Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 2:3 - ಕನ್ನಡ ಸತ್ಯವೇದವು J.V. (BSI)

3 ಆತನು ಶತ್ರುವಿನ ಮೇಲೆತ್ತಿದ ಬಲಗೈಯನ್ನು ಹಿಂದೆಗೆದು ಇಸ್ರಾಯೇಲಿನ ಕೊಂಬನ್ನು ರೋಷಾಗ್ನಿಯಿಂದ ತೀರಾ ಕಡಿದುಹಾಕಿ ಸುತ್ತುಮುತ್ತಲೂ ನುಂಗುವ ಅಗ್ನಿಜ್ವಾಲೆಯಂತೆ ಯಾಕೋಬನ್ನು ದಹಿಸಿ ಬಿಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆತನು ಶತ್ರುವಿನ ಮೇಲೆತ್ತಿದ ಬಲಗೈಯನ್ನು ಹಿಂದೆಗೆದು, ಇಸ್ರಾಯೇಲಿನ ಕೊಂಬನ್ನು ರೋಷಾಗ್ನಿಯಿಂದ ತೀರಾ ಕಡಿದುಹಾಕಿ, ಸುತ್ತಮುತ್ತಲು ನುಂಗುವ ಅಗ್ನಿಜ್ವಾಲೆಯಂತೆ ಯಾಕೋಬನ್ನು ದಹಿಸಿಬಿಟ್ಟಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಶತ್ರು ಬಂದೆರಗಿದಾಗ ಸ್ವಾಮಿ ತನ್ನ ಶಕ್ತಿಯುತ ಕೈಯನ್ನು ಹಿಂದೆಗೆದುಬಿಟ್ಟ, ಇಸ್ರಯೇಲಿನ ಕೋಡನ್ನು ಕಡಿದು ಪುಡಿಪುಡಿ ಮಾಡಿಬಿಟ್ಟ, ಸುತ್ತುಗಟ್ಟಿ ನುಂಗುವ ಅಗ್ನಿಜ್ವಾಲೆಯಂತೆ ಯಕೋಬನನ್ನು ದಹಿಸಿಬಿಟ್ಟ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನನ್ನ ಕೋಪದ ಭರದಲ್ಲಿ ಯೆಹೋವನು ಇಸ್ರೇಲಿನ ಶಕ್ತಿಯನ್ನೆಲ್ಲ ಕತ್ತರಿಸಿಹಾಕಿದನು. ಆತನು ಇಸ್ರೇಲಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡನು. ಶತ್ರು ಬಂದಾಗ ಆತನು ಹೀಗೆ ಮಾಡಿದನು. ಅಗ್ನಿಜ್ವಾಲೆಗಳಂತೆ ಆತನು ಯಾಕೋಬಿನಲ್ಲಿ ಉರಿದನು. ಸುತ್ತಮುತ್ತಲೆಲ್ಲ (ಪ್ರತಿಯೊಂದನ್ನೂ) ದಹಿಸುವ ಬೆಂಕಿಯಂತೆ ಆತನಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಅವರು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಮುರಿದು ಹಾಕಿದ್ದಾರೆ. ಅವರು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾರೆ. ತನ್ನ ಸುತ್ತಲೂ ಇರುವವರನ್ನು ದಹಿಸುವ ಬೆಂಕಿಯಂತೆ, ಅವರು ಯಾಕೋಬನಿಗೆ ವಿರುದ್ಧವಾಗಿ ದಹಿಸಿಬಿಟ್ಟಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 2:3
25 ತಿಳಿವುಗಳ ಹೋಲಿಕೆ  

ಚಾಚಿದ ಬಲಗೈಯನ್ನು ಯಾಕೆ ಹಿಂದೆಗೆದಿದ್ದೀ? ಅದನ್ನು ಎದೆಯ ಮೇಲಿಂದ ತೆಗೆದು ಅವರನ್ನು ಸಂಹರಿಸಿಬಿಡು.


ಆಗ ಆತನು ಅವರ ಮೇಲೆ ತನ್ನ ರೋಷಾಗ್ನಿಯನ್ನೂ ಯುದ್ಧದ ರೌದ್ರವನ್ನೂ ಸುರಿಸಿದನು. ಎಲ್ಲಾ ಕಡೆಯಿಂದಲೂ ಅವರಿಗೆ ಉರಿಹತ್ತಿತು, ಆದರೆ ಅವರು ತಿಳಿಯಲಿಲ್ಲ; ದಹಿಸಿತು, ಲಕ್ಷ್ಯಕ್ಕೆ ತರಲಿಲ್ಲ.


ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವೆನು; ಆದರೆ ಭಕ್ತರ ಕೊಂಬುಗಳು ಎತ್ತಲ್ಪಡುವವು.


ಕೊಂಬುಗಳನ್ನು ಮೇಲೆತ್ತಬೇಡಿರಿ; ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿರಿ ಎಂದು ಹೇಳುವೆನು.


ಮೋವಾಬಿನ ಕೊಂಬು ಕಡಿದು ಬಿದ್ದಿದೆ, ಅದರ ತೋಳು ಮುರಿದುಹೋಗಿದೆ. ಇದು ಯೆಹೋವನ ನುಡಿ.


ಯೆಹೋವನೇ, ಇನ್ನೆಷ್ಟರವರೆಗೆ ಮರೆಯಾಗಿರುವಿ? ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಸದಾ ಉರಿಯುತ್ತಿರಬೇಕೋ?


ಯೆಹೋವನೇ, ಇನ್ನೆಷ್ಟರವರೆಗೆ ಕೋಪವುಳ್ಳವನಾಗಿರುವಿ? ನಿನ್ನ ರೋಷಾಗ್ನಿಯು ಸದಾಕಾಲವೂ ಉರಿಯುತ್ತಲೇ ಇರಬೇಕೋ?


ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಳ್ಳುವದಕ್ಕಿದ್ದಾನೆ, ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು ಎಂದು ಉತ್ತರಕೊಟ್ಟನು.


ಇಗೋ, ಆ ದಿನವು ಬರುತ್ತಿದೆ, ಒಲೆಯಂತೆ ಉರಿಯುತ್ತಿದೆ; ಸಕಲ ಅಹಂಕಾರಿಗಳೂ ದುಷ್ಕರ್ಮಿಗಳೂ ಹೊಟ್ಟಿನಂತಿರುವರು; ಬರುತ್ತಿರುವ ಆ ದಿನವು ಅವರಿಗೆ ಅಗ್ನಿಪ್ರಲಯವಾಗುವದು; ಬುಡ ರೆಂಬೆಗಳಾವದನ್ನೂ ಉಳಿಸದು.


ನಿಮ್ಮ ದುಷ್ಕೃತ್ಯಗಳಿಗೆ ಪ್ರತಿಫಲವಾಗಿ ನಿಮ್ಮನ್ನು ದಂಡಿಸುವೆನು; ನಿಮ್ಮ ಪುರಿಯೆಂಬ ವನಕ್ಕೆ ಬೆಂಕಿಹಚ್ಚುವೆನು, ಅದು ಸುತ್ತುಮುತ್ತಣದನ್ನೆಲ್ಲಾ ನುಂಗಿಬಿಡುವದು.


ಹೀಗಿರಲು ಕರ್ತನಾದ ಯೆಹೋವನ ಈ ಮಾತನ್ನು ಕೇಳಿರಿ - ಆಹಾ, ನನ್ನ ಕೋಪವೆಂಬ ರೋಷಾಗ್ನಿಯು ಈ ಸ್ಥಳದಲ್ಲಿ ಸುರಿಯಲ್ಪಡುವದು; ಮನುಷ್ಯರ ಮೇಲೆಯೂ ಪಶುಗಳ ಮೇಲೆಯೂ ಕಾಡುಮರಗಳ ಮೇಲೆಯೂ ಭೂವಿುಯ ಬೆಳೆಯ ಮೇಲೆಯೂ ಅದನ್ನು ಸುರಿಯುವೆನು; ಆರದೆ ದಹಿಸುವದು.


ಯೆಹೂದದವರೇ, ಯೆರೂಸಲೇವಿುನ ನಿವಾಸಿಗಳೇ, ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿ ಯೆಹೋವನಿಗಾಗಿ ಸುನ್ನತಿಯಾಗಿರಿ; ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿವಿುತ್ತ ನನ್ನ ರೋಷವು ಜ್ವಾಲೆಯಂತೆ ಹೊರಟು ಯಾರೂ ಆರಿಸಲಾಗದಷ್ಟು ರಭಸವಾಗಿ ಧಗಧಗಿಸುವದು.


ನಿಮ್ಮಲ್ಲಿನ ಬಲಿಷ್ಠನೇ ಸಣಬಿನ ಗುಂಜು, ಅವನ ಕಾರ್ಯವೇ ಕಿಡಿ, ಎರಡು ಸೇರಿ ಯಾರೂ ನಂದಿಸಲಾಗದಂತೆ ಸುಟ್ಟುಹೋಗುವವು.


ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇವಿುಸಿದ್ದೇನೆ.


ಆದರೆ ನನ್ನ ಪ್ರೀತಿಸತ್ಯತೆಗಳು ಅವನೊಡನೆ ಇರುವವು; ನನ್ನ ಹೆಸರಿನಿಂದ ಅವನ ಕೊಂಬು ಎತ್ತಲ್ಪಡುವದು.


ಗೋಣಿಯನ್ನು ಹೊಲಿದು ಮೈಮೇಲೆ ಹಾಕಿಕೊಂಡಿದ್ದೇನೆ; ನನ್ನ ಕೊಂಬನ್ನು ದೂಳಿನಲ್ಲಿ ತಗ್ಗಿಸಿಕೊಂಡಿದ್ದೇನೆ.


ನನ್ನ ಕೋಪಾಗ್ನಿ ಪ್ರಜ್ವಲಿಸುತ್ತದೆ; ಅದು ಪಾತಾಳದವರೆಗೂ ವ್ಯಾಪಿಸಿ ಬೆಳೆ ಸಹಿತವಾಗಿ ಭೂವಿುಯನ್ನೂ ಬುಡಸಹಿತವಾಗಿ ಬೆಟ್ಟಗಳನ್ನೂ ದಹಿಸಿಬಿಡುವದು.


ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಹಾಕಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದರಿಂದ ನನ್ನ ಕೋಪಾಗ್ನಿಯು ಈ ದೇಶದ ಮೇಲೆ ಉರಿಯುತ್ತಿರುವದು, ಆರಿಹೋಗುವದಿಲ್ಲ ಅನ್ನುತ್ತಾನೆ.


ಆತನು ಮೇಲಣಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳಲ್ಲಿ ವ್ಯಾಪಿಸಿದೆ; ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ, ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ.


ಯೆಹೋವನು ತನ್ನ ರೋಷಾಗ್ನಿಯನ್ನು ಸುರಿಸಿ ತನ್ನ ಸಿಟ್ಟನ್ನು ತೀರಿಸಿದ್ದಾನೆ; ಚೀಯೋನಿನ ಅಸ್ತಿವಾರಗಳನ್ನು ನುಂಗಿಬಿಟ್ಟ ಬೆಂಕಿಯನ್ನು ಅಲ್ಲಿ ಹೊತ್ತಿಸಿದ್ದಾನೆ.


ಅವರು ಕೊಂಬನ್ನೂದಿ ಸರ್ವಸನ್ನಾಹ ಮಾಡಿದರೂ ಯಾರೂ ಯುದ್ಧಕ್ಕೆ ಹೊರಡರು; ನನ್ನ ರೋಷಾಗ್ನಿಯು ಆ ಸಮೂಹದವರೆಲ್ಲರ ಮೇಲೆ ಹತ್ತಿದೆ.


ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಒಡೆದುಹಾಕುವೆನು; ಅದನ್ನು ನಾಶಮಾಡಲಿಕ್ಕೆ ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವದು, [ನನ್ನ] ರೋಷದಿಂದ ಆನೆಕಲ್ಲುಗಳು ಸುರಿಯುವವು;


ಆತನ ಸಿಟ್ಟಿಗೆ ಯಾರು ತಡೆದಾರು? ಆತನ ರೋಷಾಗ್ನಿಗೆ ಯಾರು ನಿಂತಾರು? ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ, ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು