Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 3:4 - ಕನ್ನಡ ಸತ್ಯವೇದವು J.V. (BSI)

4 ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ, ನನ್ನನ್ನು ಹೆತ್ತವಳ ಕೋಣೆಗೆ, ಸೇರುವ ತನಕ ಬಿಡದೆ ಹಿಡಿದುಕೊಂಡೇ ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವರನ್ನು ಬಿಟ್ಟ ತುಸು ಹೊತ್ತಿನೊಳಗೆ ನನ್ನ ಪ್ರಾಣಪ್ರಿಯನನ್ನು ಕಂಡುಕೊಂಡು ತಾಯಿಯ ಮನೆಗೆ, ನನ್ನನ್ನು ಹೆತ್ತವಳ ಕೋಣೆಗೆ ಸೇರುವ ತನಕ, ಬಿಡದೆ ಹಿಡಿದುಕೊಂಡೇ ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ. ತಾಯ ಮನೆಗೆ, ನನ್ನ ಹೆತ್ತವಳ ಮನೆಗೆ ಕರೆದೊಯ್ದೆ ಕೈಯ ಬಿಡದೆಯೆ ಕರೆದುಕೊಂಡು ಹೋದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅಲ್ಲಿಂದ ಸ್ವಲ್ಪದೂರ ಹೋದಾಗ, ನನ್ನ ಪ್ರಿಯನನ್ನು ಕಂಡು ಅಪ್ಪಿಕೊಂಡೆ. ನನ್ನ ತಾಯಿಯ ಮನೆಗೆ, ಅಂದರೆ ನನ್ನನ್ನು ಹೆತ್ತವಳ ಕೋಣೆಗೆ ಸೇರುವತನಕ ಅವನನ್ನು ಬಿಡದೆ ಹಿಡಿದುಕೊಂಡೇ ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನಾನು ಅವರನ್ನು ಬಿಟ್ಟು ಸ್ವಲ್ಪ ದೂರ ಹೋದ ಮೇಲೆ, ನನ್ನ ಪ್ರಾಣ ಪ್ರಿಯನನ್ನು ಕಂಡುಕೊಂಡೆನು. ನಾನು ಅವನ ಕೈಯನ್ನು ಹಿಡಿದುಕೊಂಡು ನನ್ನ ತಾಯಿಯ ಮನೆಗೆ, ಹೌದು, ನನ್ನ ಹೆತ್ತವಳ ಕೋಣೆಗೆ ಅವನನ್ನು ಬಿಡದೆ ಕರೆದುಕೊಂಡು ಹೋದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 3:4
21 ತಿಳಿವುಗಳ ಹೋಲಿಕೆ  

ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು, ಅಲ್ಲಿ ನೀನು ನನಗೆ ಉಪದೇಶಮಾಡಬಹುದಾಗಿತ್ತು; ದ್ರಾಕ್ಷೆಯ ವಿುಶ್ರಪಾನಕವನ್ನು, ನನ್ನ ದಾಳಿಂಬರದ ಸವಿರಸವನ್ನು, ನಿನಗೆ ಕುಡಿಸುತ್ತಿದ್ದೆನು.


ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು.


ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು.


ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು;


ಯೆಹೋವನು ತನ್ನನ್ನು ನಿರೀಕ್ಷಿಸುವವರಿಗೂ ಹುಡುಕುವವರಿಗೂ ಮಹೋಪಕಾರಿಯಾಗಿದ್ದಾನೆ.


ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ.


ನಾನು ರಹಸ್ಯದಲ್ಲಿ ನುಡಿದವನಲ್ಲ, ತಮೋಲೋಕದೊಳಗಿಂದ ಮಾತಾಡಿದವನಲ್ಲ, ಶೂನ್ಯವನ್ನೋ ಎಂಬಂತೆ ನನ್ನನ್ನು ಹುಡುಕಿರಿ ಎಂದು ಯಾಕೋಬ ವಂಶದವರಿಗೆ ನಾನು ಅಪ್ಪಣೆಕೊಡಲಿಲ್ಲ. ಯೆಹೋವನೆಂಬ ನಾನು ಸತ್ಯಾನುಸಾರ ನುಡಿಯುವವನು, ನೆಟ್ಟನೆಯ ಮಾತುಗಳನ್ನೇ ಆಡುತ್ತೇನೆ.


ನನ್ನ ತವಕವು ನನ್ನ ದೇಶದ ಪ್ರಧಾನರ ರಥಗಳ ನಡುವೆ ಅಕಸ್ಮಾತ್ತಾಗಿ ನನ್ನನ್ನು ಸಿಕ್ಕಿಸಿತು.


ಆದರೆ ಮೇಲಣ ಯೆರೂಸಲೇಮ್ ಎಂಬವಳು ಸ್ವತಂತ್ರಳು, ಇವಳೇ ನಮಗೆ ತಾಯಿ.


ಆಗ ಯೇಸು ಅವರ ಎದುರಿಗೆ ಬಂದು - ನಿಮಗೆ ಶುಭವಾಗಲಿ ಅಂದನು. ಅವರು ಹತ್ತರಕ್ಕೆ ಬಂದು ಆತನ ಪಾದಗಳನ್ನು ಹಿಡಿದು ಆತನಿಗೆ ನಮಸ್ಕಾರಮಾಡಿದರು.


ನಿನ್ನ ಶಿರಸ್ಸು ಕರ್ಮೆಲ್ ಬೆಟ್ಟದಂತೆ ಗಂಭೀರ; ನಿನ್ನ ತಲೆಯ ಕೂದಲು ಧೂಮ್ರವರ್ಣವು; ರಾಜನು ಅದರ ತೆಕ್ಕೆತೆಕ್ಕೆಗಳಲ್ಲಿ ಕಟ್ಟುಬಿದ್ದಿದ್ದಾನೆ.


ಆ ಪುರುಷನು - ನನ್ನನ್ನು ಬಿಡು, ಬೆಳಗಾಗುತ್ತದೆ ಅನ್ನಲು, ಯಾಕೋಬನು - ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವದಿಲ್ಲ ಅಂದನು.


ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಅನ್ನವಿಲ್ಲದಿರುವದೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ?


ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.


ನನ್ನ ಪ್ರಾಣಪ್ರಿಯನೇ, [ಮಂದೆಯನ್ನು] ಎಲ್ಲಿ ಮೇಯಿಸುತ್ತೀ, ಮಧ್ಯಾಹ್ನಕ್ಕೆ ಎಲ್ಲಿ ಮಲಗಿಸುತ್ತೀ? ನನಗೆ ತಿಳಿಸು. ನಾನು ಏಕೆ ನಿನ್ನ ಒಡನಾಡಿಗಳ ಮಂದೆಗಳ ಹತ್ತಿರ ಮುಸುಕಿನವಳಂತಿರಬೇಕು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು