ಮಲಾಕಿ 2:16 - ಕನ್ನಡ ಸತ್ಯವೇದವು J.V. (BSI)16 ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ - ನಾನು ಪತ್ನೀತ್ಯಾಗವನ್ನೂ ಹೆಂಡತಿಗೆ ಅನ್ಯಾಯಮಾಡುವವನನ್ನೂ ಹಗೆಮಾಡುತ್ತೇನೆ; ಇದು ಸೇನಾಧೀಶ್ವರ ಯೆಹೋವನ ನುಡಿ; ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ, “ನಾನು ಪತ್ನಿತ್ಯಾಗವನ್ನೂ, ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಆದಕಾರಣ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ದ್ರೋಹಮಾಡಬೇಡಿರಿ.” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಇಸ್ರಯೇಲಿನ ದೇವರಾದ ಸರ್ವೇಶ್ವರ ಹೀಗೆ ಹೇಳುತ್ತಾರೆ: “ವಿವಾಹ ವಿಚ್ಛೇದನವನ್ನು ದ್ವೇಷಿಸುತ್ತೇನೆ. ತನ್ನ ಮಡದಿಗೆ ನಂಬಿಕೆದ್ರೋಹವನ್ನೆಸಗುವವನನ್ನು ಹಾಗು ದೌರ್ಜನ್ಯ ತೋರುವವನನ್ನು ಹಗೆಮಾಡುತ್ತೇನೆ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. ಆದಕಾರಣ ಮನಃಪೂರ್ವಕವಾಗಿ ಎಚ್ಚರಿಕೆಯಿಂದಿರಿ ನಿಮ್ಮ ಮಡದಿಗೆ ದ್ರೋಹವೆಸಗದಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಇಸ್ರೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, “ವಿವಾಹವಿಚ್ಪೇದನೆಯನ್ನು ನಾನು ಹಗೆ ಮಾಡುತ್ತೇನೆ. ಮತ್ತು ಮನುಷ್ಯನು ಮಾಡುವ ದುಷ್ಕೃತ್ಯವನ್ನು ನಾನು ಹಗೆ ಮಾಡುತ್ತೇನೆ. ಆದ್ದರಿಂದ ನಿಮ್ಮ ಆತ್ಮೀಯ ಒಗ್ಗಟ್ಟನ್ನು ಕಾಪಾಡಿಕೊಳ್ಳಿರಿ. ನಿಮ್ಮ ಹೆಂಡತಿಯರಿಗೆ ಮೋಸ ಮಾಡಬೇಡಿರಿ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 “ವಿವಾಹ ವಿಚ್ಛೇದನವನ್ನು ನಾನು ಹಗೆಮಾಡುತ್ತೇನೆ,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುತ್ತಾನೆ. “ತನ್ನ ಹೆಂಡತಿಗೆ ನಂಬಿಕೆದ್ರೋಹ ಬಗೆದು, ದೌರ್ಜನ್ಯ ತೋರುವವನನ್ನು ನಾನು ಹಗೆಮಾಡುತ್ತೇನೆ,” ಎಂದು ಸರ್ವಶಕ್ತರಾದ ದೇವರು ಹೇಳುತ್ತಾರೆ. ಆದ್ದರಿಂದ ನೀವು ವಂಚನೆಯುಳ್ಳವರಾಗಿ ನಡೆಯದ ಹಾಗೆ ನಿಮ್ಮ ಆತ್ಮದಲ್ಲಿ ಎಚ್ಚರಿಕೆಯಾಗಿರಿ. ಅಧ್ಯಾಯವನ್ನು ನೋಡಿ |