Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 3:36 - ಕನ್ನಡ ಸತ್ಯವೇದವು J.V. (BSI)

36 ವ್ಯಾಜ್ಯವನ್ನು ಅನ್ಯಾಯವಾಗಿ ತೀರಿಸುವದು, ಇವುಗಳನ್ನು ಕರ್ತನು ಲಕ್ಷ್ಯಕ್ಕೆ ತಾರನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ವ್ಯಾಜ್ಯವನ್ನು ಅನ್ಯಾಯವಾಗಿ ತೀರಿಸುವುದೂ, ಇವುಗಳನ್ನು ಕರ್ತನು ಲಕ್ಷ್ಯಕ್ಕೆ ತಾರನೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಅನ್ಯಾಯವಾಗಿ ವ್ಯಾಜ್ಯತೀರಿಸುವುದನ್ನೂ ಸ್ವಾಮಿ ಲಕ್ಷ್ಯಕ್ಕೆ ತಂದುಕೊಳ್ಳದೆ ಇರುತ್ತಾನೆಯೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ವ್ಯಾಜ್ಯದಲ್ಲಿ ದೊರೆಯಬೇಕಾದ ನ್ಯಾಯವನ್ನು ದೊರೆಯದಂತೆ ಮಾಡುವುದು ಯೆಹೋವನಿಗೆ ಇಷ್ಟವಿಲ್ಲ. ಯೆಹೋವನು ಈ ಸಂಗತಿಗಳಲ್ಲಿ ಯಾವುದನ್ನೂ ಇಷ್ಟಪಡುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಮನುಷ್ಯನನ್ನು ಅವನ ಜಗಳದಲ್ಲಿ ಅನ್ಯಾಯವಾಗಿ ತೀರಿಸುವುದು ಕರ್ತದೇವರು ಮೆಚ್ಚುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 3:36
8 ತಿಳಿವುಗಳ ಹೋಲಿಕೆ  

ಕೇಡನ್ನು ನೋಡಲಾರದ ಅತಿಪವಿತ್ರ ದೃಷ್ಟಿಯುಳ್ಳವನೇ, ಕೆಡುಕನ್ನು ಕಟಾಕ್ಷಿಸಲಾರದವನೇ, ಏಕೆ ಕೆಡುಕರನ್ನು ಕಟಾಕ್ಷಿಸುತ್ತೀ? ದುಷ್ಟನು ತನಗಿಂತ ಯೋಗ್ಯನನ್ನು ನುಂಗಿಬಿಡುವಾಗ ಏಕೆ ಸುಮ್ಮನಿದ್ದೀ?


ಸತ್ಯವು ಇಲ್ಲವೇ ಇಲ್ಲ, ಕೇಡನ್ನು ಬಿಟ್ಟವನು ಸೂರೆಯಾಗುತ್ತಾನೆ.


ಯೆಹೋವನು ಹೀಗನ್ನುತ್ತಾನೆ - ನೀತಿನ್ಯಾಯಗಳನ್ನು ಆಚರಿಸಿರಿ, ಸುಲಿಗೆಯಾದವನನ್ನು ದೋಚಿಕೊಂಡವನ ಕೈಯಿಂದ ಬಿಡಿಸಿರಿ; ವಿದೇಶಿ, ಅನಾಥ, ವಿಧವೆ, ಇವರಿಗೆ ಯಾವ ಅನ್ಯಾಯವನ್ನೂ ಹಿಂಸೆಯನ್ನೂ ಮಾಡಬೇಡಿರಿ; ನಿರ್ದೋಷಿಯ ರಕ್ತವನ್ನು ಈ ಸ್ಥಳದಲ್ಲಿ ಸುರಿಸದಿರಿ.


ದುಃಖಕಾಲ ತೀರಿದನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರತರಿಸಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು; ಆಕೆಯು ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನ ಈ ಕೃತ್ಯವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.


ಇಬ್ಬರು ವ್ಯಾಜ್ಯವಾಡುತ್ತಾ ನ್ಯಾಯಾಧಿಪತಿಗಳ ಬಳಿಗೆ ಬಂದರೆ ನ್ಯಾಯಾಧಿಪತಿಗಳು ತಪ್ಪಿಲ್ಲದವನನ್ನು ನಿರಪರಾಧಿ ಎಂದೂ ತಪ್ಪುಳ್ಳವನನ್ನು ಅಪರಾಧಿ ಎಂದೂ ತೀರ್ಮಾನಿಸಬೇಕು.


ಯೆಹೋವನೇ, ನಿನ್ನ ಪ್ರಜೆಯನ್ನು ಜಜ್ಜಿಹಾಕುತ್ತಾರೆ; ನಿನ್ನ ಸ್ವಾಸ್ತ್ಯವನ್ನು ಕುಗ್ಗಿಸಿಬಿಡುತ್ತಾರೆ;


ಇದು ನನಗೆ ಗೊತ್ತಿರಲಿಲ್ಲ ಎಂದು ನೀನು ನೆವ ಹೇಳಿದರೆ ಹೃದಯಶೋಧಕನು ಗ್ರಹಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆಬಿಟ್ಟಾನೇ?


ಯೆಹೋವನೇ, ನನಗಾದ ಅನ್ಯಾಯವನ್ನು ನೋಡಿದ್ದೀ, ನನಗೆ ನ್ಯಾಯತೀರಿಸು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು