ಪ್ರಸಂಗಿ 8:1 - ಕನ್ನಡ ಸತ್ಯವೇದವು J.V. (BSI)1 ಜ್ಞಾನಿಯ ಹಾಗಿರುವವನು ಯಾರು? ವಿಷಯವನ್ನು ವಿವರಿಸಬಲ್ಲವರು ಯಾರು? ಜ್ಞಾನದಿಂದ ಒಬ್ಬನ ಮುಖವು ಪ್ರಕಾಶಗೊಳ್ಳುವದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಜ್ಞಾನಿಯ ಹಾಗೆ ಇರುವವನು ಯಾರು? ವಿಷಯವನ್ನು ವಿವರಿಸಬಲ್ಲವರು ಯಾರು? ಜ್ಞಾನದಿಂದ ಒಬ್ಬನ ಮುಖವು ಪ್ರಕಾಶಗೊಳ್ಳುವುದು, ಒರಟು ಮುಖವು ಬದಲಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಜ್ಞಾನಿಗೆ ಸಮಾನರು ಯಾರು? ಅವನಲ್ಲದೆ ಬಗೆಹರಿಸಬಲ್ಲವರು ಯಾರು? ಜ್ಞಾನವು ಮನುಷ್ಯನ ಮುಖವನ್ನು ವಿಕಾಸಗೊಳಿಸುತ್ತದೆ; ಗಂಟುಮೋರೆಯನ್ನು ಮಾರ್ಪಡಿಸುತ್ತದೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಜ್ಞಾನಿಯು ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ವಿವರಿಸುವಂತೆ ಬೇರೆ ಯಾರೂ ಅರ್ಥಮಾಡಿಕೊಳ್ಳಲಾರರು ಮತ್ತು ವಿವರಿಸಲಾರರು. ಜ್ಞಾನಿಯ ಮುಖವು ಜ್ಞಾನದಿಂದ ಪ್ರಕಾಶಮಾನವಾಗಿರುವುದು; ಅದು ವ್ಯಸನದ ಮುಖವನ್ನು ಸಂತೋಷದ ಮುಖವನ್ನಾಗಿ ಮಾರ್ಪಡಿಸುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಜ್ಞಾನಿಯ ಹಾಗೆ ಇರುವವರು ಯಾರು? ಈ ಸಂಗತಿಗಳ ಅರ್ಥವನ್ನು ವಿವರಿಸಬಲ್ಲವರು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖವನ್ನು ಬೆಳಗಿಸುತ್ತದೆ ಜ್ಞಾನವು ಕಠಿಣ ಮುಖಭಾವವನ್ನು ಸಹ ಬದಲಾಯಿಸುತ್ತದೆ. ಅಧ್ಯಾಯವನ್ನು ನೋಡಿ |