Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 20:34 - ಕನ್ನಡ ಸತ್ಯವೇದವು J.V. (BSI)

34 ಆಗ ಯೇಸು ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೆ ಅವರಿಗೆ ಕಣ್ಣು ಬಂದವು, ಅವರು ಆತನ ಹಿಂದೆ ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಆಗ ಯೇಸು ಕನಿಕರಪಟ್ಟು, ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರು ದೃಷ್ಟಿಯನ್ನು ಹೊಂದಿಕೊಂಡು ಆತನನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಯೇಸುವಿಗೆ ಅವರ ಮೇಲೆ ಕನಿಕರವುಂಟಾಯಿತು. ಅವರ ಕಣ್ಣುಗಳನ್ನು ಮುಟ್ಟಿದರು. ಅದೇ ಕ್ಷಣದಲ್ಲಿ ಅವರಿಗೆ ದೃಷ್ಟಿಬಂದಿತು. ಅವರೂ ಯೇಸುವನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದರು. ಕೂಡಲೇ ಅವರ ಕಣ್ಣುಗಳು ದೃಷ್ಟಿಯನ್ನು ಪಡೆದವು. ಅವರೂ ಯೇಸುವನ್ನು ಹಿಂಬಾಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

34 ತನ್ನಾ ಜೆಜುನ್ ತೆಂಚೆ ವರ್‍ತಿ ದಯಾ ದಾಕ್ವುಲ್ಯಾನ್ ಅನಿ ತೆಂಚ್ಯಾ ಡೊಳ್ಯಾಕ್ನಿ ಅಪಡ್ಲ್ಯಾನ್. ತನ್ನಾ ತಾಬೊಡ್ತೊಬ್ ತೆಂಕಾ ದಿಸುಕ್‍ ಲಾಗ್ಲೆ. ತನ್ನಾ ತೆನಿ ಜೆಜುಚ್ಯಾ ಫಾಟ್ನಾಚ್ ಗೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 20:34
20 ತಿಳಿವುಗಳ ಹೋಲಿಕೆ  

ಅವರು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು ನನ್ನಲ್ಲಿ ನಂಬಿಕೆಯಿಡುವದರಿಂದ ಪಾಪಪರಿಹಾರವನ್ನೂ ಪವಿತ್ರರಾದವರಲ್ಲಿ ಹಕ್ಕನ್ನೂ ಹೊಂದುವಂತೆ ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಅಂದನು.


ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.


ಆದರೆ ಯೇಸು - ಇಷ್ಟಕ್ಕೇ ಬಿಡಿರಿ ಎಂದು ಹೇಳಿ ಆ ಕಿವಿಯನ್ನು ಮುಟ್ಟಿ ಅವನಿಗೆ ವಾಸಿಮಾಡಿದನು.


ಸ್ವಾವಿುಯು ಆಕೆಯನ್ನು ಕಂಡು ಕನಿಕರಿಸಿ - ಅಳಬೇಡ ಎಂದು ಆಕೆಗೆ ಹೇಳಿ


ಆತನು ಅವನನ್ನು ಜನರ ಗುಂಪಿನಿಂದ ಒತ್ತಟ್ಟಿಗೆ ಕರಕೊಂಡು ಹೋಗಿ ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟು ಉಗುಳಿ


ಆಗ ಯೇಸು ತನ್ನ ಶಿಷ್ಯರನ್ನು ಹತ್ತರಕ್ಕೆ ಕರೆದು ಅವರಿಗೆ - ಈ ಜನರನ್ನು ನೋಡಿ ಕನಿಕರಪಡುತ್ತೇನೆ; ಅವರು ನನ್ನ ಬಳಿಗೆ ಬಂದು ಈಗ ಮೂರು ದಿನವಾಯಿತು; ಅವರಿಗೆ ಊಟಕ್ಕೆ ಏನೂ ಇಲ್ಲ; ಅವರನ್ನು ಉಪವಾಸವಾಗಿ ಕಳುಹಿಸಿಬಿಡುವದಕ್ಕೆ ನನಗೆ ಮನಸ್ಸಿಲ್ಲ; ದಾರಿಯಲ್ಲಿ ಬಳಲಿಹೋದಾರು ಎಂದು ಹೇಳಿದನು.


ಆತನು ಹೊರಗೆ ಬಂದು ಬಹು ಜನರ ಗುಂಪನ್ನು ಕಂಡು ಕನಿಕರಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.


ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ - ನೀವು ನಂಬಿದಂತೆ ನಿಮಗೆ ಆಗಲಿ ಅಂದನು.


ಮುಟ್ಟಿದಾಗಲೇ ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆ ಎದ್ದು ಆತನಿಗೆ ಉಪಚಾರಮಾಡಿದಳು.


ಯೆಹೋವನು ದಯೆಯೂ ಕನಿಕರವೂ ಉಳ್ಳವನು; ದೀರ್ಘಶಾಂತನೂ ಪ್ರೀತಿಪೂರ್ಣನೂ ಆಗಿದ್ದಾನೆ.


ಕಷ್ಟಾನುಭವವು ಹಿತಕರವಾಯಿತು; ಅದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.


ಕಷ್ಟಾನುಭವಕ್ಕಿಂತ ಮುಂಚೆ ತಪ್ಪಿಹೋಗುತ್ತಿದ್ದೆನು; ಈಗಲಾದರೋ ನಿನ್ನ ನುಡಿಗಳನ್ನು ಕೈಕೊಳ್ಳುತ್ತೇನೆ.


ತಕ್ಷಣವೇ ಅವನಿಗೆ ಕಣ್ಣುಬಂದವು; ಅವನು ದೇವರನ್ನು ಕೊಂಡಾಡುತ್ತಾ ಆತನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.


ಆದರೆ ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.


ಆದದರಿಂದ ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣಮಾಡುವದಕ್ಕಾಗಿ ದೇವರ ಕಾರ್ಯಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾಯಾಜಕನಾದನು.


ಅವರು - ನಮ್ಮ ಕಣ್ಣುಗಳು ತೆರೆಯಲ್ಪಡಬೇಕು, ಸ್ವಾಮೀ ಅಂದರು.


ಅವರು ಯೆರೂಸಲೇವಿುಗೆ ಸಮೀಪಿಸಿ ಎಣ್ಣೆಯ ಮರಗಳ ಗುಡ್ಡದ ಬಳಿಯಲ್ಲಿರುವ ಬೇತ್ಫಗೆಗೆ ಬಂದಾಗ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು