Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 8:11 - ಕನ್ನಡ ಸತ್ಯವೇದವು J.V. (BSI)

11 ಆ ನಕ್ಷತ್ರಕ್ಕೆ ಮಾಚಿಪತ್ರೆ ಎಂದು ಹೆಸರು. ನೀರಿನೊಳಗೆ ಮೂರರಲ್ಲಿ ಒಂದು ಭಾಗ ಮಾಚಿಪತ್ರೆಯಂತೆ ಕಹಿಯಾಯಿತು. ಆ ನೀರು ವಿಷವಾದದ್ದರಿಂದ ಮನುಷ್ಯರಲ್ಲಿ ಅನೇಕರು ಸತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆ ನಕ್ಷತ್ರದ ಹೆಸರು ಮಾಚಿಪತ್ರೆ. ನೀರಿನ ಮೂರರಲ್ಲಿ ಒಂದು ಭಾಗ ಮಾಚಿಪತ್ರೆಯಂತೆ ವಿಷವಾಯಿತು ಮತ್ತು ಆ ನೀರು ಕಹಿಯಾದ್ದರಿಂದ ಅನೇಕರು ಸತ್ತುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಆ ನಕ್ಷತ್ರದ ಹೆಸರು ‘ವಿಷಕನ್ಯೆ'. ನೀರಿನಲ್ಲಿ ಮೂರನೆಯ ಒಂದು ಭಾಗ ವಿಷವಾಯಿತು; ಇದರಿಂದಾಗಿ ಅನೇಕರು ನೀರನ್ನು ಕುಡಿದು ಸತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆ ನಕ್ಷತ್ರಕ್ಕೆ “ಕಹಿ ಮರ” ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆ ನಕ್ಷತ್ರದ ಹೆಸರು, ಮಾಚಿಪತ್ರೆ, ಆಗ ಮೂರರಲ್ಲಿ ಒಂದು ಭಾಗವು ಕಹಿಯಾಯಿತು ಮತ್ತು ಆ ನೀರು ಕಹಿಯಾದ್ದರಿಂದ ಅನೇಕ ಜನರು ಸತ್ತರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

11 ತ್ಯಾ ಚಿಕ್ಕಿಚೆ ನಾಂವ್, ಕೊಡು ಪಾನಿಯಾಚೊ ತಿನಾತ್ಲೊ ಎಕ್ ಭಾಗ್ ಕೊಡು ಹೊವ್ನ್ ಬದಲ್ಲೊ, ಅನಿ ಹೆ ಪಾನಿ ಫಿಲ್ಲಿ ಸುಮಾರ್ ಲೊಕಾ ಮರುನ್ ಗೆಲಿ, ಕಶ್ಯಾಕ್ ಮಟ್ಲ್ಯಾರ್ ತೆನಿ ಹೆ ಕೊಡು ಹೊಲ್ಲೆ ಪಾನಿ ಫಿಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 8:11
17 ತಿಳಿವುಗಳ ಹೋಲಿಕೆ  

ಆದಕಾರಣ ಸೇನಾಧೀಶ್ವರನಾದ ಯೆಹೋವನು ಪ್ರವಾದಿಗಳ ವಿಷಯದಲ್ಲಿ ಹೀಗನ್ನುತ್ತಾನೆ - ಆಹಾ, ನಾನು ಇವರಿಗೆ ಕಹಿಯಾದ ಆಹಾರಪಾನಗಳನ್ನು ಕೊಡುವೆನು; ಯೆರೂಸಲೇವಿುನ ಪ್ರವಾದಿಗಳಿಂದ ಭ್ರಷ್ಟತನವು ದೇಶದಲ್ಲೆಲ್ಲಾ ಹರಡಿದೆಯಷ್ಟೆ.


ಆಹಾ, ನಾನು ಈ ಜನರಿಗೆ ಕಹಿಯಾದ ಆಹಾರಪಾನಗಳನ್ನು ಕೊಡುವೆನು.


ಎಚ್ಚರಿಕೆಯಾಗಿರ್ರಿ; ನಮ್ಮ ದೇವರಾದ ಯೆಹೋವನನ್ನು ಬಿಟ್ಟು ಆ ಜನಾಂಗಗಳ ದೇವರುಗಳನ್ನು ಸೇವಿಸುವ ಯಾವ ಕುಲವಾಗಲಿ ಕುಟುಂಬವಾಗಲಿ ಸ್ತ್ರೀಪುರುಷರಾಗಲಿ ನಿಮ್ಮಲ್ಲಿ ಇರಲೇಬಾರದು; ನಿಮ್ಮಲ್ಲಿ ಯಾವ ವಿಷಲತೆಯ ಬೇರೂ ಇರಬಾರದು.


ಕುದುರೆಗಳು ಕೋಡುಗಲ್ಲಿನ ಮೇಲೆ ಓಡಾಡುವವೋ; ಅದನ್ನು ಎತ್ತುಗಳಿಂದ ಉಳುವರೋ? ಆದರೆ ನೀವು ನ್ಯಾಯವನ್ನು ವಿಷಮಾಡಿ ಧರ್ಮದ ಸುಫಲವನ್ನು ಕಹಿಗೆ ತಂದಿರಲ್ಲಾ.


ನ್ಯಾಯವನ್ನು ಕಹಿಮಾಡುವವರೇ, ಧರ್ಮವನ್ನು ನೆಲಕ್ಕೆ ಕೆಡವಿಬಿಡುವವರೇ,


ನಾನು ಅಲೆದು ಕಷ್ಟಪಟ್ಟದ್ದನ್ನು ಚಿತ್ತಕ್ಕೆ ತಂದುಕೋ, ಕಹಿಯಾದ ನನ್ನ ಆಹಾರಪಾನಗಳನ್ನು ಜ್ಞಾಪಕ ಮಾಡಿಕೋ,


ಅವಳು ಕಡೆಯಲ್ಲಿ ವಿಷದಂತೆ ಕಹಿಯೂ ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.


ಮೊದಲನೆಯ ದೇವದೂತನು ತುತೂರಿಯನ್ನೂದಿದಾಗ ರಕ್ತದಲ್ಲಿ ಕಲಸಿದ್ದ ಆನೆಕಲ್ಲಿನ ಮಳೆಯೂ ಬೆಂಕಿಯೂ ಭೂವಿುಗೆ ಸುರಿಸಲ್ಪಟ್ಟವು; ಭೂವಿುಯೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಮರಗಳೊಳಗೆ ಮೂರರಲ್ಲಿ ಒಂದು ಭಾಗ ಸುಟ್ಟುಹೋಯಿತು; ಹಸುರು ಹುಲ್ಲೆಲ್ಲಾ ಸುಟ್ಟುಹೋಯಿತು.


ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವದಿಲ್ಲ. ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹಿಂಜರಿಯದಂತೆ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಸಭೆಯವರನ್ನು ಕೆಡಿಸದಂತೆ


ನನ್ನ ಸುತ್ತಲು ಶ್ರಮಸಂಕಟಗಳ ದಿಬ್ಬಗಳನ್ನು ಹಾಕಿದ್ದಾನೆ.


ಆಕೆಯು ಅವರಿಗೆ - ನನ್ನನ್ನು ನೊವೊವಿುಯೆಂದು ಕರೆಯಬೇಡಿರಿ; ಸರ್ವಶಕ್ತನು ನನ್ನನ್ನು ಬಹಳವಾಗಿ ದುಃಖಪಡಿಸಿದ್ದಾನೆ. ಆದದರಿಂದ ಮಾರಾ ಎಂದು ಕರೆಯಿರಿ.


ತರುವಾಯ ಮಾರಾ ಎಂಬ ಸ್ಥಳವನ್ನು ಸೇರಿದರು; ಆದರೆ ಆ ಸ್ಥಳದ ನೀರು ಕಹಿಯಾಗಿದ್ದದರಿಂದ ಅವರಿಗೆ ಅದನ್ನು ಕುಡಿಯುವದಕ್ಕಾಗದೆ ಹೋಯಿತು. ಅದರಿಂದಲೇ ಆ ಸ್ಥಳಕ್ಕೆ ಮಾರಾ ಎಂದು ಹೆಸರಾಯಿತು.


ದೇಶದೊಳಗೆಲ್ಲಾ ಮೂರರಲ್ಲಿ ಎರಡು ಭಾಗದವರು ಹತರಾಗಿ ಸಾಯುವರು, ಮೂರನೆಯ ಭಾಗದವರು ಅಲ್ಲಿ ಉಳಿಯುವರು; ಇದು ಯೆಹೋವನ ನುಡಿ.


ಆ ಮೂರನೆಯ ಭಾಗದವರನ್ನು ನಾನು ಬೆಂಕಿಗೆ ಹಾಕಿ ಬೆಳ್ಳಿಯಂತೆ ಶೋಧಿಸುವೆನು, ಬಂಗಾರದ ಹಾಗೆ ಶುದ್ಧಿಮಾಡುವೆನು; ಅವರು ನನ್ನ ಹೆಸರೆತ್ತಿ ಪ್ರಾರ್ಥಿಸುವರು, ನಾನು ಆಲಿಸುವೆನು; ನಾನು - ಇವರು ನನ್ನ ಜನರು ಅಂದುಕೊಳ್ಳುವೆನು, ಅವರು - ನಮ್ಮ ದೇವರಾದ ಯೆಹೋವನೇ ಅನ್ನುವರು.


ಆಗ ಮನುಷ್ಯರೊಳಗೆ ಮೂರರಲ್ಲಿ ಒಂದು ಭಾಗದ ಜನರನ್ನು ಸಂಹಾರಮಾಡುವದಕ್ಕಾಗಿ ಅದೇ ವರುಷ ಅದೇ ತಿಂಗಳು ದಿನ ತಾಸಿಗೆ ಸಿದ್ಧವಾಗಿದ್ದ ಆ ನಾಲ್ಕು ಮಂದಿ ದೇವದೂತರನ್ನು ಬಿಚ್ಚಿಬಿಟ್ಟರು;


ಅವುಗಳ ಬಾಯಿಂದ ಬೆಂಕಿ ಹೊಗೆ ಗಂಧಕ ಇವುಗಳು ಹೊರಡುತ್ತಿದ್ದವು. ಅವುಗಳ ಬಾಯಿಂದ ಹೊರಟ ಆ ಬೆಂಕಿ ಹೊಗೆ ಗಂಧಕ ಎಂಬ ಮೂರು ಉಪದ್ರವಗಳಿಂದ ಮನುಷ್ಯರಲ್ಲಿ ಮೂರನೆಯ ಭಾಗವು ಹತವಾಯಿತು.


ಅದರ ಬಾಲವು ಆಕಾಶದಲ್ಲಿರುವ ನಕ್ಷತ್ರಗಳೊಳಗೆ ಮೂರರಲ್ಲೊಂದು ಭಾಗವನ್ನು ಎಳೆದು ಭೂವಿುಗೆ ಹಾಕಿತು. ಹೆರುತ್ತಿದ್ದ ಆ ಸ್ತ್ರೀಯು ಹೆತ್ತಕೂಡಲೆ ಆಕೆಯ ಮಗುವನ್ನು ನುಂಗಿಬಿಡಬೇಕೆಂದು ಆ ಘಟಸರ್ಪವು ಅಲ್ಲೇ ಕಾದುಕೊಂಡಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು