Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:19 - ಕನ್ನಡ ಸತ್ಯವೇದವು J.V. (BSI)

19 ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ಆತನ ಮುಂದೆ ಮೊಣಕಾಲೂರಿ ಅಡ್ಡಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ನಮಸ್ಕರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಕೋಲಿನಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ, ಮೊಣಕಾಲೂರಿ ಗೌರವಿಸುವಂತೆ ನಟಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಅವರು ಬೆತ್ತದಿಂದ ಯೇಸುವಿನ ತಲೆಯ ಮೇಲೆ ಹೊಡೆದು, ಅವರ ಮೇಲೆ ಉಗುಳಿ ಮೊಣಕಾಲೂರಿ ಅವರಿಗೆ ನಮಸ್ಕರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

19 ತೆನಿ ತೆಚ್ಯಾ ಟಕ್ಲ್ಯಾ ವರ್‍ತಿ ಭೆತ್ತಾಚ್ಯಾ ಖಾಟಿನಿ ಮಾರುನ್, ತೊಂಡಾ ವರ್‍ತಿ ಥುಕುನ್, ಇದ್ರಾಕ್ ಡೊಗ್ಲಾ ಟೆಕುನ್ ತೆಚಿ ತುಜ್ಯಾ ಕರ್ಲ್ಯಾ ಸಾರ್ಕೆ ನಾಟಕ್ ಕರುನ್ ತೆಕಾ ಎಡ್ಸಡುನ್ ದಾಕ್ವುಲಾಗಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:19
32 ತಿಳಿವುಗಳ ಹೋಲಿಕೆ  

ಆಮೇಲೆ ಕೆಲವರು ಆತನನ್ನು ಉಗುಳಿ ಆತನ ಮುಖಕ್ಕೆ ಮುಸುಕುಹಾಕಿ ಗುದ್ದಿ - ಪ್ರವಾದನೆ ಹೇಳು ಅನ್ನುತ್ತಿದ್ದರು. ಮತ್ತು ಓಲೇಕಾರರು ಆತನ ಕೆನ್ನೆಗೆ ಏಟು ಹಾಕುತ್ತಾ ತಮ್ಮ ವಶಕ್ಕೆ ತೆಗೆದುಕೊಂಡರು.


ಆದದರಿಂದ ನಾವು ಆತನ ನಿವಿುತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೋಣ.


ಆದದರಿಂದ ಸ್ವರ್ಗ ಮರ್ತ್ಯಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು


ಎಂದು ಇಸ್ರಾಯೇಲ್ಯರ ಮೇಲೆ ದೂರು ಹೇಳಿದ್ದಕ್ಕೆ ದೇವರ ಉತ್ತರವೇನಂದರೆ - ಬಾಳನ ವಿಗ್ರಹಕ್ಕೆ ಅಡ್ಡಬೀಳದೆ ಇರುವ ಏಳುಸಾವಿರ ಪುರುಷರನ್ನು ನನಗಾಗಿ ಉಳಿಸಿಕೊಂಡಿದ್ದೇನೆ ಎಂಬದೇ.


ಸಿಪಾಯಿಗಳೂ ಆತನನ್ನು ಹಾಸ್ಯಮಾಡಿದರು; ಅವರು ಆತನ ಹತ್ತಿರ ಬಂದು ಹುಳಿ ಮದ್ಯವನ್ನು ತೋರಿಸಿ -


ಕಡೆಗೆ ಹೆರೋದನು ತನ್ನ ಸಿಪಾಯಿಗಳನ್ನು ಕೂಡಿಕೊಂಡು ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಶೋಭಾಯಮಾನವಾದ ಉಡುಪನ್ನು ಹಾಕಿಸಿ ಪಿಲಾತನ ಬಳಿಗೆ ತಿರಿಗಿ ಕಳುಹಿಸಿಕೊಟ್ಟನು.


ಆಮೇಲೆ ಯೇಸುವನ್ನು ಹಿಡಿದವರು ಆತನನ್ನು ಹಾಸ್ಯಮಾಡುತ್ತಾ


ಇವರು ಅವನನ್ನು ಅಪಹಾಸ್ಯಮಾಡುವರು, ಅವನ ಮೇಲೆ ಉಗುಳುವರು, ಅವನನ್ನು ಕೊರಡೆಗಳಿಂದ ಹೊಡೆಯುವರು, ಕೊಂದುಹಾಕುವರು. ಅವನು ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವನು ಎಂದು ಹೇಳಿದನು.


ಆತನು - ಎಲೀಯನು ಮೊದಲು ಬಂದು ಎಲ್ಲವನ್ನು ತಿರಿಗಿ ಸರಿಮಾಡುವದು ನಿಜ. ಮತ್ತು ಮನುಷ್ಯಕುಮಾರನ ವಿಷಯವಾಗಿ - ಅವನು ಬಹು ಕಷ್ಟಗಳನ್ನನುಭವಿಸಿ ಹೀನೈಸಲ್ಪಡಬೇಕೆಂಬದಾಗಿ ಬರೆದದೆ, ಇದು ಹೇಗೆ?


ವ್ಯೂಹಭರಿತದೇಶವೇ, ನಿನ್ನ ವ್ಯೂಹಗಳನ್ನು ಈಗ ಕೂಡಿಸು; ಆಹಾ, ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ; ಇಸ್ರಾಯೇಲಿನ ಅಧಿಪತಿಯ ಕೆನ್ನೆಗೆ ಕೋಲಿನಿಂದ ಹೊಡೆಯುವರು.


ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿರುವದನ್ನು ನೋಡಿ ಅನೇಕರು ಹೇಗೆ ಅವನಿಂದ ಬೆದರಿ ಬಿದ್ದರೋ


ಹೊಡೆಯುವವರಿಗೆ ಬೆನ್ನುಕೊಟ್ಟು ಕೂದಲುಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ.


ಮನಃಪೂರ್ವಕವಾಗಿ ತಿರಸ್ಕರಿಸಲ್ಪಟ್ಟವನೂ ಅನ್ಯಜನಾಂಗಕ್ಕೆ ಅಸಹ್ಯನೂ ಜನದೊಡೆಯರ ಸೇವಕನೂ ಆದವನಿಗೆ ಇಸ್ರಾಯೇಲಿನ ವಿಮೋಚಕನೂ ಸದಮಲಸ್ವಾವಿುಯೂ ಆದ ಯೆಹೋವನು ಹೀಗೆ ಹೇಳುತ್ತಾನೆ - ಯೆಹೋವನ ಪ್ರಾಮಾಣಿಕತೆಯನ್ನೂ ಇಸ್ರಾಯೇಲಿನ ಸದಮಲಸ್ವಾವಿುಯು ನಿನ್ನನ್ನು ಪರಿಗ್ರಹಿಸಿರುವದನ್ನೂ ಅರಸರು ನೋಡಿ ಎದ್ದು ನಿಲ್ಲುವರು, ಅಧಿಪತಿಗಳು ಅಡ್ಡಬೀಳುವರು.


ಎಲ್ಲರೂ ನನಗೆ ಅಡ್ಡಬೀಳುವರು, ಎಲ್ಲರೂ ನನ್ನನ್ನು ದೇವರೆಂದು ಪ್ರತಿಜ್ಞೆಮಾಡುವರು ಎಂಬ ನುಡಿ ನನ್ನ ಸತ್ಯದ ಬಾಯಿಂದ ಹೊರಟಿದೆ, ಅದನ್ನು ಹಿಂತೆಗೆಯೆನು, ನನ್ನ ಮೇಲೆ ಆಣೆಯಿಟ್ಟಿದ್ದೇನೆ.


ಊರುಬಾಗಲಲ್ಲಿ ಕೂತುಕೊಳ್ಳುವವರ ಆಡಿಕೆಗೆ ಗುರಿಯಾಗಿದ್ದೇನೆ. ಕುಡಿಕರು ನನ್ನ ವಿಷಯ ಹಾಡಿ ಗೇಲಿಮಾಡುತ್ತಾರೆ.


ಆತನು ನಿಮ್ಮನ್ನು ಶೋಧಿಸಿದರೆ ನಿಮಗೆ ಒಳ್ಳೇದಾಗುವದೋ? ಮನುಷ್ಯನನ್ನು ಮೋಸಗೊಳಿಸುವಂತೆ ಆತನನ್ನೂ ಮೋಸಗೊಳಿಸುವಿರೋ?


ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ ಅದನ್ನು ಮುದ್ದಿಡದೆಯೂ ಇರುವ ಏಳು ಸಾವಿರ ಮಂದಿ ಇಸ್ರಾಯೇಲ್ಯರನ್ನು ಉಳಿಸುವೆನು ಎಂದು ಹೇಳಿದನು.


ನಿನ್ನ ಸೇವಕನಾದ ನಮ್ಮ ತಂದೆಗೆ ಕ್ಷೇಮ; ಅವನು ಇನ್ನೂ ಇದ್ದಾನೆ ಅಂದರು.


ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವನಿಗೆ ಬೊಗ್ಗಿ ನಮಸ್ಕರಿಸಿದನು.


ಮತ್ತು ಆತನ ಮೇಲೆ ಉಗುಳಿ ಆ ಬೆತ್ತವನ್ನು ಕಸಕೊಂಡು ಆತನ ತಲೆಯ ಮೇಲೆ ಹೊಡೆದರು.


ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ ಎಂದು ಆತನಿಗೆ ವಂದನೆಮಾಡಿ


ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ಒಲ್ಲಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕೆ ತೆಗೆದುಕೊಂಡು ಹೋದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು