Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಲಾಕಿ 3:15 - ಕನ್ನಡ ಸತ್ಯವೇದವು J.V. (BSI)

15 ಈಗ ಅಹಂಕಾರಿಗಳನ್ನು ಧನ್ಯರೆಂದು ಕೊಂಡಾಡಬೇಕಾಗಿ ಬಂತು; ಹೌದು, ದುಷ್ಕರ್ಮಿಗಳು ಏಳಿಗೆಗೆ ಬಂದಿದ್ದಾರೆ, ದೇವರನ್ನು ಪರೀಕ್ಷಿಸಿದರೂ ಸುರಕ್ಷಿತರಾಗಿದ್ದಾರೆ ಅಂದುಕೊಂಡಿದ್ದೀರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಈಗ ಅಹಂಕಾರಿಗಳನ್ನು ಭಾಗ್ಯವಂತರೆಂದು ಕೊಂಡಾಡಬೇಕಾಗಿ ಬಂತು; ಹೌದು, ದುಷ್ಕರ್ಮಿಗಳು ಏಳಿಗೆಗೆ ಬಂದಿದ್ದಾರೆ, ದೇವರನ್ನು ಪರೀಕ್ಷಿಸಿದರೂ ಸುರಕ್ಷಿತರಾಗಿದ್ದಾರೆ” ಅಂದುಕೊಂಡಿದ್ದೀರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅಹಂಕಾರಿಗಳೇ ಭಾಗ್ಯವಂತರು; ದುಷ್ಕರ್ಮಿಗಳು ಚೆನ್ನಾಗಿ ಅಭಿವೃದ್ಧಿಯಾಗುತ್ತಿದ್ದಾರೆ, ಅಷ್ಟೇ ಅಲ್ಲ, ದೇವರನ್ನೇ ಪರೀಕ್ಷೆಗೆ ಗುರಿಪಡಿಸಿ ಸುರಕ್ಷಿತವಾಗಿದ್ದಾರೆ,” ಎಂದು ನೀವು ಹೇಳಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಗರ್ವಿಷ್ಟರು ಸಂತೋಷವಾಗಿದ್ದಾರೆ ಎಂದು ನಾವು ತಿಳಿಯುತ್ತೇವೆ. ದುಷ್ಟಜನರು ಸಫಲತೆ ಹೊಂದುತ್ತಿದ್ದಾರೆ, ದೇವರ ತಾಳ್ಮೆಯನ್ನು ಪರೀಕ್ಷಿಸಲು ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಆದರೆ ದೇವರು ಅವರನ್ನು ಶಿಕ್ಷಿಸಲಿಲ್ಲ” ಎಂದು ಹೇಳಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಈಗ ನಾವು ಗರ್ವಿಷ್ಠರನ್ನು ಭಾಗ್ಯವಂತರೆಂದನ್ನುತ್ತೇವೆ. ದುಷ್ಟರು ಅಭಿವೃದ್ಧಿಯಾಗುತ್ತಿದ್ದಾರೆ. ದೇವರಿಗೆ ಸವಾಲು ಹಾಕಿದವರು ತಪ್ಪಿಸಿಕೊಂಡಿದ್ದಾರೆ’ ಎಂದು ಹೇಳಿದ್ದೀರಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಲಾಕಿ 3:15
37 ತಿಳಿವುಗಳ ಹೋಲಿಕೆ  

ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ ದುಷ್ಕರ್ಮಿಗಳೂ ಹೊಟ್ಟಿನಂತಿರುವರು; ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಲಯವಾಗುವದು; ಬುಡ ರೆಂಬೆಗಳಾವದನ್ನೂ ಉಳಿಸದು.


ನೀವು ಯೆಹೋವನನ್ನು ನಿಮ್ಮ ಮಾತುಗಳಿಂದ ಬೇಸರಗೊಳಿಸಿದ್ದೀರಿ; ಯಾವ ವಿಷಯದಲ್ಲಿ ಆತನನ್ನು ಬೇಸರಗೊಳಿಸಿದ್ದೇವೆ ಅನ್ನುತ್ತೀರಾ? ಪ್ರತಿಯೊಬ್ಬ ದುರಾಚಾರಿಯು ಯೆಹೋವನ ದೃಷ್ಟಿಗೆ ಒಳ್ಳೆಯವನು, ಅವರೇ ಆತನಿಗೆ ಇಷ್ಟ, ನ್ಯಾಯತೀರಿಸುವ ದೇವರು ಎಲ್ಲಿಯೋ ಎಂದು ನೀವು ಅಂದುಕೊಳ್ಳುವದರಲ್ಲಿಯೇ.


ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.


ಅವರು ಅರಣ್ಯದಲ್ಲಿ ನನ್ನನ್ನು ಪರೀಕ್ಷಿಸಿ ಶೋಧಿಸಿ ನಾಲ್ವತ್ತು ವರುಷ ನಾನು ನಡಿಸುತ್ತಿದ್ದ ಕೃತ್ಯಗಳನ್ನು ನೋಡಿದರು.


ಗೊತ್ತುಮಾಡಿದ ಒಂದು ದಿನದಲ್ಲಿ ಹೆರೋದನು ರಾಜವಸ್ತ್ರವನ್ನು ಧರಿಸಿಕೊಂಡು ರಾಜಾಸನದ ಮೇಲೆ ಕೂತು ಅವರಿಗೆ ಉಪನ್ಯಾಸ ಮಾಡಿದನು.


ಆಗ ಪೇತ್ರನು ಆಕೆಗೆ - ನೀವಿಬ್ಬರೂ ಕರ್ತನ ಆತ್ಮನನ್ನು ಪರೀಕ್ಷಿಸುವದಕ್ಕೆ ಯಾಕೆ ಒಡಂಬಟ್ಟಿರಿ? ಅಗೋ, ನಿನ್ನ ಗಂಡನನ್ನು ಹೂಣಿಟ್ಟವರು ಬಂದು ಬಾಗಿಲಿನಲ್ಲಿ ಕಾಲಿಟ್ಟಿದ್ದಾರೆ, ನಿನ್ನನ್ನೂ ಹೊತ್ತುಕೊಂಡು ಹೋಗುವರು ಎಂದು ಹೇಳಿದನು.


ದಾನಿಯೇಲನನ್ನು ತಂದು ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು. ಆಗ ರಾಜನು ದಾನಿಯೇಲನಿಗೆ - ನೀನು ನಿತ್ಯವೂ ಭಜಿಸುವ ದೇವರು ನಿನ್ನನ್ನುದ್ಧರಿಸಲಿ ಎಂದು ಹರಸಿದನು.


ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕರಾಜನನ್ನು ಹೊಗಳಿ ಕೊಂಡಾಡಿ ಕೀರ್ತಿಸುತ್ತೇನೆ; ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.


ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್ ಎಂದು ಕೊಚ್ಚಿಕೊಂಡನು.


ನನ್ನ ಹೆಸರುಗೊಂಡಿರುವ ಈ ಆಲಯಕ್ಕೆ ಬಂದು ನನ್ನ ಸನ್ನಿಧಿಯಲ್ಲಿ ನಿಂತು - ನಮಗೆ ಪರಿಹಾರವಾಯಿತು ಎಂದು ಹೇಳಿ ಈ ಎಲ್ಲಾ ಅಸಹ್ಯಕಾರ್ಯಗಳನ್ನು ಇನ್ನೂ ನಡಿಸುವದಕ್ಕೆ ಅವಕಾಶ ಮಾಡಿಕೊಳ್ಳುವಿರೋ?


ಕೆಡುಕರ ಕೊಳ್ಳೆ ದುಷ್ಟರಿಗೆ ಇಷ್ಟ; ಶಿಷ್ಟರ ಬುಡ ಫಲದಾಯಕ.


ಅರಣ್ಯದಲ್ಲಿ ಆಶಾತುರರಾಗಿ ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು.


ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು; ಅವರು ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಶೋಧಿಸಿದರು.


ಆದರೂ ಅವರು ಪರಾತ್ಪರನಾದ ದೇವರನ್ನು ಪರೀಕ್ಷಿಸಿ ಅವಿಧೇಯರಾದರು. ಆತನ ವಿಧಿಗಳನ್ನು ಕೈಕೊಳ್ಳದೆ


ಆತನನ್ನು ಪದೇಪದೇ ಪರೀಕ್ಷಿಸಿ ಇಸ್ರಾಯೇಲ್ಯರ ಸದಮಲಸ್ವಾವಿುಯನ್ನು ಕರಕರೆಗೊಳಿಸಿದರು.


ಅವರು ಇಷ್ಟಭೋಜನವನ್ನು ಕೇಳಿಕೊಳ್ಳುವಲ್ಲಿ ಸಂಶಯಾತ್ಮರಾಗಿ ದೇವರನ್ನು ಪರೀಕ್ಷಿಸಿದರು.


ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ.


ಸಿರಿ ಬಂದಾಗ ಹೆರರ ಹೊಗಳಿಕೆ ತಪ್ಪದು ಎಂಬಂತೆ ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ ಜನಸ್ತುತಿಯಿಂದಲೂ ಕೂಡಿದವನಾದರೂ


ದುಷ್ಟನು ತನ್ನ ಮನೋರಥವು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ; ಪರರ ಸೊತ್ತನ್ನು ಅಪಹರಿಸಿದವನು ಯೆಹೋವನನ್ನು ಅಲ್ಲಗಳೆದು ಬಿಟ್ಟುಬಿಡುತ್ತಾನೆ.


ನೀನು ಸರ್ವಶಕ್ತನ ಕಡೆಗೆ ತಿರುಗಿಕೊಂಡು ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ.


ಆಪತ್ತಿನ ದಿನದಲ್ಲಿ ದುಷ್ಟನು ಉಳಿದು ಕೋಪವು ತುಂಬಿ ತುಳುಕುವ ದಿವಸದಲ್ಲಿ ತಪ್ಪಿಸಲ್ಪಡುವನು ಎಂಬದು ನಿಮಗೆ ಗೊತ್ತಾಗಲಿಲ್ಲವೋ?


ಜಾರಿಬಿದ್ದವರಿಗೆ ಅಪಮಾನವು ಕಾದಿರುತ್ತದೆ. ಕಳ್ಳರ ಗುಡಾರಗಳಾದರೋ ಸಮೃದ್ಧಿವಾಗಿರುವವು, ಕೈಯಲ್ಲಿರುವದನ್ನೇ ದೇವರನ್ನಾಗಿ ಮಾಡಿಕೊಂಡು ದೇವರನ್ನು ರೇಗಿಸುವವರು ಸುರಕ್ಷಿತರಾಗಿದ್ದಾರೆ.


ಆದರೂ ತನ್ನನ್ನು ಬಿಗಿಹಿಡಿದುಕೊಂಡು ಮನೆಗೆ ಹೋಗಿ ತನ್ನ ಆಪ್ತರನ್ನೂ ಪತ್ನಿಯಾದ ಜೆರೆಷಳನ್ನೂ ಕರಿಸಿ


ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು; ನಾವು ಪರೀಕ್ಷಿಸದೆ ಇರೋಣ.


ನಿಮ್ಮ ಮನಸ್ಸಿನ ಕಲ್ಪನೆಯೆಲ್ಲಾ ಕೆಟ್ಟತನವೇ; ನೀವು ದೇಶದವರಿಗೆ ಅನ್ಯಾಯವನ್ನೇ ತೂಗಿಕೊಡುವವರಾಗಿದ್ದೀರಲ್ಲಾ.


ನನ್ನ ಹೃದಯವು ದುರಾಚಾರವನ್ನು ಮೆಚ್ಚದಂತೆಯೂ ನಾನು ದುಷ್ಟರೊಡನೆ ಕೂಡಿ ಕೆಟ್ಟ ಕೆಲಸಗಳನ್ನು ನಡಿಸದಂತೆಯೂ ನನ್ನನ್ನು ಕಾಪಾಡು. ಅವರ ಮೃಷ್ಟಾನ್ನವು ನನಗೆ ಬೇಡವೇ ಬೇಡ.


ಲೋಕದಲ್ಲಿ ನಡೆಯುವ ವ್ಯರ್ಥಕಾರ್ಯವೊಂದುಂಟು; ದುಷ್ಟರ ನಡತೆಗೆ ತಕ್ಕ ಗತಿಯು ಶಿಷ್ಟರಿಗೆ ಆಗುವದು, ಶಿಷ್ಟರ ನಡತೆಗೆ ತಕ್ಕ ಗತಿಯು ದುಷ್ಟರಿಗೆ ಆಗುವದು; ಇದೂ ವ್ಯರ್ಥವೆಂದು ನಾನು ಹೇಳಿದೆನು.


ಉಸಿರು ಮೂಗಿನಲ್ಲಿರುವ ತನಕ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಯಾವ ಗಣನೆಗೆ ಬಂದಾನು?


ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ, ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.


ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು