Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಸಂಗಿ 11:4 - ಕನ್ನಡ ಸತ್ಯವೇದವು J.V. (BSI)

4 ಗಾಳಿಯನ್ನು ನೋಡುತ್ತಲೇ ಇರುವವನು ಬೀಜ ಬಿತ್ತನು; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯನು .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಗಾಳಿಯನ್ನು ನೋಡುತ್ತಲೇ ಇರುವವನು ಬೀಜವನ್ನು ಬಿತ್ತುವುದಿಲ್ಲ, ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರನ್ನು ಕೊಯ್ಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಗಾಳಿಗಾಗಿಯೇ ಕಾದಿರುವವನು, ಮೋಡಕ್ಕಾಗಿಯೇ ಎದುರು ನೋಡುತ್ತಿರುವವನು ಎಂದಿಗೂ ಬೀಜಬಿತ್ತಲಾರನು; ಎಂದಿಗೂ ಪೈರು ಕೊಯ್ಯಲಾರನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಒಳ್ಳೆಯ ಹವಾಮಾನಕ್ಕಾಗಿ ಕಾದುಕೊಂಡಿರುವವನು ಬೀಜ ಬಿತ್ತುವುದಿಲ್ಲ; ಮಳೆ ಬರಬಹುದೆಂದು ಮೋಡವನ್ನು ನೋಡುತ್ತಿರುವವನು ಪೈರು ಕೊಯ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯಾವನು ಗಾಳಿಗಾಗಿ ಕಾದಿರುವನೋ, ಅವನು ಬೀಜ ಬಿತ್ತುವುದಿಲ್ಲ. ಮೋಡಗಳನ್ನು ಗಮನಿಸುತ್ತಿರುವವನು ಸಹ ಪೈರು ಕೊಯ್ಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಸಂಗಿ 11:4
5 ತಿಳಿವುಗಳ ಹೋಲಿಕೆ  

ಮೈಗಳ್ಳನು ಮಳೆಗಾಲದಲ್ಲಿ ಹೊಲಗೇಯನು; ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?


ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ.


ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದೀತು ಎಂಬದು ಸೋಮಾರಿಯ ನೆವ.


ಮಳೆ ತುಂಬಿದ ಮೋಡಗಳು ಭೂವಿುಯ ಮೇಲೆ ಸುರಿದುಬಿಡುವವು; ಮರವು ತೆಂಕಣಕ್ಕಾಗಲಿ ಬಡಗಣಕ್ಕಾಗಲಿ ಬಿದ್ದರೆ ಬಿದ್ದ ಹಾಗೆಯೇ ಇರುವದು.


ಗಾಳಿಯ ಗತಿಯನ್ನೂ ಗರ್ಭಿಣಿಯ ಗರ್ಭದೊಳಗೆ ಎಲುಬು ಬೆಳೆಯುವ ರೀತಿಯನ್ನೂ ನೀನು ಹೇಗೆ ತಿಳಿಯುವದಿಲ್ಲವೋ ಹಾಗೆ ಸರ್ವಕರ್ತನಾದ ದೇವರ ಕಾರ್ಯವನ್ನು ಅರಿಯೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು