Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಪರಮಗೀತೆ 1:2 - ಕನ್ನಡ ಸತ್ಯವೇದವು J.V. (BSI)

2 ಬಾಯ ಮುದ್ದುಗಳಿಂದ ನನ್ನನ್ನು ಮುದ್ದಿಸಲಿ; ನಿನ್ನ ಲಾಲನೆಯು ದ್ರಾಕ್ಷಾರಸಕ್ಕಿಂತಲೂ ಮೇಲು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಚುಂಬಿಸೆನ್ನನು ನಿನ್ನ ತುಟಿಗಳಿಂದ ನಿನ್ನ ಪ್ರೀತಿ ಅತಿ ಮಧುರ ಮಧುಪಾನಕ್ಕಿಂತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನಿನ್ನ ಬಾಯಿಂದ ನನ್ನನ್ನು ಮುದ್ದಾಡು, ನಿನ್ನ ಪ್ರೀತಿ ದ್ರಾಕ್ಷಾರಸಕ್ಕಿಂತಲೂ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಬಾಯಿಯ ಮುದ್ದುಗಳಿಂದ ನನಗೆ ಮುದ್ದಿಡಲಿ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಪರಮಗೀತೆ 1:2
20 ತಿಳಿವುಗಳ ಹೋಲಿಕೆ  

ಪ್ರಿಯಳೇ, ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ! ನಿನ್ನ ಪ್ರೇಮವು ದ್ರಾಕ್ಷಾರಸಕ್ಕಿಂತ ಎಷ್ಟೋ ಮೇಲು! ನಿನ್ನ ತೈಲದ ಪರಿಮಳವು ಸಕಲಸುಗಂಧ ದ್ರವ್ಯಗಳಿಗಿಂತ ಎಷ್ಟೋ ಮನೋಹರ!


ನನ್ನನ್ನು ತುಸು ಎಳೆ; ನಿನ್ನ ಹಿಂದೆ ಓಡಿ ಬರುವೆವು; ರಾಜನು ನನ್ನನ್ನು ಅಂತಃಪುರಕ್ಕೆ ಬರಮಾಡಿದ್ದಾನೆ; ನಿನ್ನಲ್ಲಿ ಹರ್ಷಿಸಿ ಉಲ್ಲಾಸಿಸುವೆವು, ದ್ರಾಕ್ಷಾರಸಕ್ಕಿಂತಲೂ ನಿನ್ನ ಲಾಲನೆಯನ್ನು ಹೆಚ್ಚಾಗಿ ಕೊಂಡಾಡುವೆವು; ನಿನ್ನನ್ನು ಯಥಾರ್ಥವಾಗಿ ಪ್ರೀತಿಸುವರು.


ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು; ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ.


ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು.


ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಶಿಷ್ಯರಿಗೆ ಕೊಟ್ಟು - ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು.


ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು.


ತೋಟಗಳಿಗೆ ಹೊತ್ತಾರೆ ಹೊರಟು ದ್ರಾಕ್ಷೆಯು ಚಿಗುರಿದೆಯೋ, ಅದರ ಹೂವು ಅರಳಿದೆಯೋ, ದಾಳಿಂಬರಗಳು ಪುಷ್ಟಿಸಿವೆಯೋ ನೋಡೋಣ! ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಸಲ್ಲಿಸುವೆನು.


ನಿನ್ನ ಮುದ್ದುಗಳು ಉತ್ತಮದ್ರಾಕ್ಷಾರಸದ ಹಾಗಿರಲಿ; ನಿದ್ರಿಸುವವರ ತುಟಿಗಳಲ್ಲಿ ಸರಾಗವಾಗಿ ಹರಿಯುವ ಈ ರಸವು ನನ್ನ ನಲ್ಲೆಯಾದ ನಿನ್ನಲ್ಲಿಯೂ ಮೆಲ್ಲನೆ ಇಳಿದು ಬರುವದು.


ಅವನು ನನ್ನನ್ನು ಔತಣಶಾಲೆಗೆ ಬರಮಾಡಿಕೊಂಡನು, ನನ್ನ ಮೇಲೆ ಅವನು ಎತ್ತಿದ ಧ್ವಜವು ಪ್ರೀತಿಯೇ.


ಆತನ ಮಗನಿಗೆ ಮುದ್ದಿಡಿರಿ; ಇಲ್ಲವಾದರೆ ಆತನ ಕೋಪವು ಬೇಗನೆ ಪ್ರಜ್ವಲಿಸಲು ನೀವು ದಾರಿಯಲ್ಲೇ ನಾಶವಾದೀರಿ. ಆತನ ಮರೆಹೊಕ್ಕವರೆಲ್ಲರು ಧನ್ಯರು.


ನಾವು ತೂರ್‍ಪಟ್ಟಣದಿಂದ ಹೊರಟು ಪ್ತೊಲೆಮಾಯಕ್ಕೆ ಸೇರಿ ಸಮುದ್ರಪ್ರಯಾಣವನ್ನು ಮುಗಿಸಿದೆವು. ಅಲ್ಲಿದ್ದ ಸಹೋದರರನ್ನು ವಂದಿಸಿ ಅವರ ಬಳಿಯಲ್ಲಿ ಒಂದು ದಿವಸ ಇದ್ದು


ಪ್ರೇಮವೇ, ಸಕಲ ಸಂತೋಷಗಳಿಗಿಂತ ನೀನು ಎಷ್ಟೋ ಮನೋಹರ, ಎಷ್ಟೋ ರಮ್ಯ!


ಅವನ ನುಡಿ ಬಹು ಇಂಪು; ಹೌದು, ಅವನು ಸರ್ವಾಂಗದಲ್ಲಿಯೂ ಮನೋಹರನು; ಯೆರೂಸಲೇವಿುನ ಸ್ತ್ರೀಯರುಗಳಿರಾ, ಇವನೇ ಎನ್ನಿನಿಯನು; ಇವನೇ ನನ್ನ ಪ್ರಿಯನು.


ನನ್ನ ಮಗನಾದ ಮಾರ್ಕನು ಸಹ ವಂದನೆ ಹೇಳುತ್ತಾನೆ. ಪ್ರೀತಿಯಿಂದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ.


ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತಾಡಿದರು.


ಅವನು ರಾಹೇಲಳಿಗೆ ಮುದ್ದಿಟ್ಟು ಸ್ವರವೆತ್ತಿ ಕಣ್ಣೀರುಸುರಿಸಿ ಆಕೆಗೆ -


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು