Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 3:11 - ಕನ್ನಡ ಸತ್ಯವೇದವು J.V. (BSI)

11 ನಾನು ನಡೆದ ದಾರಿಗಳಿಂದ ನನ್ನನ್ನು ತಪ್ಪಿಸಿ ಸೀಳಿಬಿಟ್ಟು ಹಾಳುಮಾಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ನಾನು ನಡೆದ ದಾರಿಗಳಿಂದ ನನ್ನನ್ನು ತಪ್ಪಿಸಿದ್ದಾನೆ. ಆತನು ನನ್ನನ್ನು ದಿಕ್ಕಿಲ್ಲದವನಂತೆ ಮಾಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಆತ ನನಗೆ ದಾರಿ ತಪ್ಪಿಸಿರುವನು ತುಂಡರಿಸಿ ದಿಕ್ಕಿಲ್ಲದವನಂತೆ ಮಾಡಿರುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಯೆಹೋವನು ನನ್ನನ್ನು ನನ್ನ ದಾರಿಯಿಂದ ಓಡಿಸಿದನು. ಆತನು ನನ್ನನ್ನು ಚೂರುಚೂರು ಮಾಡಿದನು. ಆತನು ನನ್ನನ್ನು ಅಸಹಾಯಕನನ್ನಾಗಿ ತೊರೆದುಬಿಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅವರು ನನ್ನ ಮಾರ್ಗಗಳನ್ನು ತಪ್ಪಿಸಿ, ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ, ನನ್ನನ್ನು ಹಾಳು ಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 3:11
20 ತಿಳಿವುಗಳ ಹೋಲಿಕೆ  

ಅವರು - ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ; ನಮ್ಮನ್ನು ಸೀಳಿಬಿಟ್ಟವನು ಆತನೇ, ಆತನೇ ಸ್ವಸ್ಥಮಾಡುವನು; ಹೊಡೆದವನು ಆತನೇ, ಆತನೇ ನಮ್ಮ ಗಾಯಗಳನ್ನು ಕಟ್ಟುವನು.


ಆತನು ಮೇಲಣಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳಲ್ಲಿ ವ್ಯಾಪಿಸಿದೆ; ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ, ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ.


ಆಗ ಅವರು ತಮ್ಮ ತಲೆಗಳ ಮೇಲೆ ಮಣ್ಣನ್ನು ಹೊಯಿದುಕೊಂಡು ಅಳುತ್ತಾ ಗೋಳಾಡುತ್ತಾ - ಅಯ್ಯೋ, ಅಯ್ಯೋ, ಸಮುದ್ರದ ಮೇಲೆ ಹಡಗುಳ್ಳವರೆಲ್ಲರನ್ನು ತನ್ನ ಅಮೂಲ್ಯ ದ್ರವ್ಯಗಳಿಂದ ಐಶ್ವರ್ಯವಂತರನ್ನಾಗಿ ಮಾಡಿದ ಈ ಮಹಾ ಪಟ್ಟಣಕ್ಕೆ ಎಂಥಾ ಗತಿ ಬಂತು; ಇವಳು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ ಎಂದು ಕೂಗಿ ಹೇಳಿದರು.


ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.


ಅಲ್ಲದೆ ಸಿಂಹವು ಕಾಡುಮೃಗಗಳನ್ನು, ಪ್ರಾಯದ ಸಿಂಹವು ಕುರಿಹಿಂಡುಗಳನ್ನು ಹಾದುಹೋಗುವಾಗೆಲ್ಲಾ ಅವುಗಳನ್ನು ಯಾರೂ ರಕ್ಷಿಸಲಾರದಂತೆ ತುಳಿದು ಸೀಳಿಹಾಕುವ ಹಾಗೆ ಯಾಕೋಬಿನ ಜನಶೇಷವು ದೇಶದೇಶಗಳೊಳಗೆ ಬಹುಜನಾಂಗಗಳ ಮಧ್ಯದಲ್ಲಿ ನಾಶಕರವಾಗಿರುವದು.


ಆಗ ಅವನು ನನಗೆ - ಆ ನಾಲ್ಕನೆಯ ಮೃಗವು ಲೋಕದಲ್ಲಿ ಉಂಟಾಗುವ ನಾಲ್ಕನೆಯ ರಾಜ್ಯ; ಅದು ವಿುಕ್ಕ ರಾಜ್ಯಗಳಿಗಿಂತ ವಿಲಕ್ಷಣವಾಗಿ ಲೋಕವನ್ನೆಲ್ಲಾ ನುಂಗಿ ತುಳಿದು ಚೂರುಚೂರು ಮಾಡುವದು.


ಜನ ಪಶುಗಳಿಲ್ಲದೆ ಹಾಳಾಗಿ ಕಸ್ದೀಯರ ಕೈವಶವಾಗಿದೆ ಎಂದು ನೀವು ಹೇಳುವ ಈ ದೇಶದಲ್ಲಿ ಹೊಲಗದ್ದೆಗಳನ್ನು ಕೊಳ್ಳುವರು, ಕೊಡುವರು.


ಈ ಪಟ್ಟಣವನ್ನು ಬೆರಗಿನ ಸಿಳ್ಳಿಗೆ ಗುರಿಮಾಡುವೆನು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಬಂಧಿಸಿದ ವಿಪತ್ತುಗಳನ್ನು ಕಂಡು ಬೆರಗಾಗಿ ಸಿಳ್ಳುಹಾಕುವರು.


ಯೆರೂಸಲೇಮೇ, ನಾನು ನಿನ್ನನ್ನು ಅಗಲಿ ನಾಶಪಡಿಸಿ ನಿವಾಸಿಗಳಿಲ್ಲದ ದೇಶವನ್ನಾಗಿ ಮಾಡದಂತೆ ಶಿಕ್ಷಣವನ್ನು ಹೊಂದು.


ಆದಕಾರಣ ಅಡವಿಯ ಸಿಂಹವು ಅವರನ್ನು ಕೊಲ್ಲುವದು, ಕಾಡಿನ ತೋಳವು ಕೊಳ್ಳೆಮಾಡುವದು, ಚಿರತೆಯು ಅವರ ಪಟ್ಟಣಗಳಿಗೆ ಹೊಂಚುಹಾಕಿ ಅಲ್ಲಿಂದ ಹೊರಡುವ ಪ್ರತಿಯೊಬ್ಬನನ್ನೂ ಸೀಳುವದು; ಅವರ ಅಪರಾಧಗಳು ಬಹಳ, ಅವರ ದ್ರೋಹಗಳು ಅಪಾರ.


ಅವಳ ಪುರದ್ವಾರಗಳಲ್ಲಿ ಪ್ರಲಾಪವೂ ದುಃಖವೂ ತುಂಬಿರುವವು; ಅವಳು ಹಾಳಾಗಿ ನೆಲದ ಮೇಲೆ ಕೂತುಬಿಡುವಳು.


ದೇವರನ್ನು ಬಿಟ್ಟವರೇ, ಇದನ್ನು ಮನಸ್ಸಿಗೆ ತಂದುಕೊಳ್ಳಿರಿ; ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು. ನಿಮ್ಮನ್ನು ತಪ್ಪಿಸುವವರು ಯಾರೂ ಇರುವದಿಲ್ಲ.


ಈಗಲಂತು ಆತನು ನನ್ನನ್ನು ಕುಂದಿಸಿದ್ದಾನೆ; [ದೇವಾ,] ನೀನು ನನ್ನ ಬಳಗದವರನ್ನೆಲ್ಲಾ ಹಾಳು ಮಾಡಿದ್ದೀ.


ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.


ನಾನು ಅವರಿಗೆ ನಾಲ್ಕು ವಿಧವಾದ ಬಾಧೆಗಳನ್ನು, ಅಂದರೆ ಕಡಿಯುವದಕ್ಕೆ ಖಡ್ಗವನ್ನು, ಸೀಳುವದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವದಕ್ಕೆ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನೇವಿುಸುವೆನು ಎಂಬದು ಯೆಹೋವನಾದ ನನ್ನ ಮಾತು.


ನನಗೆ ಹೊಂಚುಹಾಕುತ್ತಿರುವ ಕರಡಿಯಂತಿದ್ದಾನೆ, ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿರುವ ಸಿಂಹದ ಹಾಗಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು