ಪ್ರಕಟನೆ 14:14 - ಕನ್ನಡ ಸತ್ಯವೇದವು J.V. (BSI)14 ನಾನು ನೋಡಲಾಗಿ ಇಗೋ, ಪ್ರಕಾಶಮಾನವಾದ ಒಂದು ಮೇಘವು ನನಗೆ ಕಾಣಿಸಿತು. ಆ ಮೇಘದ ಮೇಲೆ ಮನುಷ್ಯಕುಮಾರನಂತಿದ್ದವನೊಬ್ಬನು ಕೂತಿರುವದನ್ನು ಕಂಡೆನು. ಆತನ ತಲೆಯ ಮೇಲೆ ಚಿನ್ನದ ಕಿರೀಟವೂ ಆತನ ಕೈಯಲ್ಲಿ ಹದವಾದ ಕುಡುಗೋಲೂ ಇದ್ದವು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಆಗ ನಾನು ನೋಡಲಾಗಿ ಇಗೋ, ಒಂದು ಬಿಳಿ ಮೇಘವು ಕಾಣಿಸಿತು. ಆ ಮೇಘದ ಮೇಲೆ ಮನುಷ್ಯಕುಮಾರನಂತಿದ್ದ ಒಬ್ಬಾತನು ಕುಳಿತಿರುವುದನ್ನು ಕಂಡೆನು. ಆತನ ತಲೆಯ ಮೇಲೆ ಚಿನ್ನದ ಕಿರೀಟವೂ, ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)14 ಅನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ನಾನು ನೋಡಿದಾಗ ನನ್ನ ಎದುರಿನಲ್ಲಿ ಮನುಷ್ಯಕುಮಾರನಂತೆ ಕಾಣುತ್ತಿದ್ದವನು ಆ ಬಿಳಿಯ ಮೋಡದ ಮೇಲೆ ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು ಮತ್ತು ಆತನ ಕೈಯಲ್ಲಿ ಹರಿತವಾದ ಕುಡುಗೋಲಿತ್ತು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ನಾನು ನೋಡಲಾಗಿ, ಒಂದು ಬಿಳಿ ಮೇಘವನ್ನೂ ಆ ಮೇಘದ ಮೇಲೆ ಮನುಷ್ಯಪುತ್ರರಂತೆ ಒಬ್ಬರು ಕುಳಿತಿರುವುದನ್ನು ಕಂಡೆನು. ಅವರ ತಲೆಯ ಮೇಲೆ ಚಿನ್ನದ ಕಿರೀಟವೂ ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್14 ಮಾನಾ ಮಾಕಾ ಎಕ್ ಫಾಂಡ್ರೆ ಮೊಡ್ ದಿಸ್ಲೆ ಅನಿ ತ್ಯಾ ಮೊಡಾ ವರ್ತಿ ಬಸಲ್ಲೊ ಮಾನ್ಸಾಚ್ಯಾ ಸರ್ಕೊ ದಿಸುಲಾಗಲ್ಲೊ, ತ್ಯೆಚ್ಯಾ ಟಕ್ಲ್ಯಾರ್ ಎಕ್ ಸೊನ್ಯಾಚೆ ಮುಕುಟ್ ಹೊತ್ತೆ, ಅನಿ ತ್ಯೆಚ್ಯಾ ಹಾತಿತ್ ಎಕ್ ಧಾರ್‍ಲೊ ಇಳೊ ಹೊತ್ತೊ. ಅಧ್ಯಾಯವನ್ನು ನೋಡಿ |