Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 3:5 - ಕನ್ನಡ ಸತ್ಯವೇದವು J.V. (BSI)

5 ನನ್ನ ಸುತ್ತಲು ಶ್ರಮಸಂಕಟಗಳ ದಿಬ್ಬಗಳನ್ನು ಹಾಕಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನನ್ನ ಸುತ್ತಲು ಶ್ರಮಸಂಕಟಗಳ ದಿಬ್ಬಗಳನ್ನು ಹಾಕಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನನ್ನನ್ನು ಹಿಡಿದು ಬಂದಿಸಿರುವನು ದಿಬ್ಬಗಳ ಮಧ್ಯೆ ಸುತ್ತುಗಟ್ಟಿರುವನು ಕಷ್ಟಸಂಕಟಗಳ ನಡುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆತನು ನನ್ನನ್ನು ಕಠೋರತೆಯಿಂದಲೂ ಆಪತ್ತಿನಿಂದಲೂ ಸುತ್ತುವರಿದು ಮುತ್ತಿಗೆಹಾಕಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅವರು ನನಗೆ ವಿರೋಧವಾಗಿ ಕಟ್ಟಿದ್ದಾರೆ ಮತ್ತು ನನ್ನನ್ನು ವಿಷದಿಂದಲೂ, ಸಂಕಟದಿಂದಲೂ ಸುತ್ತಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 3:5
8 ತಿಳಿವುಗಳ ಹೋಲಿಕೆ  

ನಾನು ಅಲೆದು ಕಷ್ಟಪಟ್ಟದ್ದನ್ನು ಚಿತ್ತಕ್ಕೆ ತಂದುಕೋ, ಕಹಿಯಾದ ನನ್ನ ಆಹಾರಪಾನಗಳನ್ನು ಜ್ಞಾಪಕ ಮಾಡಿಕೋ,


ಆದಕಾರಣ ಸೇನಾಧೀಶ್ವರನಾದ ಯೆಹೋವನು ಪ್ರವಾದಿಗಳ ವಿಷಯದಲ್ಲಿ ಹೀಗನ್ನುತ್ತಾನೆ - ಆಹಾ, ನಾನು ಇವರಿಗೆ ಕಹಿಯಾದ ಆಹಾರಪಾನಗಳನ್ನು ಕೊಡುವೆನು; ಯೆರೂಸಲೇವಿುನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲೆಲ್ಲಾ ಹರಡಿದೆಯಷ್ಟೆ.


ನಾನು ಮುಂದೆ ಹೋಗದ ಹಾಗೆ ಆತನು ನನ್ನ ದಾರಿಗೆ ಅಡ್ಡಗೋಡೆ ಹಾಕಿ ನನ್ನ ಹಾದಿಗಳನ್ನು ಕತ್ತಲು ಕವಿಯುವಂತೆ ಮಾಡಿದ್ದಾನೆ.


ಆಹಾ, ನಾನು ಈ ಜನರಿಗೆ ಕಹಿಯಾದ ಆಹಾರಪಾನಗಳನ್ನು ಕೊಡುವೆನು.


[ಆ ಕಾಲದಲ್ಲಿ ಜನರು ಹೀಗನ್ನುವರು - ] ಸುಮ್ಮನೆ ಕೂತಿರುವದೇಕೆ? ಕೂಡಿಕೊಳ್ಳಿರಿ, ಕೋಟೆಕೊತ್ತಲಗಳ ಪಟ್ಟಣಗಳಲ್ಲಿ ಸೇರಿ ಅಲ್ಲೇ ನಾಶವಾಗೋಣ; ನಾವು ನಮ್ಮ ದೇವರಾದ ಯೆಹೋವನಿಗೆ ಪಾಪಮಾಡಿದ್ದರಿಂದ ಆತನು ನಮ್ಮನ್ನು ನಾಶನಕ್ಕೆ ಗುರಿಮಾಡಿ ಕಹಿಯಾದ ನೀರನ್ನು ಕುಡಿಸಿದ್ದಾನಷ್ಟೆ.


ನನಗೆ ಉಣ್ಣುವದಕ್ಕೆ ಕಹಿಯಾದ ವಸ್ತುವನ್ನೂ ಬಾಯಾರಿದಾಗ ಹುಳಿತ ದ್ರಾಕ್ಷಾರಸವನ್ನೂ ಕೊಟ್ಟರು.


ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು