Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಲಾಪಗಳು 1:22 - ಕನ್ನಡ ಸತ್ಯವೇದವು J.V. (BSI)

22 ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ; ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು; ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಅವರು ಮಾಡಿದ ಕೆಡುಕೆಲ್ಲಾ ನಿನ್ನ ಚಿತ್ತಕ್ಕೆ ಮುಟ್ಟಲಿ; ನೀನು ನನ್ನ ಎಲ್ಲಾ ದ್ರೋಹಗಳಿಗೆ ಪ್ರತಿಯಾಗಿ ನನಗೆ ಮಾಡಿದಂತೆ ಅವರಿಗೂ ಮಾಡು; ನನ್ನ ನರಳಾಟವು ಬಹಳವಾಗಿದೆ, ನನ್ನ ಎದೆಯು ಕುಂದಿಹೋಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 “ಅವರು ಗೈದ ಕೆಡುಕೆಲ್ಲಾ ಬಟ್ಟಬಯಲಾಗಲಿ ನಿನ್ನ ದೃಷ್ಟಿಗೆ. ನನ್ನ ದ್ರೋಹಕ್ಕೆ ಪ್ರತಿಯಾಗಿ ನನಗೆ ಮಾಡಿರುವಂತೆ ನೀ ಮಾಡು ಅವರಿಗೆ. ನನ್ನ ನರಳಾಟ ಹೆಚ್ಚಿದೆ; ನನ್ನ ಎದೆ ಕುಂದಿಹೋಗಿದೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 “ನನ್ನ ಶತ್ರುಗಳು ಎಷ್ಟು ದುಷ್ಟರಾಗಿದ್ದಾರೆ ನೋಡು. ನನ್ನ ಎಲ್ಲ ಪಾಪಗಳ ನಿಮಿತ್ತ ನೀನು ನನಗೆ ಮಾಡಿದಂತೆ ಅವರಿಗೂ ಮಾಡಲು ನಿನಗೆ ಸಾಧ್ಯವಾಗುವುದು. ನಾನು ಪದೇಪದೇ ನರಳಾಡುತ್ತಿರುವುದರಿಂದ ನೀನು ಇದನ್ನು ಮಾಡಬೇಕು. ನನ್ನ ಹೃದಯವು ಅಸ್ವಸ್ಥಗೊಂಡಿರುವುದರಿಂದ ನೀನು ಇದನ್ನು ಮಾಡಬೇಕು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅವರ ಎಲ್ಲಾ ಕೆಟ್ಟತನವು ನಿನ್ನ ಮುಂದೆ ಇರಲಿ. ನನ್ನ ಎಲ್ಲಾ ದ್ರೋಹಗಳ ನಿಮಿತ್ತ, ನೀನು ನನಗೆ ಮಾಡಿದ ಪ್ರಕಾರವೇ ಅವರಿಗೆ ಮಾಡು. ಏಕೆಂದರೆ ನನ್ನ ನರಳಾಟವು ಅನೇಕವಾಗಿವೆ. ನನ್ನ ಹೃದಯವು ಮೂರ್ಛೆಗೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಲಾಪಗಳು 1:22
16 ತಿಳಿವುಗಳ ಹೋಲಿಕೆ  

ಅಯ್ಯೋ, ನನ್ನ ದುಃಖಕ್ಕೆ ಬೆಳಗೆಂದಿಗಾದೀತು? ನನ್ನ ಹೃದಯವು ನನ್ನೊಳಗೆ ಕುಂದಿಹೋಗಿದೆ.


ಅವರು - ಒಡೆಯನೇ, ಪರಿಶುದ್ಧನೂ ಸತ್ಯವಂತನೂ ಆಗಿರುವಾತನೇ, ಭೂನಿವಾಸಿಗಳು ನಮ್ಮನ್ನು ಕೊಂದದ್ದಕ್ಕಾಗಿ ನೀನು ಎಷ್ಟು ಕಾಲದವರೆಗೂ ನ್ಯಾಯವಿಚಾರಿಸದೆಯೂ ಪ್ರತಿದಂಡನೆ ಮಾಡದೆಯೂ ಇರುವಿ? ಎಂದು ಮಹಾಶಬ್ದದಿಂದ ಕೂಗಿದರು.


ಆದದರಿಂದ ನಿಮ್ಮ ನಿವಿುತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನವನ್ನು ಉಂಟುಮಾಡುತ್ತವಷ್ಟೆ.


ಮರ ಹಸಿಯಾಗಿರುವಾಗ ಇಷ್ಟೆಲ್ಲಾ ಮಾಡಿದರೆ ಮರ ಒಣಗಿರುವಾಗ ಏನಾಗಬಹುದು? ಅಂದನು.


ಚೀಯೋನ್ ಪರ್ವತವು ಹಾಳಾಯಿತಲ್ಲಾ! ನರಿಗಳು ಅಲ್ಲಿ ಸಂಚರಿಸುತ್ತವೆ.


ಆತನು ಮೇಲಣಲೋಕದಿಂದ ಬೆಂಕಿಯನ್ನು ಕಳುಹಿಸಿದ್ದಾನೆ, ಅದು ನನ್ನ ಎಲುಬುಗಳಲ್ಲಿ ವ್ಯಾಪಿಸಿದೆ; ನನ್ನ ಕಾಲುಗಳಿಗೆ ಬಲೆಯೊಡ್ಡಿದ್ದಾನೆ, ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ, ನಾನು ಹಾಳುಬಿದ್ದು ಸದಾ ಬಳಲುವಂತೆ ಮಾಡಿದ್ದಾನೆ.


ನಮ್ಮ ಪ್ರಾಣವನ್ನು ಹಿಂಸಿಸಿದ ದೋಷ ಬಾಬೆಲಿಗೆ ತಟ್ಟಲಿ ಎಂದು ಚೀಯೋನಿನವರು ಅನ್ನುತ್ತಾರೆ; ನಮ್ಮ ರಕ್ತವನ್ನು ಸುರಿಸಿದ ಅಪರಾಧವು ಕಸ್ದೀಯರಿಗೆ ಬಡಿಯಲಿ ಎಂದು ಯೆರೂಸಲೇವಿುನವರು ಹೇಳುತ್ತಾರೆ.


ಯೆಹೋವನೇ, ನನ್ನನ್ನು ಕೊಲ್ಲಬೇಕೆಂದು ಅವರು ಮಾಡಿಕೊಂಡಿರುವ ಆಲೋಚನೆಯನ್ನೆಲ್ಲಾ ನೀನೇ ಬಲ್ಲೆ; ಅವರ ಅಪರಾಧವನ್ನು ಕ್ಷವಿುಸಬೇಡ, ಅವರ ಪಾಪವನ್ನು ಅಳಿಸದಿರು, ಅದು ನಿನ್ನ ಕಣ್ಣೆದುರಿಗಿರಲಿ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪವನ್ನು ವ್ಯಕ್ತಪಡಿಸುವಾಗ ಅವರಿಗೆ ತಕ್ಕದ್ದನ್ನು ಮಾಡು.


ನಿನ್ನನ್ನು ಅರಿಯದ ಅನ್ಯಜನಾಂಗಗಳ ಮೇಲೆಯೂ ನಿನ್ನ ನಾಮವನ್ನು ಉಚ್ಚರಿಸದ ವಂಶಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು. ಅವರು ಯಾಕೋಬ್ಯರನ್ನು ನುಂಗಿ ಹೌದು, ಪೂರಾ ನುಂಗಿಬಿಟ್ಟು ಅವರ ವಾಸಸ್ಥಳವನ್ನು ಹಾಳುಮಾಡಿದ್ದಾರಲ್ಲಾ.


ಅದರಿಂದ ಎಲ್ಲರ ಕೈ ಜೋಲುಬೀಳುವದು, ಎಲ್ಲರ ಹೃದಯ ಕರಗಿ ನೀರಾಗುವದು;


ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು; ನನ್ನ ಆತ್ಮವು ಕುಂದಿಹೋಗಿದೆ. ನೀನು ವಿಮುಖನಾದರೆ ಸಮಾಧಿಯಲ್ಲಿ ಸೇರಿದವರಿಗೆ ನಾನು ಸಮಾನನಾಗಿರುವೆನು.


ಮ್ಲೇಚ್ಫರು - ಅವರ ದೇವರು ಎಲ್ಲಿ ಎಂದು ಅನ್ನುವದೇಕೆ? ನಿನ್ನ ಸೇವಕರ ರಕ್ತವನ್ನು ಸುರಿಸಿದವರಿಗೆ ನಮ್ಮ ಮುಂದೆಯೇ ದಂಡನೆಯಾದದ್ದು ಜನಾಂಗಗಳಿಗೆ ಗೊತ್ತಾಗಲಿ.


ಹೀಗಿರಲು ನಿನ್ನನ್ನು ನುಂಗುವವರೆಲ್ಲರು ನುಂಗಲ್ಪಡುವರು; ನಿನ್ನ ಶತ್ರುಗಳೆಲ್ಲಾ ಒಬ್ಬನೂ ತಪ್ಪದೆ ಸೆರೆಗೆ ಹೋಗುವರು, ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು, ನಿನ್ನನ್ನು ಕೊಳ್ಳೆ ಹೊಡೆಯುವವರನ್ನು ಕೊಳ್ಳೆಗೆ ಈಡುಮಾಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು