Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 18:1 - ಕನ್ನಡ ಸತ್ಯವೇದವು J.V. (BSI)

1 ಇದಾದ ಮೇಲೆ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿಯುವದನ್ನು ಕಂಡೆನು; ಅವನ ಪ್ರಭಾವದಿಂದ ಭೂವಿುಗೆ ಪ್ರಕಾಶವುಂಟಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇದಾದ ನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವುದನ್ನು ಕಂಡೆನು. ಅವನ ತೇಜಸ್ಸಿನ ಪ್ರಭಾವದಿಂದ ಭೂಮಿಯು ಪ್ರಕಾಶವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಇವುಗಳಾದ ಬಳಿಕ ನಾನು ಮತ್ತೂ ಒಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಮತ್ತೊಬ್ಬ ದೇವದೂತನು ಇಳಿದುಬಂದನು. ಅವನು ವಿಶೇಷ ಅಧಿಕಾರ ಪಡೆದಿದ್ದನು. ಅವನ ತೇಜಸ್ಸು ಭೂಮಿಯನ್ನು ಬೆಳಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಇದಾದನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಕೆಳಗೆ ಇಳಿದು ಬರುವುದನ್ನು ಕಂಡೆನು. ಅವನ ತೇಜಸ್ಸಿನಿಂದ ಭೂಮಿಯು ಬೆಳಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

1 ಹೆಚ್ಯಾ ಮಾನಾ ಸರ್‍ಗಾ ವೈನಾ ಉತ್ರುನ್ ಯೆತಲ್ಯಾ ಎಕ್ ದೆವ್‍ದುತಾಕ್ ಮಿಯಾ ಬಗಟ್ಲೊ ಹ್ಯಾ ದೆವ್‍ದುತಾಕ್ ಮೊಟೊ ಅದಿಕಾರ್ ಹೊತ್ತೊ, ಅನಿ ಹ್ಯಾ ದೆವ್‍ದುತಾಚೊ ಮಹಿಮಾಚೊ ಪ್ರಭಾವ್ ಜಗಾ ವೈರ್ ಪುರಾ ಪಗಳಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 18:1
8 ತಿಳಿವುಗಳ ಹೋಲಿಕೆ  

ಇಗೋ, ಇಸ್ರಾಯೇಲಿನ ದೇವರ ತೇಜಸ್ಸು ಮೂಡಣ ಮಾರ್ಗವಾಗಿ ಬಂತು; ಆತನ ಧ್ವನಿಯು ಜಲಪ್ರವಾಹದ ಘೋಷದಂತಿತ್ತು; ಆತನ ತೇಜಸ್ಸಿನಿಂದ ಭೂವಿುಯು ಬೆಳಗಿತು.


ಯಾಕಂದರೆ ವಿುಂಚು ವಿುಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಹೇಗೆ ಹೊಳೆಯುವದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನದಲ್ಲಿರುವನು.


ಪಟ್ಟಣಕ್ಕೆ ಬೆಳಕನ್ನು ಕೊಡುವದಕ್ಕಾಗಿ ಸೂರ್ಯನಾಗಲಿ ಚಂದ್ರನಾಗಲಿ ಬೇಕಾಗಿಲ್ಲ. ಅದಕ್ಕೆ ದೇವರ ಪ್ರಭಾವವೇ ಬೆಳಕನ್ನು ಕೊಟ್ಟಿತು; ಯಜ್ಞದ ಕುರಿಯಾದಾತನೇ ಅದರ ದೀಪವು.


ಏಳು ಪಾತ್ರೆಗಳನ್ನು ಹಿಡಿದಿದ್ದ ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನ್ನ ಸಂಗಡ ಮಾತಾಡಿ - ಬಾ, ಬಹಳ ನೀರುಗಳ ಮೇಲೆ ವಾಸಿಸಿರುವ ಮಹಾ ಜಾರಸ್ತ್ರೀಗೆ ಬರುವ ದಂಡನೆಯನ್ನು ನಿನಗೆ ತೋರಿಸುತ್ತೇನೆ;


ತರುವಾಯ ಬಲಿಷ್ಠನಾದ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿದುಬರುವದನ್ನು ಕಂಡೆನು. ಅವನು ಮೇಘವನ್ನು ಧರಿಸಿಕೊಂಡಿದ್ದನು; ಅವನ ತಲೆಯ ಮೇಲೆ ಮುಗಿಲುಬಿಲ್ಲು ಇತ್ತು; ಅವನ ಮುಖವು ಸೂರ್ಯನೋಪಾದಿಯಲ್ಲಿತ್ತು;


ಅವನು ತೆಗೆದುಬಿಡಲ್ಪಟ್ಟ ಕೂಡಲೆ ಆ ಅಧರ್ಮಸ್ವರೂಪನು ಕಾಣಬರುವನು; ಅವನನ್ನು ಯೇಸು ಕರ್ತನು ತನ್ನ ಬಾಯ ಉಸುರಿನಿಂದ ಕೊಲ್ಲುವನು, ತನ್ನ ಪ್ರತ್ಯಕ್ಷತೆಯ ಪ್ರಕಾಶದಿಂದ ಸಂಹರಿಸುವನು.


ಆಗ ಆ ದೇವದೂತನು ನನಗೆ ಹೇಳಿದ್ದು - ನೀನೇಕೆ ಆಶ್ಚರ್ಯಪಟ್ಟಿ? ಆ ಸ್ತ್ರೀಯಿಂದಲೂ ಅವಳ ವಾಹನವಾಗಿದ್ದು ಏಳು ತಲೆಗಳೂ ಹತ್ತು ಕೊಂಬುಗಳೂ ಉಳ್ಳ ಮೃಗದಿಂದಲೂ ಸೂಚಿತವಾದ ಗೂಢಾರ್ಥವನ್ನು ನಾನು ನಿನಗೆ ವಿವರಿಸುತ್ತೇನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು