Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪ್ರಕಟನೆ 13:13 - ಕನ್ನಡ ಸತ್ಯವೇದವು J.V. (BSI)

13 ಇದು ಮಹತ್ತಾದ ಸೂಚಕಕಾರ್ಯಗಳನ್ನು ನಡಿಸುತ್ತದೆ; ಜನರ ಮುಂದೆ ಬೆಂಕಿಯು ಆಕಾಶದಿಂದ ಭೂವಿುಗೆ ಇಳಿದುಬರುವಂತೆಯಾದರೂ ಮಾಡುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಇದು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಇಳಿದುಬರುವಂತಹ ಅದ್ಭುತಕಾರ್ಯಗಳನ್ನು ಮಾಡುತ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಎರಡನೆಯ ಮೃಗವು ದೊಡ್ಡ ದೊಡ್ಡ ಪವಾಡಗಳನ್ನೆಸಗಿತು. ಜನರ ಮುಂದೆಯೇ ಬೆಂಕಿ ಆಕಾಶದಿಂದ ಹೊರಟು ಭೂಮಿಗೆ ಬೀಳುವಂತೆ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಈ ಎರಡನೆಯ ಮೃಗವು ಮಹಾ ಅದ್ಭುತಗಳನ್ನು ಮಾಡುತ್ತದೆ. ಅದು ಜನರ ಕಣ್ಣೆದುರಿನಲ್ಲಿಯೇ ಬೆಂಕಿಯನ್ನು ಆಕಾಶದಿಂದ ಭೂಮಿಗೆ ಸುರಿಸುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಎರಡನೆಯ ಮೃಗವೂ ಮಹಾಸೂಚಕಕಾರ್ಯಗಳನ್ನು ನಡೆಸಿತು ಮತ್ತು ಜನರ ಮುಂದೆ ಬೆಂಕಿ ಆಕಾಶದಿಂದ ಭೂಮಿಗೆ ಬೀಳುವಂತೆ ಮಾಡಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

13 ತನ್ನಾ ದೊನ್ವೆಚ್ಯಾ ಜನಾವರಾನ್ ಮೊಟೆ ಅಜಾಪ್ ಕರ್ಲ್ಯಾನ್; ತೆನಿ ಸರ್‍ಗಾ ವೈನಾ ಸಗ್ಳ್ಯಾಂಚ್ಯಾ ಇದ್ರಾಕುಚ್ ಆಗ್ ಜಿಮ್ನಿ ವರ್ತಿ ಉತ್ರುನ್ ಯೆಯ್ ಸರ್ಕೆ ಕರ್ಲ್ಯಾನ್;

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪ್ರಕಟನೆ 13:13
20 ತಿಳಿವುಗಳ ಹೋಲಿಕೆ  

ಸುಳ್ಳುಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಸಹ ಮೋಸಗೊಳಿಸುವದಕ್ಕೋಸ್ಕರ ದೊಡ್ಡ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.


ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ನಮಸ್ಕರಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರ ಜೊತೆಯಲ್ಲಿ ಸೆರೆಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕದಿಂದ ಉರಿಯುವ ಬೆಂಕಿಯ ಕೆರೆಯಲ್ಲಿ ಹಾಕಲ್ಪಟ್ಟರು;


ಇವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳು; ಭೂಲೋಕದಲ್ಲೆಲ್ಲಿಯೂ ಇರುವ ರಾಜರ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧಕ್ಕೆ ಅವರನ್ನು ಕೂಡಿಸುವವು.


ಅವರು ದೇಶದಲ್ಲೆಲ್ಲಾ ಹರಡಿಕೊಂಡು ದೇವಜನರ ದಂಡಿಗೂ ನಮ್ಮ ಪ್ರಿಯ ಪಟ್ಟಣಕ್ಕೂ ಮುತ್ತಿಗೆಹಾಕಿದರು. ಆಗ ಪರಲೋಕದಿಂದ ಬೆಂಕಿ ಇಳಿದು ಬಂದು ಅವರನ್ನು ದಹಿಸಿಬಿಟ್ಟಿತು.


ಕೂಡಲೆ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಮಾಂಸವನ್ನೂ ಕಟ್ಟಿಗೆಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು.


ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಮೋಸಗೊಳಿಸುವದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.


ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವದು;


ಯನ್ನ ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ ಆ ಮನುಷ್ಯರು ಸಹ ಸತ್ಯವನ್ನು ವಿರೋಧಿಸುತ್ತಾರೆ; ಬುದ್ಧಿಗೆಟ್ಟವರೂ ಕ್ರಿಸ್ತ ನಂಬಿಕೆಯಿಂದ ಭ್ರಷ್ಟರೂ ಆಗಿದ್ದಾರೆ.


ತರುವಾಯ ಫರಿಸಾಯರೂ ಸದ್ದುಕಾಯರೂ ಬಂದು ಆತನನ್ನು ಪರೀಕ್ಷಿಸುವದಕ್ಕಾಗಿ - ನೀನು ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿಕೊಡಬೇಕೆಂದು ಕೇಳಿದರು. ಆತನು ಅವರಿಗೆ -


ಮತ್ತು ಯೆಹೋವನ ಬಳಿಯಿಂದ ಬೆಂಕಿ ಹೊರಟು ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ಭಸ್ಮ ಮಾಡಿತು.


ಆ ಹುಣ್ಣುಗಳು ಜೋಯಿಸರಲ್ಲಿಯೂ ಐಗುಪ್ತ್ಯರೆಲ್ಲರಲ್ಲಿಯೂ ಇದ್ದದರಿಂದ ಆ ಜೋಯಿಸರು ಹುಣ್ಣುಗಳ ದೆಸೆಯಿಂದ ಮೋಶೆಯ ಮುಂದೆ ನಿಲ್ಲಲಾರದೆ ಹೋದರು.


ಜೋಯಿಸರು ತಮ್ಮ ಗುಪ್ತ ವಿದ್ಯೆಗಳಿಂದ ಹಾಗೆಯೇ ಮಾಡಿ ಐಗುಪ್ತದೇಶದ ಮೇಲೆ ಕಪ್ಪೆಗಳನ್ನು ಬರಮಾಡಿದರು.


ಆದರೆ ಐಗುಪ್ತದೇಶದ ಜೋಯಿಸರು ತಮ್ಮ ಗುಪ್ತವಿದ್ಯೆಗಳಿಂದ ಅದೇ ರೀತಿಯಾಗಿ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಯೆಹೋವನು ಹೇಳಿದ್ದಂತೆಯೇ ಅವನು ಮೋಶೆ ಆರೋನರ ಮಾತನ್ನು ಕೇಳದೆ ಹೋದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು