ಮಾರ್ಕ 14:70 - ಕನ್ನಡ ಸತ್ಯವೇದವು J.V. (BSI)70 ಅವನು ತಿರಿಗಿ ಅಲ್ಲ ಅಂದನು. ಸ್ವಲ್ಪ ಹೊತ್ತಿನ ಮೇಲೆ ಅಲ್ಲಿ ನಿಂತವರು ಪೇತ್ರನಿಗೆ - ನಿಶ್ಚಯವಾಗಿ ನೀನು ಅವರಲ್ಲಿ ಒಬ್ಬನು; ನೀನು ಗಲಿಲಾಯದವನಷ್ಟೆ ಎಂದು ತಿರಿಗಿ ಹೇಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201970 ಆಗ ಅವನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಿನ ಮೇಲೆ ಪಕ್ಕದಲ್ಲಿ ನಿಂತವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು, ಯಾಕೆಂದರೆ ನೀನು ಗಲಿಲಾಯದವನೇ” ಎಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)70 ಸ್ವಲ್ಪ ಹೊತ್ತಾದ ಮೇಲೆ ಅಲ್ಲಿದ್ದವರು ಪೇತ್ರನಿಗೆ, “ಖಂಡಿತವಾಗಿ ನೀನು ಅವರಲ್ಲಿ ಒಬ್ಬನು. ಏಕೆಂದರೆ, ನೀನೂ ಗಲಿಲೇಯದವನೇ,” ಎಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್70 ಪುನಃ ಪೇತ್ರನು ಆಕೆಯ ಮಾತನ್ನು ನಿರಾಕರಿಸಿದನು. ಸ್ವಲ್ಪ ಸಮಯದ ನಂತರ, ಪೇತ್ರನ ಬಳಿ ನಿಂತಿದ್ದ ಕೆಲವು ಜನರು ಅವನಿಗೆ, “ಯೇಸುವನ್ನು ಹಿಂಬಾಲಿಸಿದ ಜನರಲ್ಲಿ ನೀನೂ ಒಬ್ಬನು ಎಂಬುದು ನಮಗೆ ತಿಳಿದಿದೆ. ನೀನು ಯೇಸುವಿನಂತೆ ಗಲಿಲಾಯದವನು” ಎಂದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ70 ಆಗ ಪೇತ್ರನು ಅದನ್ನು ಮತ್ತೆ ನಿರಾಕರಿಸಿದನು. ಸ್ವಲ್ಪ ಹೊತ್ತಾದ ಮೇಲೆ ಪಕ್ಕದಲ್ಲಿ ನಿಂತಿದ್ದವರು ತಿರುಗಿ ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಸಹ ಅವರಲ್ಲಿ ಒಬ್ಬನು, ನೀನು ಗಲಿಲಾಯದವನೇ,” ಎಂದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್70 ಖರೆ ಪೆದ್ರುನ್ ಅನಿ ಬಿ “ಮಿಯಾ ನ್ಹಯ್” ಮಟ್ಲ್ಯಾನ್ ಅನಿ ಉಲ್ಲೊ ಎಳ್ ಹೊಲ್ಲ್ಯಾ ಮಾನಾ ಥೈ ಇಬೆ ಹೊತ್ತ್ಯಾನಿ ಪೆದ್ರುಕ್ “ಖರೆಚ್ ತಿಯಾಬಿ ತ್ಯೆಂಚಾತ್ಲೊ ಎಕ್ಲೊ, ಕಶ್ಯಾಕ್ ಮಟ್ಲ್ಯಾರ್ ತಿಯಾ ಗಾಲಿಲಿಯಾಚೊ ಮಾನುಸ್” ಮಟ್ಲ್ಯಾನಿ. ಅಧ್ಯಾಯವನ್ನು ನೋಡಿ |