ಪ್ರಕಟನೆ 18:16 - ಕನ್ನಡ ಸತ್ಯವೇದವು J.V. (BSI)16 ಅಯ್ಯೋ, ಅಯ್ಯೋ, ನಯವಾದ ನಾರುಮಡಿಯನ್ನೂ ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ರತ್ನ ಮುತ್ತು ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾ ಪಟ್ಟಣಕ್ಕೆ ಏನು ದುರ್ಗತಿ ಸಂಭವಿಸಿತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ‘ಅಯ್ಯೋ ಅಯ್ಯೋ ನಯವಾದ ನಾರುಮಡಿಯನ್ನೂ, ಧೂಮ್ರವರ್ಣದ ವಸ್ತ್ರಗಳನ್ನೂ, ಕಡುಗೆಂಪು ಉಡುಪನ್ನೂ ಧರಿಸಿಕೊಂಡು, ಚಿನ್ನ, ರತ್ನ, ಮುತ್ತು ಇವುಗಳಿಂದ ತನ್ನನ್ನು ಅಲಂಕರಿಸಿಕೊಂಡಿದ್ದ ಈ ಮಹಾಪಟ್ಟಣಕ್ಕೆ ಎಂಥ ದುರ್ಗತಿ ಸಂಭವಿಸಿತು.’ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 “ಅಯ್ಯೋ ! ಅಯ್ಯೋ ! ಮಹಾನಗರಿ ನಿನಗೆಂಥಾ ದುರ್ಗತಿ ! ಕೆನ್ನೀಲಿಯ ಕಡುಗೆಂಪಿನ ನಯವಸ್ತ್ರಗಳನುಟ್ಟವಳೇ, ಹೊನ್ನ ತೊಟ್ಟವಳೇ, ಮತ್ತು ರತ್ನಾಭರಣಗಳನು ಧರಿಸಿದವಳೇ, ತಾಸೊಂದರಲೇ ನಿನ್ನ ಐಸಿರಿಯೆಲ್ಲಾ ವ್ಯರ್ಥವಾಯಿತೇ!” ಎಂದು ದುಃಖಿಸಿ ಅತ್ತು ಗೋಳಾಡುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಅವರು ದುಃಖದಿಂದ ಗೋಳಾಡುತ್ತಾ ಹೀಗೆನ್ನುವರು: ‘ಅಯ್ಯೋ, ಅಯ್ಯೋ, ಮಹಾನಗರಿಯೇ! ಅವಳು ನಯವಾದ ನಾರುಮಡಿಯನ್ನು, ಧೂಮ್ರವರ್ಣದ ಉಡುಪನ್ನು ಮತ್ತು ರಕ್ತಾಂಬರಗಳನ್ನು ಧರಿಸಿದ್ದಳು. ಅವಳು ಚಿನ್ನ, ರತ್ನ, ಮುತ್ತುಗಳಿಂದ ಶೋಭಿಸುತ್ತಿದ್ದಳು! ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 “ ‘ಅಯ್ಯೋ! ಅಯ್ಯೋ! ಶೋಕಭರಿತ ಮಹಾನಗರಿಯೇ, ನೀನು ನೇರಳೆ, ಕಡುಗೆಂಪು ನಾರುಮಡಿಯನ್ನು ಧರಿಸಿ, ಚಿನ್ನ, ಬೆಲೆಬಾಳುವ ಕಲ್ಲು ಮತ್ತು ಮುತ್ತುಗಳಿಂದ ಬೆಳಗುತ್ತಿದ್ದೆ. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್16 ಅನಿ,“ಕಸ್ಲಿ ಹಿ ಗತ್! ಕವ್ಡೊ ಮೊಟೊ ಹ್ಯೊ ಕಸ್ಟ್ ಹ್ಯಾ ಮೊಟ್ಯಾ ಶಾರಾಚೊ! ತಿ ಮ್ಹೊವ್ಲೆ ಕಿಮ್ತಿಚೆ, ಜಾಂಬ್ಳೆ, ತಾಂಬ್ಡೆ ಗುಂಜ್ಲೆ ಕಪ್ಡೆ ನೆಶಿ, ಅನಿ ಸೊನ್ಯಾಚ್ಯಾ, ಕಿಮ್ತಿಚ್ಯಾ ಗುಂಡ್ಯಾಂಚ್ಯಾ, ಅನಿ ಮೊತಿಯಾಂಚ್ಯಾ ವಸ್ತಾನಿ ಶಿಂಗಾರ್ ಕರುನ್ ಘೆಯ್! ಅಧ್ಯಾಯವನ್ನು ನೋಡಿ |