Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 4:20 - ಕನ್ನಡ ಸತ್ಯವೇದವು J.V. (BSI)

20 ಯಾವನು ನಮಗೆ ಜೀವಶ್ವಾಸವೋ, ಯಾವನು ಯೆಹೋವನ ಅಭಿಷಿಕ್ತನೋ ಯಾವನನ್ನು ಆಶ್ರಯಿಸಿ ಜನಾಂಗಗಳ ಮಧ್ಯದಲ್ಲಿ ಉಳಿಯುವೆವು ಎಂದು ನಾವು ನಂಬಿಕೊಂಡಿದ್ದೆವೋ ಅವನು ಅವರ ಗುಂಡಿಗಳಲ್ಲಿ ಸಿಕ್ಕಿಬಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಯಾವನು ನಮಗೆ ಜೀವಶ್ವಾಸವೋ, ಯಾವನು ಯೆಹೋವನ ಅಭಿಷಿಕ್ತನೋ, ಯಾವನನ್ನು ಆಶ್ರಯಿಸಿ ಜನಾಂಗಗಳ ಮಧ್ಯದಲ್ಲಿ ಉಳಿಯುವೆವು ಎಂದು ನಾವು ನಂಬಿಕೊಂಡಿದ್ದೆವೋ ಅವನು ಅವರ ಗುಂಡಿಗಳಲ್ಲಿ ಸಿಕ್ಕಿಬಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಯಾವನನ್ನು ಕುರಿತು ನಾವು: “ನಮ್ಮ ಬಾಳಿನ ಉಸಿರು, ದೇವರಿಂದ ಅಭಿಷಿಕ್ತನು, ಇವನ ಆಶ್ರಯದಿಂದಲೆ ರಾಷ್ಟ್ರಗಳ ನಡುವೆ ನಮಗೆ ಉಳಿವು” ಎಂದುಕೊಂಡೆವೋ ಅಂಥವನೇ ಸಿಕ್ಕಿಬಿದ್ದಿದ್ದಾನೆ ಹಗೆಗಳು ತೋಡಿದ ಗುಳಿಯೊಳಗೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನಮಗೆ ರಾಜನು ಬಹಳ ಮುಖ್ಯವಾಗಿದ್ದನು. ಅವನು ನಮಗೆ ಉಸಿರಿನಷ್ಟೇ ಅಮೂಲ್ಯವಾಗಿದ್ದನು. ಆದರೆ ಅವರು ರಾಜನನ್ನೇ ಸೆರೆಹಿಡಿದರು. ಯೆಹೋವನೇ, ಆ ರಾಜನನ್ನು ಆರಿಸಿಕೊಂಡಿದ್ದನು. “ನಾವು ಅವನ ನೆರಳಿನಲ್ಲಿ ಬದುಕುತ್ತೇವೆ. ಅವನು ನಮ್ಮನ್ನು ಜನಾಂಗಗಳವರಿಂದ ಸಂರಕ್ಷಿಸುವನು” ಎಂದು ನಾವು ರಾಜನ ಬಗ್ಗೆ ಹೇಳಿಕೊಂಡಿದ್ದೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಯಾರ ವಿಷಯವಾಗಿ ನಾವು ಅವನ ನೆರಳಿನ ಕೆಳಗೆ ಬೇರೆ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿಕೊಂಡೆವೋ, ನಮ್ಮ ಮೂಗಿನ ಉಸಿರಾದ ಆ ಯೆಹೋವ ದೇವರ ಅಭಿಷಿಕ್ತನು ಅವರ ಬಲೆಗಳಲ್ಲಿ ಸಿಕ್ಕಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 4:20
27 ತಿಳಿವುಗಳ ಹೋಲಿಕೆ  

ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರ್ಲಿನಲ್ಲಿ ಸಿಕ್ಕಿಬೀಳುವನು; ಕಸ್ದೀಯ ದೇಶದ ಬಾಬೆಲಿಗೆ ಅವನನ್ನು ಒಯ್ಯುವೆನು, ಅಲ್ಲೇ ಇದ್ದು ಸಾಯುವನು, ಆದರೂ ಆ ದೇಶವನ್ನು ನೋಡನು.


ಕಸ್ದೀಯರ ಸೈನಿಕರು ಅವರನ್ನು ಹಿಂದಟ್ಟುತ್ತಾ ಯೆರಿಕೋವಿನ ಬೈಲಿನಲ್ಲಿ ಚಿದ್ಕೀಯನನ್ನು ತಗಲಿ ಹಿಡಿದು ಹಮಾತ್ ಸೀಮೆಯ ರಿಬ್ಲದಲ್ಲಿದ್ದ ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಬಂದರು; ಆ ಬಾಬೆಲಿನ ಅರಸನು ಅಲ್ಲಿ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ


ಚೆರೂಯಳ ಮಗನಾದ ಅಬೀಷೈಯು - ಯೆಹೋವನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ ಅಂದನು.


ಹೀಗಿರಲು ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು.


ಚೀಯೋನಿನ ಹೆಬ್ಬಾಗಿಲುಗಳು ನೆಲದಲ್ಲಿ ಹೂತುಕೊಂಡಿವೆ; ಅದರ ಅಗುಳಿಗಳನ್ನು ಮುರಿದು ಚೂರು ಚೂರು ಮಾಡಿದ್ದಾನೆ; ಅದರ ಅರಸನೂ ಸರದಾರರೂ ಅನ್ಯಜನಾಂಗಗಳೊಳಗೆ ಸೇರಿಕೊಂಡಿದ್ದಾರೆ; ಧರ್ಮೋಪದೇಶವೇ ಕಾಣೆ; ಅದರ ಪ್ರವಾದಿಗಳಿಗೆ ಕೂಡಾ ಯೆಹೋವನಿಂದ ಯಾವ ದರ್ಶನವೂ ಇಲ್ಲ.


ಗಿಲ್ಬೋವಗುಡ್ಡಗಳೇ, ನಿಮ್ಮ ಮೇಲೆ ಮಂಜೂ ಮಳೆಯೂ ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ; ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಗಳು ಬಿದ್ದಿರುತ್ತವೆ. ಸೌಲನ ಗುರಾಣಿಯೂ ಅಭಿಷಿಕ್ತನಲ್ಲದವನ ಗುರಾಣಿಯಂತೆ ಬಿದ್ದಿದೆ.


ದಾವೀದನು ಅವನಿಗೆ - ನೀನು ಕೈಯೆತ್ತಿ ಯೆಹೋವನ ಅಭಿಷಿಕ್ತನನ್ನು ಕೊಲ್ಲುವದಕ್ಕೆ ಏಕೆ ಭಯಪಡಲಿಲ್ಲ ಎಂದು ಹೇಳಿ


ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಡಂಬಡಿಕೆಯನ್ನು ಮೀರಿದನಲ್ಲವೇ; [ಕೈಯ ಮೇಲೆ] ಕೈ ಇಟ್ಟರೇನು? ಇದನ್ನೆಲ್ಲಾ ಮಾಡಿಬಿಟ್ಟನಲ್ಲವೇ? ಇವನು ಪಾರಾಗನು.


ಕಸ್ದೀಯರ ಸೈನ್ಯದವರು ಅರಸನಾದ ಚಿದ್ಕೀಯನನ್ನು ಹಿಂದಟ್ಟಿ ಯೆರಿಕೋವಿನ ಬೈಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಎಲ್ಲಾ ಸೈನಿಕರು ಅವನನ್ನು ಬಿಟ್ಟು ಚದರಿಹೋಗಿದ್ದರು.


ಆಗ ಸೈನ್ಯದವರು ಅವನಿಗೆ - ನೀನು ಬರಬಾರದು; ನಾವು ಸೋತು ಓಡಿ ಹೋದರೆ ಶತ್ರುಗಳು ಲಕ್ಷಿಸುವದಿಲ್ಲ; ನಮ್ಮಲ್ಲಿ ಅರ್ಧ ಜನರು ಸತ್ತರೂ ಅದು ಅವರಿಗೆ ದೊಡ್ಡ ಲಾಭವಲ್ಲ. ನಮ್ಮಂಥ ಹತ್ತು ಸಾವಿರ ಜನರ ಬೆಲೆ ನಿನ್ನೊಬ್ಬನಿಗೇ ಉಂಟು. ನೀನು ಊರಲ್ಲಿದ್ದುಕೊಂಡು ಅಲ್ಲಿಂದಲೇ ನಮಗೆ ಬೇಕಾದ ಸಹಾಯ ಮಾಡಬಹುದು ಅಂದರು.


ನೀನು ಹೀಗೆ ಮಾಡುವದು ಸರಿಯಲ್ಲ. ಯೆಹೋವನಾಣೆ, ಆತನ ಅಭಿಷಿಕ್ತನಾಗಿರುವ ನಿಮ್ಮ ಒಡೆಯನನ್ನು ಕಾಯದಿರುವ ನೀವು ಮರಣಕ್ಕೆ ಪಾತ್ರರೇ ಹೌದು. ಅರಸನ ತಲೆಯ ಬಳಿಯಲ್ಲಿದ್ದ ಬರ್ಜಿಯೂ ತಂಬಿಗೆಯೂ ಏನಾದವೋ ನೋಡು ಎಂದು ಕೂಗಿ ಹೇಳಿದನು.


ಆದರೆ ದಾವೀದನು - ಅವನನ್ನು ಕೊಲ್ಲಬೇಡ; ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನಾದರೂ ನಿರಪರಾಧಿಯೆಂದು ಎಣಿಸಲ್ಪಡುವನೋ ಅಂದನು.


ಈಹೊತ್ತು ಯೆಹೋವನು ಗವಿಯಲ್ಲಿ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದನೆಂಬದು ಈಗ ನಿನಗೆ ಗೊತ್ತಾಯಿತಲ್ಲವೋ? ನಿನ್ನನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು; ಆದರೆ ನಾನು ಅವರಿಗೆ - ಯೆಹೋವನ ಅಭಿಷಿಕ್ತನಾದ ನನ್ನ ಒಡೆಯನ ಮೇಲೆ ಕೈಹಾಕುವದಿಲ್ಲ ಎಂದು ಹೇಳಿ ನಿನ್ನನ್ನು ಉಳಿಸಿದೆನು.


ಅವನು ತನ್ನ ಜನರಿಗೆ - ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ಒಡೆಯನೂ ಆಗಿದ್ದಾನೆ; ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿಮಾಡಲಿ ಎಂದು ಹೇಳಿದನು.


ಅವರು ಬರಲು ಅವನು ಎಲೀಯಾಬನನ್ನು ನೋಡಿ - ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕೆ ಆರಿಸಿಕೊಂಡವನು ಆತನ ಮುಂದೆ ಇದ್ದಾನೆ ಎಂದುಕೊಂಡನು.


ಸಮುವೇಲನು ತಿರಿಗಿ - ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲವೆಂಬದಕ್ಕೆ ಯೆಹೋವನೂ ಆತನ ಅಭಿಷಿಕ್ತನೂ ಸಾಕ್ಷಿಯಾಗಿದ್ದಾರೆ ಎನ್ನಲು ಅವರು - ಹೌದು, ಸಾಕ್ಷಿಯಾಗಿದ್ದಾರೆ ಎಂದು ನುಡಿದರು.


ಇಲ್ಲಿ ನಿಂತುಕೊಂಡಿರುವ ನಾನು ಯಾರ ಎತ್ತನ್ನಾಗಲಿ ಕತ್ತೆಯನ್ನಾಗಲಿ ತೆಗೆದುಕೊಂಡು ಯಾರನ್ನಾದರೂ ವಂಚಿಸಿ ಪೀಡಿಸಿದ್ದೂ ಲಂಚತೆಗೆದುಕೊಂಡು ಕುರುಡನಂತೆ ತೀರ್ಪುಮಾಡಿದ್ದೂ ಉಂಟೋ? ಇದ್ದರೆ ಯೆಹೋವನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ಹೇಳಿರಿ; ನಾನು ಅದನ್ನು ಹಿಂದಕ್ಕೆ ಕೊಡುತ್ತೇನೆ ಅನ್ನಲು ಅವರು -


ನಮ್ಮ ತಂದೆಯ ಪ್ರಾಣವೂ ಇವನ ಪ್ರಾಣವೂ ಒಂದೇಯಾಗಿರುವದರಿಂದ ನಾನು ನಿನ್ನ ಸೇವಕನಾದ ನನ್ನ ತಂದೆಯ ಬಳಿಗೆ ಸೇರಿದಾಗ ಈ ಹುಡುಗನು ಸಂಗಡ ಇಲ್ಲದೆ ಹೋದರೆ ಹುಡುಗನು ಬರಲಿಲ್ಲವೆಂದು ಅವನು ತಿಳಿದಕೂಡಲೇ ಸಾಯುವನು.


ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತವನ್ನು ರಚಿಸಿದನು. ಎಲ್ಲಾ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗೆ ತಮ್ಮ ಶೋಕಗೀತಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತಗಳನ್ನು ಹಾಡುವದು ಇಸ್ರಾಯೇಲ್ಯರಲ್ಲಿ ಒಂದು ಪದ್ಧತಿಯಾಯಿತು.


ಅನಂತರ ಕಸ್ದೀಯರು ಅವನನ್ನು ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ತೆಗೆದುಕೊಂಡು ಬರಲು ಆ ಅರಸನು ಅವನಿಗೆ ಶಿಕ್ಷೆಯನ್ನು ವಿಧಿಸಿ


ಅದರ ಎಲೆಗಳು ಅಂದ, ಹಣ್ಣುಗಳು ಬಹಳ, ಅದರಿಂದ ಎಲ್ಲಕ್ಕೂ ಆಹಾರ, ನೆರಳು ಭೂಜಂತುಗಳಿಗೆ ಆಶ್ರಯ, ಕೊಂಬೆಗಳು ಆಕಾಶಪಕ್ಷಿಗಳಿಗೆ ನೆಲೆ, ಅದು ಸಕಲ ಜೀವಿಗಳಿಗೂ ಜೀವನ.


ಅದು - ನೀವು ಯಥಾರ್ಥಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವದಾದರೆ ಬಂದು ನನ್ನ ನೆರಳನ್ನು ಆಶ್ರಯಿಸಿಕೊಳ್ಳಿರಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರುವೃಕ್ಷಗಳನ್ನು ದಹಸಿಬಿಡುವದು ಎಂದಿತು.


ಮತ್ತು ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂವಿುಯಲ್ಲಿ ನೀರಿನ ಕಾಲುವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.


ಇದಲ್ಲದೆ ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯದಲ್ಲಿ ಅದರ ನೆರಳನ್ನು ಆಶ್ರಯಿಸಿದವರು ಅದರೊಂದಿಗೆ ಪಾತಾಳಕ್ಕೆ ಇಳಿದು ಖಡ್ಗಹತರ ಜೊತೆಗೆ ಸೇರಿದರು.


ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳಲ್ಲೆಲ್ಲಾ ನಿನ್ನವರನ್ನು ಉದ್ಧರಿಸುವನೋ? ನನಗೆ ರಾಜನನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ; ಆ ಪಾಲಕರು ಎಲ್ಲಿ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು