬಹಳ ಕಷ್ಟಪಡುತ್ತಾನೆ; ಆಗಾಗ್ಗೆ ಬೆಂಕಿಯಲ್ಲಿಯೂ ಆಗಾಗ್ಗೆ ನೀರಿನಲ್ಲಿಯೂ ಬೀಳುತ್ತಿರುವನು.


ದೆವ್ವಹಿಡಿದು ಕುರುಡನೂ ಮೂಕನೂ ಆಗಿರುವ ಒಬ್ಬನನ್ನು ಆತನ ಬಳಿಗೆ ಕರತಂದರು; ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಬಾಯಿ ಕಣ್ಣು ಎರಡೂ ಬಂದವು.


ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಆತನ ಬಳಿಗೆ ಕರತಂದರು.


ಆತನು ಶಾಸ್ತ್ರಿಗಳನ್ನು - ಇವರ ಸಂಗಡ ಏನು ತರ್ಕಮಾಡುತ್ತೀರಿ? ಎಂದು ಕೇಳಿದ್ದಕ್ಕೆ


ಅವನಿಗೊಂದು ಮೂಗದೆವ್ವ ಹಿಡಿದದೆ; ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ಕೆಡವುತ್ತದೆ; ಆಗ ಅವನು ನೊರೆ ಸುರಿಸುತ್ತಾ ಕರಕರನೆ ಹಲ್ಲು ಕಡಿಯುತ್ತಾ ಕುಂದಿ ಹೋಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಹೇಳಿಕೊಂಡೆ; ಅವರ ಕೈಯಿಂದ ಆಗದೆಹೋಯಿತು ಎಂದು ಉತ್ತರ ಕೊಟ್ಟನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು