Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 3:46 - ಕನ್ನಡ ಸತ್ಯವೇದವು J.V. (BSI)

46 ನಮ್ಮ ಶತ್ರುಗಳೆಲ್ಲಾ ನಮ್ಮನ್ನು ನೋಡಿ ಬಾಯಿ ಕಿಸಿದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ನಮ್ಮ ಶತ್ರುಗಳೆಲ್ಲಾ ನಮ್ಮನ್ನು ನೋಡಿ ಹಾಸ್ಯಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 “ಶತ್ರುಗಳೆಲ್ಲರು ನಮ್ಮನ್ನು ನೋಡಿ ಬಾಯಿ ಕಿಸಿದಿದ್ದಾರೆ ನಮಗೆ ವಿರುದ್ಧವಾಗಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ನಮ್ಮ ಶತ್ರುಗಳೆಲ್ಲಾ ನಮ್ಮೊಂದಿಗೆ ಕೋಪದಿಂದ ಮಾತಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ನಮ್ಮ ಎಲ್ಲಾ ಶತ್ರುಗಳು ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 3:46
10 ತಿಳಿವುಗಳ ಹೋಲಿಕೆ  

ನಿನ್ನ ಶತ್ರುಗಳೆಲ್ಲಾ ನಿನ್ನನ್ನು ನೋಡಿ ಬಾಯಿ ಕಿಸಿದು ಛೀಗುಟ್ಟಿ ಹಲ್ಲು ಕಡಿಯುತ್ತಾರೆ; ಆಹಾ, ಆಕೆಯನ್ನು ನುಂಗಿಬಿಟ್ಟಿದ್ದೇವೆ, ನಾವು ನಿರೀಕ್ಷಿಸುತ್ತಿದ್ದ ದಿನವು ಇದೇ ಇದು, ಬಂದೊದಗಿತು, ಕಣ್ಣಾರೆ ಕಂಡೆವು ಅಂದುಕೊಳ್ಳುತ್ತಾರೆ.


ಮ್ಲೇಚ್ಫರು - ಅವರ ದೇವರು ಎಲ್ಲಿ ಎಂದು ಅನ್ನುವದೇಕೆ? ನಿನ್ನ ಸೇವಕರ ರಕ್ತವನ್ನು ಸುರಿಸಿದವರಿಗೆ ನಮ್ಮ ಮುಂದೆಯೇ ದಂಡನೆಯಾದದ್ದು ಜನಾಂಗಗಳಿಗೆ ಗೊತ್ತಾಗಲಿ.


ನಾವು ನಮ್ಮ ನೆರೆಹೊರೆಯ ಜನಾಂಗಗಳಿಗೆ ನಿಂದಾಸ್ಪದರಾದೆವು; ಸುತ್ತಣವರ ಪರಿಹಾಸ್ಯ ಕುಚೋದ್ಯಗಳಿಗೆ ಗುರಿಯಾದೆವು.


ಆದರೆ ಐಗುಪ್ತ್ಯರಿಗೂ ಇಸ್ರಾಯೇಲ್ಯರಿಗೂ ಯೆಹೋವನು ವ್ಯತ್ಯಾಸಮಾಡಿದ್ದಾನೆಂಬದು ನಿಮಗೆ ತಿಳಿಯುವಂತೆ ಇಸ್ರಾಯೇಲ್ಯರಲ್ಲಿರುವ ಮನುಷ್ಯರ ಮೇಲಾಗಲಿ ಪಶುಗಳ ಮೇಲಾಗಲಿ ಒಂದು ನಾಯಿಯಾದರೂ ಬೊಗಳುವದಿಲ್ಲ.


ಅವರು ಗರ್ಜಿಸುವ ಉಗ್ರಸಿಂಹಗಳಂತೆ ನನ್ನನ್ನು ನುಂಗುವದಕ್ಕೆ ಬಾಯಿ ತೆರೆದಿದ್ದಾರೆ.


ನಾನು ಹೊಯ್ಯಲ್ಪಟ್ಟ ನೀರಿನಂತಿದ್ದೇನೆ; ನನ್ನ ಎಲುಬುಗಳೆಲ್ಲಾ ಸಡಲಿಹೋಗಿವೆ. ನನ್ನ ಗುಂಡಿಗೆ ಮೇಣದಂತೆ ನನ್ನಲ್ಲಿ ಕರಗಿಹೋಗಿದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು