Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಲಾಕಿ 3:11 - ಕನ್ನಡ ಸತ್ಯವೇದವು J.V. (BSI)

11 ನುಂಗುವ ಹುಳವನ್ನು ನಾನು ನಿಮಗಾಗಿ ತಡೆಯುವೆನು, ಅದು ನಿಮ್ಮ ಭೂವಿುಯ ಫಲವನ್ನು ನಾಶಮಾಡದು; ನಿಮ್ಮ ದ್ರಾಕ್ಷೆಯ ಹಣ್ಣು ತೋಟದಲ್ಲಿ ಉದುರಿಹೋಗದು; ಇದು ಸೇನಾಧೀಶ್ವರ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನುಂಗುವ ಹುಳವನ್ನು ನಾನು ನಿಮಗಾಗಿ ತಡೆಯುವೆನು. ಅದು ನಿಮ್ಮ ಭೂಮಿಯ ಫಲವನ್ನು ನಾಶಮಾಡದು; ನಿಮ್ಮ ದ್ರಾಕ್ಷಿಯಹಣ್ಣು ತೋಟದಲ್ಲಿ ಉದುರಿಹೋಗದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 “ನಿಮ್ಮ ಭೂಮಿಯ ಬೆಳೆ ಹುಳುಹುಪ್ಪಟೆಗಳಿಂದ ನಾಶವಾಗದಂತೆ ನೋಡಿಕೊಳ್ಳುವೆನು. ನಿಮ್ಮ ತೋಟದಲ್ಲಿ ದ್ರಾಕ್ಷಿಹಣ್ಣು ಉದುರಿಹೋಗದಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ನಿಮ್ಮ ಬೆಳೆಗಳು ಹುಳಗಳಿಂದ ನಾಶವಾಗದಂತೆ ನಾನು ಸಂರಕ್ಷಿಸುವೆನು; ನಿಮ್ಮ ದ್ರಾಕ್ಷಾಲತೆಗಳೆಲ್ಲಾ ದ್ರಾಕ್ಷಿಯನ್ನು ಫಲಿಸುವವು.” ಇದು ಸರ್ವಶಕ್ತನಾದ ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 “ನಿಮ್ಮ ಬೆಳೆಯನ್ನು ತಿಂದು ಬಿಡದಂತೆ ಕ್ರಿಮಿಕೀಟಗಳನ್ನು ತಡೆಯುವೆನು. ನಿಮ್ಮ ದ್ರಾಕ್ಷಿ ತೋಟಗಳಲ್ಲಿಂದ ದ್ರಾಕ್ಷಿಹಣ್ಣುಗಳನ್ನು ಉದುರಿಸಿ ಬಿಡುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಲಾಕಿ 3:11
15 ತಿಳಿವುಗಳ ಹೋಲಿಕೆ  

ನಿಮಗೆ ಗೋದಿ, ದ್ರಾಕ್ಷೆ, ಎಣ್ಣೇಕಾಯಿ ಇವುಗಳ ಬೆಳೆ ಚೆನ್ನಾಗಿ ಉಂಟಾಗುವಂತೆ ಆತನು ನಿಮ್ಮ ಭೂವಿುಗೆ ಬೇಕಾದ ಮುಂಗಾರು ಹಿಂಗಾರುಗಳನ್ನು ಸರಿಯಾಗಿ ನಡಿಸುವನು;


ಭೂಜಂತುಗಳೇ, ಅಂಜಬೇಡಿರಿ; ಕಾಡಿನ ಕಾವಲಲ್ಲಿ ಹುಲ್ಲು ಮೊಳೆಯುವದು, ಮರವು ಹಣ್ಣುಬಿಡುವದು, ಅಂಜೂರದ ಗಿಡವೂ ದ್ರಾಕ್ಷಾಲತೆಯೂ ಸಾರವತ್ತಾಗಿ ಫಲಿಸುವವು.


ನೆಮ್ಮದಿಯ ಬೆಳೆಯಾಗುವದು; ದ್ರಾಕ್ಷಾಲತೆಯು ಹಣ್ಣುಬಿಡುವದು, ಭೂವಿುಯು ಧಾನ್ಯವನ್ನೀಯುವದು, ಆಕಾಶವು ಇಬ್ಬನಿಯನ್ನು ಸುರಿಸುವದು; ಈ ಜನಶೇಷದವರು ಇವುಗಳನ್ನೆಲ್ಲಾ ಅನುಭವಿಸುವಂತೆ ಅನುಗ್ರಹಿಸುವೆನು.


ನಾನು ಬಡಗಣ ದಂಡನ್ನು ನಿಮ್ಮ ಕಡೆಯಿಂದ ದೂರ ತೊಲಗಿಸಿ ಹಾಳು ಬೆಗ್ಗಾಡಿಗೆ ಓಡಿಸಿ ಅದರ ಮುಂಭಾಗವನ್ನು ಮೂಡಣ ಸಮುದ್ರಕ್ಕೂ ಹಿಂಭಾಗವನ್ನು ಪಡುವಣ ಸಮುದ್ರಕ್ಕೂ ತಳ್ಳಿಬಿಡುವೆನು; ಆಹಾ, ಮಹತ್ಕಾರ್ಯಗಳನ್ನು ಮಾಡಿತು, ಅದರ [ಹೆಣಗಳ] ದುರ್ವಾಸನೆಯು ಏರುವದು, ಗಬ್ಬು ನಾರುವದು.


ಚೂರಿವಿುಡತೆ ತಿಂದು ವಿುಕ್ಕದ್ದನ್ನು ಗುಂಪುವಿುಡತೆ ತಿಂದುಬಿಟ್ಟಿತು; ಗುಂಪುವಿುಡತೆ ತಿಂದು ವಿುಕ್ಕದ್ದನ್ನು ಸಣ್ಣವಿುಡತೆ ತಿಂದುಬಿಟ್ಟಿತು; ಸಣ್ಣವಿುಡತೆ ತಿಂದು ವಿುಕ್ಕದ್ದನ್ನು ದೊಡ್ಡವಿುಡತೆ ತಿಂದುಬಿಟ್ಟಿತು.


ನಾನು ನಿಮ್ಮ ಕೈದುಡಿತದ ಫಲವನ್ನೆಲ್ಲಾ ಆನೆಕಲ್ಲು, ಕಾಡಿಗೆ, ಬಿಸಿಗಾಳಿ, ಇವುಗಳಿಂದ ಹಾಳು ಮಾಡಿ ನಿಮ್ಮನ್ನು ಬಾಧಿಸಿದರೂ ನೀವು ನನ್ನ ಕಡೆಗೆ ತಿರುಗಿಕೊಳ್ಳಲಿಲ್ಲ; ಇದು ಯೆಹೋವನ ನುಡಿ.


ನಿಮ್ಮನ್ನು ಬೂದಿಯಿಂದಲೂ ಬಿಸಿಗಾಳಿಯಿಂದಲೂ ಬಾಧಿಸಿದೆನು; ನಿಮ್ಮ ಲೆಕ್ಕವಿಲ್ಲದ ವನ, ದ್ರಾಕ್ಷೆಯ ತೋಟ, ಅಂಜೂರದ ಗಿಡ, ಎಣ್ಣೆಯ ಮರ, ಇವುಗಳನ್ನು ವಿುಡತೆಯು ತಿಂದುಬಿಟ್ಟಿತು; ಹೀಗೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ ಎಂದು ಯೆಹೋವನು ನುಡಿಯುತ್ತಾನೆ.


ಆಹಾ, ಅಂಜೂರವು ಚಿಗುರದಿದ್ದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರವನ್ನು ಕೊಡದೆಹೋದರೂ ಹಿಂಡು ಹಟ್ಟಿಯೊಳಗಿಂದ ನಾಶವಾದರೂ ಮಂದೆಯು ಕೊಟ್ಟಿಗೆಗಳೊಳಗೆ ಇಲ್ಲದಿದ್ದರೂ


ದ್ರಾಕ್ಷಾಲತೆಯು ಆಶಾಭಂಗಪಟ್ಟಿದೆ; ಅಂಜೂರದ ಗಿಡವು ಕ್ಷೀಣವಾಗಿದೆ; ದಾಳಿಂಬ, ಖರ್ಜೂರ, ಸೇಬು, ಅಂತು ಸಕಲ ವನವೃಕ್ಷಗಳು ಒಣಗಿವೆ, ಆನಂದವು ತಗ್ಗಿ ನರಜನ್ಮದವರಿಗೆ ತಪ್ಪಿಹೋಗಿದೆ.


ನಾನು ಇವರನ್ನು ನಿರ್ಮೂಲಮಾಡಿ ಕೊಚ್ಚಿಬಿಡುವೆನು; ದ್ರಾಕ್ಷೆಯ ಬಳ್ಳಿಯಲ್ಲಿಯೂ ಅಂಜೂರದ ಮರದಲ್ಲಿಯೂ ಹಣ್ಣಿರುವದಿಲ್ಲ, ಎಲೆಯು ಬಾಡುವದು; ನಾನು ಹಾಳು ಮಾಡುವವರನ್ನು ಅವರಿಗೆ ನೇವಿುಸುವೆನು. ಇದು ಯೆಹೋವನ ನುಡಿ.


ಅದು ನನ್ನ ದ್ರಾಕ್ಷೆಯ ಬಳ್ಳಿಗಳನ್ನು ಹಾಳುಮಾಡಿದೆ, ನನ್ನ ಅಂಜೂರದ ಗಿಡಗಳನ್ನು ಸಿಗಿದುಹಾಕಿದೆ, ಅವುಗಳನ್ನು ಬೋಳುಮಾಡಿ ಬಿಟ್ಟುಬಿಟ್ಟಿದೆ; ರೆಂಬೆಗಳು ಬಿಳುಪಾಗಿ ಹೋಗಿವೆ.


ಯೆಹೋವನು ಇಂತೆನ್ನುತ್ತಾನೆ - ಆ ಕಾಲದಲ್ಲಿ ನಾನು ಒಲುಮೆ ತೋರಿಸುವೆನು; ಬೇಡುವ ಆಕಾಶಕ್ಕೆ ನಾನು ಒಲಿಯಲು ಬೇಡುವ ಭೂವಿುಗೆ ಅದು ಒಲಿಯುವದು.


ಗುಂಪುವಿುಡತೆ, ಸಣ್ಣವಿುಡತೆ, ದೊಡ್ಡವಿುಡತೆ, ಚೂರಿವಿುಡತೆ, ಅಂತು ನಾನು ನಿಮ್ಮ ಮೇಲೆ ಕಳುಹಿಸಿದ ನನ್ನ ದೊಡ್ಡ ದಂಡು ತಿಂದುಬಿಟ್ಟ ವರುಷಗಳನ್ನು ನಾನು ನಿಮಗೆ ಕಟ್ಟಿಕೊಡುವೆನು.


ದೇಶ, ಬೆಟ್ಟ, ಧಾನ್ಯ, ದ್ರಾಕ್ಷಾರಸ, ಎಣ್ಣೆ, ಭೂವಿುಯ ಉತ್ಪತ್ತಿ, ಮನುಷ್ಯ, ಪಶು, ನಾನಾ ಕೈದುಡಿತ, ಇವುಗಳಿಗೆಲ್ಲಾ ಹಾಳುದೆಶೆ ತಂದಿದ್ದೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು