Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:24 - ಕನ್ನಡ ಸತ್ಯವೇದವು J.V. (BSI)

24 ಪ್ರವಾದಿಗಳ ರಕ್ತವೂ ದೇವಜನರ ರಕ್ತವೂ ಭೂವಿುಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 “ಪ್ರವಾದಿಗಳ, ದೇವಜನರ ರಕ್ತವು ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ಅವಳಲ್ಲಿಯೇ ಸಿಕ್ಕಿತಲ್ಲಾ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಹರಿಯಿತಾ ನಗರದಲಿ ಪ್ರವಾದಿಗಳ ರಕ್ತ ದೇವಜನರ, ಭೂಮಿಯಲ್ಲಿ ಬಲಿಯಾದೆಲ್ಲರ ರಕ್ತ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಅವಳು ಪ್ರವಾದಿಗಳ, ದೇವರ ಪರಿಶುದ್ಧಜನರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವನ್ನು ಸುರಿಸಿ ಅಪರಾಧಿಯಾದಳು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಆಕೆಯಲ್ಲಿ ಪ್ರವಾದಿಗಳ ಮತ್ತು ಪರಿಶುದ್ಧರ ರಕ್ತವೂ ಮತ್ತು ಭೂಮಿಯ ಮೇಲೆ ಕೊಲೆಯಾದವರ ರಕ್ತವೂ ಸಿಕ್ಕಿತು,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

24 ತ್ಯಾ ಶಾರಾತ್ ಗಾವಲ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ಅನಿ ಪ್ರವಾದ್ಯಾಂಚ್ಯಾ ರಗ್ತಾಸಾಟ್ನಿ ಅನಿ ಜಗಾತ್ ಜಿವಾನಿ ಮಾರಲ್ಲ್ಯಾ ಸಗ್ಳ್ಯಾಂಚ್ಯಾ ರಗ್ತಾಸಾಟಿ ಬಾಬಿಲೊನಾಕ್ ಶಿಕ್ಷಾ ದಿವ್ನ್ ಹೊಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:24
16 ತಿಳಿವುಗಳ ಹೋಲಿಕೆ  

ಆ ಸ್ತ್ರೀಯು ದೇವಜನರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿ ಕೊಟ್ಟು ಹತರಾದವರ ರಕ್ತವನ್ನೂ ಕುಡಿದು ಮತ್ತಳಾಗಿರುವದನ್ನು ಕಂಡೆನು. ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.


ಅವರು ದೇವಜನರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ; ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ಕೇಳಿದೆನು.


ಹತರಾದ ಇಸ್ರಾಯೇಲ್ಯರೇ, ಬಾಬೆಲಿನ ಹಿತಕ್ಕಾಗಿ ಲೋಕದಲ್ಲೆಲ್ಲಾ ಬಹುಜನರು ಹೇಗೆ ಹತರಾದರೋ ಹಾಗೆಯೇ ಬಾಬೆಲೂ ಹತವಾಗುವದು.


ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿ ಎರಡನೆಯ ಸಾರಿ -


ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿ ಸ್ವರೂಪನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ.


ಇವರು ತಮ್ಮ ಸಾಕ್ಷಿಯನ್ನು ಹೇಳಿ ಮುಗಿಸಿದನಂತರ ಅಧೋಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವದು.


ಹೀಗೆ ನೀತಿವಂತನಾದ ಹೇಬೆಲನ ರಕ್ತವು ಮೊದಲುಗೊಂಡು ನೀವು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ಕೊಂದುಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂವಿುಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತದಿಂದುಂಟಾಗುವ ಅಪರಾಧವು ನಿಮ್ಮ ತಲೆಯ ಮೇಲೆ ಬರುವದು.


ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.


ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ ದೇವಭಕ್ತರೊಂದಿಗೆ ಯುದ್ಧಮಾಡಿ


ಆ ಯೆಹೂದ್ಯರು ಕರ್ತನಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದರು, ನಮ್ಮನ್ನೂ ಅಟ್ಟಿಬಿಟ್ಟರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ;


ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತಸುರಿಸಿ ನರಪ್ರಾಣಿಗಳನ್ನು ನುಂಗುವವರಾಗಿ ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.


ನಿನ್ನವರು ರಕ್ತಸುರಿಸುವದಕ್ಕೆ ಲಂಚತೆಗೆದುಕೊಂಡಿದ್ದಾರೆ; ನಿನ್ನವರು ಸಾಲಕ್ಕೆ ಬಡ್ಡಿ ತೆಗೆದುಕೊಂಡು ಲಾಭಕ್ಕೆ ಹಣಕೊಟ್ಟು ತಮ್ಮ ನೆರೆಯವರನ್ನು ಬಾಧಿಸಿ ದೋಚಿಕೊಂಡು ನನ್ನನ್ನು ಮರೆತೇಬಿಟ್ಟಿದ್ದಾರೆ; ಇದು ಕರ್ತನಾದ ಯೆಹೋವನ ನುಡಿ.


ನಿನ್ನಲ್ಲಿ ಚಾಡಿಕೋರರು ರಕ್ತಹರಿಸಿದ್ದಾರೆ; ನಿನ್ನವರು ಗುಡ್ಡಗಳ ಮೇಲೆ [ಯಜ್ಞಶೇಷವನ್ನು] ತಿಂದಿದ್ದಾರೆ; ನಿನ್ನ ಮಧ್ಯದಲ್ಲಿ ದುರಾಚಾರಗಳನ್ನು ನಡಿಸಿದ್ದಾರೆ.


ಇದಲ್ಲದೆ ನಿರ್ದೋಷಿಗಳಾದ ದರಿದ್ರರ ಪ್ರಾಣರಕ್ತವು ನಿನ್ನ ನೆರಿಗೆಯಲ್ಲಿ ಅಂಟಿಕೊಂಡಿದೆ; ಇವರು ಕನ್ನ ಕೊರೆಯುವದನ್ನು ಕಂಡೆನೆಂಬ ನೆವ ನಿನಗಿಲ್ಲ, ನಿನ್ನ ಈ ಎಲ್ಲಾ ದುರಭ್ಯಾಸಗಳ ದೆಸೆಯಿಂದ [ನಿನ್ನನ್ನು ದಂಡಿಸುವೆನು].


ಪರಾತ್ಪರನಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನ ಭಕ್ತರನ್ನು ಸವೆಯಿಸಿ ಕಟ್ಟಳೆಯ ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸುಮಾಡುವನು; ಆ ಭಕ್ತರು ಒಂದುಕಾಲ ಎರಡುಕಾಲ ಅರ್ಧಕಾಲ ಅವನ ಕೈವಶವಾಗಿರುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು