Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 3:6 - ಕನ್ನಡ ಸತ್ಯವೇದವು J.V. (BSI)

6 ರಕ್ತಬೋಳ, ಧೂಪ, ವರ್ತಕರ ಸಕಲಸುಗಂಧ ದ್ರವ್ಯಗಳನ್ನು ಧೂಪಿಸಿದ ಧೂಮಸ್ತಂಭಗಳಂತೆ ಅರಣ್ಯದಿಂದ ಬರುವ ಈ ಮೆರವಣಿಗೆ ಯಾರದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ವರ್ತಕರು ಮಾರುವ ಸಕಲ ಸುಗಂಧತೈಲಗಳಿಂದ, ರಸಗಂಧ, ಸಾಂಬ್ರಾಣಿಧೂಪ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿಯಲ್ಲಿ ಹೊರಹೊಮ್ಮುತ್ತಿರುವ, ಅರಣ್ಯಮಾರ್ಗವಾಗಿ ಬರುತ್ತಿರುವ ಈ ಮೆರವಣಿಗೆ ಯಾರದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ವರ್ತಕರು ಮಾರುವ ಸಕಲ ಸುಗಂಧ ತೈಲಗಳಿಂದ ರಸಗಂಧ ಸಾಂಬ್ರಾಣಿ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿ ಹೊರಹೊಮ್ಮುತ್ತಿರುವ ಅರಣ್ಯದ ಮಾರ್ಗವಾಗಿ ಬರುತ್ತಿರುವ ಆ ಮೆರವಣಿಗೆ ಯಾರದು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಮಹಾ ಜನಸಮೂಹದೊಡನೆ ಅಡವಿಯಿಂದ ಬರುತ್ತಿರುವ ಈ ಸ್ತ್ರೀ ಯಾರು? ಗೋಲರಸ, ಧೂಪ, ವರ್ತಕರ ಸಕಲ ಸುಗಂಧ ದ್ರವ್ಯಗಳನ್ನು ಸುಡುವಾಗ ಮೇಲೇರುವ ಹೊಗೆಯಂತೆ ಧೂಳು ಮೇಲೇರುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ರಕ್ತಬೋಳ, ಸಾಂಬ್ರಾಣಿಗಳಿಂದಲೂ ವರ್ತಕರು ಮಾರುವ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮಸ್ತಂಭಗಳಂತೆ ಅಡವಿಯಿಂದ ಬರುವ ಈ ಮೆರವಣೆಗೆ ಯಾರದು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 3:6
26 ತಿಳಿವುಗಳ ಹೋಲಿಕೆ  

ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು? ಆ ಸೇಬುಮರದ ಕೆಳಗೆ ನಿನ್ನನ್ನು ಎಬ್ಬಿಸಿದೆನಲ್ಲಾ! ಇಗೋ, ಅಲ್ಲಿ ನಿನ್ನ ತಾಯಿಯು ನಿನ್ನನ್ನು ಹೆತ್ತಳು, ಅಲ್ಲೇ ಪ್ರಸವವೇದನೆ ಪಟ್ಟು, ನಿನ್ನನ್ನು ಪಡೆದಳು!


ನಾನು ರಕ್ತಬೋಳದ ಬೆಟ್ಟಕ್ಕೂ ಧೂಪದ ಗುಡ್ಡಕ್ಕೂ ತೆರಳಿ ಹಗಲು ತಂಪಾಗಿ ನೆರಳು ಇಳಿಯುವ ತನಕ ಚರಿಸುತ್ತಿರುವೆನು.


ಎನ್ನಿನಿಯನು ನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ;


ಆ ಸ್ತ್ರೀಯು ಅರಣ್ಯದಲ್ಲಿದ್ದ ತನ್ನ ಸ್ಥಳಕ್ಕೆ ಹಾರಿಹೋಗುವದಕ್ಕಾಗಿ ಆಕೆಗೆ ದೊಡ್ಡ ಗರುಡಪಕ್ಷಿಯ ಎರಡು ರೆಕ್ಕೆಗಳು ಕೊಡಲ್ಪಟ್ಟವು. ಅಲ್ಲಿ ಒಂದು ಕಾಲ, ಎರಡು ಕಾಲ, ಅರ್ಧಕಾಲ ಸರ್ಪನ ಮುಖಕ್ಕೆ ಮರೆಯಾಗಿ ಪೋಷಣೆ ಹೊಂದುತ್ತಾಳೆ.


ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು; ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರುವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದನು.


ಇದು ಯೆಹೋವನ ನುಡಿ - ಹತಶೇಷವಾದ ಜನಕ್ಕೆ ಅರಣ್ಯದಲ್ಲಿ ದಯೆದೊರೆಯುವದು; ಇಸ್ರಾಯೇಲು ವಿಶ್ರಾಂತಿಯನ್ನು ಹುಡುಕುವದಕ್ಕೆ ಹೋಗುವಾಗ ಯೆಹೋವನು ದೂರದಿಂದ ಬಂದು ಅದಕ್ಕೆ ದರ್ಶನಕೊಟ್ಟು ಹೀಗನ್ನುವನು -


ನೀನು ಹೋಗಿ ಯೆರೂಸಲೇವಿುನ ಕಿವಿಗೆ ಮುಟ್ಟುವಂತೆ ಈ ಮಾತುಗಳನ್ನು ಸಾರು - ಯೆಹೋವನು ಹೀಗನ್ನುತ್ತಾನೆ, ನೀನು ಯೌವನದಲ್ಲಿ [ನನ್ನ ಮೇಲೆ] ಇಟ್ಟಿದ್ದ ಪ್ರೀತಿಯನ್ನೂ ವಿವಾಹ ಕಾಲದ ನಿನ್ನ ಪ್ರೇಮವನ್ನೂ ಬೀಜಬಿತ್ತಿಯೇ ಇಲ್ಲದ ಅರಣ್ಯದಲ್ಲಿ ನೀನು ನನ್ನನ್ನು ಹಿಂಬಾಲಿಸಿದ ನಿನ್ನ ಪಾತಿವ್ರತ್ಯವನ್ನೂ ನಿನ್ನ ಹಿತಕ್ಕಾಗಿ ಜ್ಞಾಪಕದಲ್ಲಿಟ್ಟಿದ್ದೇನೆ.


ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ, ನಿಮಗೆ ಕಾಣುವದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ ಅಡವಿಯಲ್ಲಿ ನದಿಗಳನ್ನು ಹರಿಸುವೆನು.


ಅವನ ಕೆನ್ನೆಗಳು ಕರ್ಣಕುಂಡಲ ಗಿಡಗಳ ಪಾತಿಗಳಂತೆಯೂ ಸುಗಂಧಸಸ್ಯಗಳು ಬೆಳೆಯುವ ದಿಬ್ಬಗಳಂತೆಯೂ ಇವೆ; ಅಚ್ಚರಕ್ತಬೋಳವನ್ನು ಸುರಿಸುವ ಅವನ ತುಟಿಗಳು ಕೆಂದಾವರೆಗಳೇ.


ನನ್ನ ನಲ್ಲನಿಗೆ ಕದತೆಗೆಯಬೇಕೆಂದು ಏಳಲು ಅಗುಳಿಯ ಹಿಡಿಗಳಲ್ಲಿ ನನ್ನ ಕೈಗಳಿಂದ ರಕ್ತಬೋಳವು, ನನ್ನ ಬೆರಳುಗಳಿಂದ ಅಚ್ಚರಕ್ತಬೋಳವು ಸುರಿಯಿತು.


ನಿನ್ನ ತೈಲವು ಸುಗಂಧ; ನಿನ್ನ ಹೆಸರು ಸುರಿದ ತೈಲದ ಸುಗಂಧದಂತೆ ವ್ಯಾಪಿಸಿರುವದರಿಂದ ತರುಣಿಯರು ನಿನ್ನನ್ನು ಪ್ರೀತಿಸುವರು.


ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ.


ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ತುನಾಲ್ಕು ಮಂದಿ ಹಿರಿಯರೂ ಯಜ್ಞದ ಕುರಿಯಾದಾತನ ಪಾದಕ್ಕೆ ಬಿದ್ದರು. ಹಿರಿಯರ ಕೈಗಳಲ್ಲಿ ವೀಣೆಗಳೂ, ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು.


ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ.


ಮತ್ತು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು.


ಅದಲ್ಲದೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ - ನೀನು ಹಾಲು ಮಡ್ಡಿ, ಗುಗ್ಗುಲ, ಗಂಧದ ಚೆಕ್ಕೆ ಎಂಬ ಪರಿಮಳದ್ರವ್ಯಗಳನ್ನೂ ಸ್ವಚ್ಫವಾದ ಧೂಪವನ್ನೂ ಸಮಭಾಗವಾಗಿ ತೆಗೆದುಕೊಂಡು


ಲವಂಗಚೆಕ್ಕೆ, ರಕ್ತಬೋಳ, ಧೂಪ, ಸುಗಂಧತೈಲ, ಸಾಂಬ್ರಾಣಿ, ದ್ರಾಕ್ಷಾರಸ, ಎಣ್ಣೆ, ನಯವಾದ ಹಿಟ್ಟು, ಗೋದಿ, ದನ, ಕುರಿ, ಕುದುರೆ, ರಥ, ಗುಲಾಮ, ಮಾನುಷಪ್ರಾಣ ಇವೇ ಮೊದಲಾದ ನಮ್ಮ ಸರಕುಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ಹೇಳಿಕೊಳ್ಳುತ್ತಾ ದುಃಖಿಸುವರು.


ನೋಡು, ಅದು ಸೊಲೊಮೋನನ ಪಾಲಕಿ; ಇಸ್ರಾಯೇಲಿನ ಶೂರರಲ್ಲಿ ಅರುವತ್ತು ಮಂದಿ ಅದರ ಸುತ್ತಲಿದ್ದಾರೆ.


ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ, ಇವುಗಳ ಚೂರ್ಣವನ್ನು ಉದರಿಸಿದ್ದೇನೆ.


ಕಾಡಿನಲ್ಲಿ ದ್ರಾಕ್ಷೆಯ ಹಣ್ಣು ಸಿಕ್ಕಿದಂತೆ ಇಸ್ರಾಯೇಲು ನನಗೆ ಸಿಕ್ಕಿತು; ಹೊಸದಾಗಿ ಫಲಕ್ಕೆ ಬಂದ ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪಿತೃಗಳನ್ನು ಕಂಡೆನು; ಆದರೆ ಅವರು ಬಾಳ್‍ಪೆಗೋರಿಗೆ ಬಂದು ಬಾಳ್‍ದೇವತೆಯ ಭಕ್ತರಾಗಿ ದೀಕ್ಷೆಗೊಂಡು ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು