ಮಾರ್ಕ 14:65 - ಕನ್ನಡ ಸತ್ಯವೇದವು J.V. (BSI)65 ಆಮೇಲೆ ಕೆಲವರು ಆತನನ್ನು ಉಗುಳಿ ಆತನ ಮುಖಕ್ಕೆ ಮುಸುಕುಹಾಕಿ ಗುದ್ದಿ - ಪ್ರವಾದನೆ ಹೇಳು ಅನ್ನುತ್ತಿದ್ದರು. ಮತ್ತು ಓಲೇಕಾರರು ಆತನ ಕೆನ್ನೆಗೆ ಏಟು ಹಾಕುತ್ತಾ ತಮ್ಮ ವಶಕ್ಕೆ ತೆಗೆದುಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201965 ಅನಂತರ ಕೆಲವರು ಆತನ ಮೇಲೆ ಉಗುಳಿ, ಆತನ ಮುಖಕ್ಕೆ ಮುಸುಕನ್ನು ಹಾಕಿ, ಗುದ್ದಿ, ಈಗ “ಪ್ರವಾದಿಸು” ಎಂದರು. ಕಾವಲುಗಾರರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆತನಿಗೆ ಹೊಡೆದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)65 ಅನಂತರ, ಅವರಲ್ಲಿ ಕೆಲವರು ಯೇಸುವಿನ ಮೇಲೆ ಉಗುಳಿದರು. ಅವರ ಮುಖಕ್ಕೆ ಮುಸುಕುಹಾಕಿ, ಅವರನ್ನು ಗುದ್ದಿ, “ಗುದ್ದಿದವರು ಯಾರು? ಪ್ರವಾದಿಸು ನೋಡೋಣ,” ಎನ್ನುತ್ತಿದ್ದರು. ಇದಲ್ಲದೆ ಅಲ್ಲಿದ್ದ ಪಹರೆಯವರು ಅವರಿಗೆ ಏಟಿನ ಮೇಲೆ ಏಟು ಕೊಟ್ಟು ತಮ್ಮ ವಶಕ್ಕೆ ತೆಗೆದುಕೊಂಡರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್65 ಅಲ್ಲಿದ್ದ ಕೆಲವು ಜನರು ಯೇಸುವಿಗೆ ಉಗುಳಿ, ಆತನ ಮುಖವನ್ನು ಮುಚ್ಚಿ, ಮುಷ್ಠಿಯಿಂದ ಗುದ್ದಿ, “ನಮಗೆ ಪ್ರವಾದನೆ ಹೇಳು” ಎಂದರು. ನಂತರ ಕಾವಲುಗಾರರು ಯೇಸುವನ್ನು ದೂರ ಕರೆದುಕೊಂಡು ಹೋಗಿ, ಆತನನ್ನು ಹೊಡೆದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ65 ತರುವಾಯ ಕೆಲವರು ಯೇಸುವಿನ ಮೇಲೆ ಉಗುಳಿ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಗುದ್ದುವುದಕ್ಕೆ ಆರಂಭಿಸಿ ಯೇಸುವಿಗೆ, “ಪ್ರವಾದನೆ ಹೇಳು,” ಎಂದರು. ಕಾವಲಾಳುಗಳು ಯೇಸುವನ್ನು ಹಿಡಿದುಕೊಂಡುಹೋಗಿ ಅವರನ್ನು ಹೊಡೆದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್65 ತೆಂಚ್ಯಾತ್ಲ್ಯಾ ಥೊಡ್ಯಾನಿ ಜೆಜುಕ್ ಥುಕ್ಲ್ಯಾನಿ, ಅನಿ ತೆಚ್ಯಾ ಡೊಳ್ಯಾಕ್ನಿ ಫಾಳಿ ಭಾಂದುನ್ ತೆಕಾ ಡುಬ್ರಿತ್ ಮುಟ್ಕ್ಯಾನಿ ಮಾರ್‍ಲ್ಯಾನಿ ಅನಿ “ತುಕಾ ಮಾರಲ್ಲೆ ಕೊನ್ ಮನುನ್ ಸಾಂಗ್” ಮನುನ್ ಇಚಾರ್‍ಲ್ಯಾನಿ. ಅನಿ ರಾಕ್ವಾಲ್ಯಾನಿ ಠಪ್ರಾಕ್ಯಾ ಮಾರುನ್ ಘೆವ್ನ್ ಗೆಲ್ಯಾನಿ. ಅಧ್ಯಾಯವನ್ನು ನೋಡಿ |