ಮತ್ತಾಯ 12:10 - ಕನ್ನಡ ಸತ್ಯವೇದವು J.V. (BSI)10 ಆಗ ಅವರು ಆತನ ಮೇಲೆ ತಪ್ಪುಹೊರಿಸಬೇಕೆಂದು ಆತನನ್ನು - ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವದು ಸರಿಯೋ ಎಂದು ಕೇಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಆಗ ಅಲ್ಲಿ ಕೈಬತ್ತಿದವನೊಬ್ಬನಿದ್ದನು. ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನನ್ನು, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯವೋ?” ಎಂದು ಕೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಬತ್ತಿದ ಕೈಯುಳ್ಳ ಒಬ್ಬ ವ್ಯಕ್ತಿ ಅಲ್ಲಿದ್ದನು. ಯೇಸುವಿನ ಮೇಲೆ ತಪ್ಪುಹೊರಿಸುವ ಉದ್ದೇಶದಿಂದ ಕೆಲವರು, “ಸಬ್ಬತ್ ದಿನ ಸ್ವಸ್ಥಗೊಳಿಸುವುದು ಶಾಸ್ತ್ರಬದ್ಧವೇ?" ಎಂದು ಯೇಸುವನ್ನು ಕೇಳಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಆ ಸಭಾಮಂದಿರದಲ್ಲಿ ಒಬ್ಬನ ಕೈ ಊನವಾಗಿತ್ತು. ಯೆಹೂದ್ಯರಲ್ಲಿ ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸುವುದಕ್ಕಾಗಿ ಕಾರಣ ಹುಡುಕುತ್ತಿದ್ದರು. ಆದ್ದರಿಂದ ಅವರು ಯೇಸುವಿಗೆ “ಸಬ್ಬತ್‌ದಿನದಲ್ಲಿ ಗುಣಪಡಿಸುವುದು ಸರಿಯೇ?” ಎಂದು ಕೇಳಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯಸಮ್ಮತವೋ?” ಎಂದು ಕೇಳಿದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್10 ಥೈ ವಾರ್‍ಯಾನ್‍ಮಾರಲ್ಲ್ಯಾ ಹಾತಾಚೊ ಎಕ್ ಮಾನುಸ್ ಹೊತ್ತೊ. ಉಲ್ಲಿ ಲೊಕಾ ಜೆಜು ಕಾಯ್ತರ್ ಚುಕ್ ಕರ್‍ತಾ ಕಾಯ್ ಬಗುನ್ ತೆಚೆ ವರ್‍ತಿ ಝುಟೊ ಅಪ್ವಾದ್ ಘಾಲುಚೆ ಮನುನ್ ರಾಕುಂಗೆತ್ ಹೊತ್ತಿ. ತೆಚೆಸಾಟ್ನಿ ತೆನಿ ಜೆಜುಕ್, “ಅರಾಮ್ ಘೆತಲ್ಯಾ ದಿಸಿ ಮಟ್ಲ್ಯಾರ್ ಸಾಬ್ಬತಾಚ್ಯಾ ದಿಸಿ ಎಕ್ಲ್ಯಾಕ್ ಗುನ್ ಕರ್‍ತಲೆ ಅಮ್ಚ್ಯಾ ಖಾಯ್ದ್ಯಾ ಪರ್‍ಕಾರ್ ಚುಕ್ ನ್ಹಯ್ ಕಾಯ್?” ಮನುನ್ ಇಚಾರ್‍ಲ್ಯಾನಿ. ಅಧ್ಯಾಯವನ್ನು ನೋಡಿ |