Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 6:22 - ಕನ್ನಡ ಸತ್ಯವೇದವು J.V. (BSI)

22 ಆತನು ಯೆಹೋವನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು - ಅಯ್ಯೋ ಕರ್ತನೇ, ಯೆಹೋವನೇ, ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ಎಂದು ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆತನು ಯೆಹೋವನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಕರ್ತನೇ, ಯೆಹೋವನೇ, ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಆತನು ಸರ್ವೇಶ್ವರನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಸ್ವಾಮಿ, ಸರ್ವೇಶ್ವರಾ, ಸರ್ವೇಶ್ವರನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ತಾನು ಈವರೆಗೆ ಮಾತಾಡುತ್ತಿದ್ದದ್ದು ಯೆಹೋವನ ದೂತನೊಡನೆ ಎಂಬುದು ಗಿದ್ಯೋನನಿಗೆ ಆಗ ಅರಿವಾಯಿತು. ಗಿದ್ಯೋನನು, “ಸರ್ವಶಕ್ತನಾದ ಯೆಹೋವನೇ, ನಿನ್ನ ದೂತನನ್ನು ಮುಖಾಮುಖಿಯಾಗಿ ಕಂಡೆನು” ಎಂದು ಕೂಗಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಅವನು ಯೆಹೋವ ದೇವರ ದೂತನೆಂದು ಗಿದ್ಯೋನನು ತಿಳಿದಾಗ ಗಿದ್ಯೋನನು, “ಸಾರ್ವಭೌಮ ಯೆಹೋವ ದೇವರೇ, ನಾನು ಯೆಹೋವ ದೇವರ ದೂತನನ್ನು ಮುಖಾಮುಖಿಯಾಗಿ ಕಂಡೆನು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 6:22
12 ತಿಳಿವುಗಳ ಹೋಲಿಕೆ  

ಯಾಕೋಬನು - ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನಲ್ಲಾ; ಆದರೂ ನನ್ನ ಪ್ರಾಣ ಉಳಿದದೆ ಅಂದುಕೊಂಡು ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.


ಅದರೆ ಆತನು ಅವನಿಗೆ - ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು ಎಂದು ಹೇಳಿದನು.


ಬೆಂಕಿಯ ಜ್ವಾಲೆಯೊಳಗಿಂದ ಮಾತಾಡುವ ಚೈತನ್ಯಸ್ವರೂಪನಾದ ದೇವರ ಸ್ವರವನ್ನು ನಾವು ಕೇಳಿದಂತೆ ಎಲ್ಲಾ ಮನುಷ್ಯರೊಳಗೆ ಬೇರೆ ಯಾರು ಕೇಳಿ ಬದುಕಿದರು? ಹೀಗಿರುವದರಿಂದ ನಾವು ಯಾಕೆ ಸಾಯಬೇಕು?


ಯೆಶಾಯನು ಆತನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯದಲ್ಲಿ ಮಾತಾಡುತ್ತಿರುವಾಗ ಆ ಮಾತನ್ನು ನುಡಿದನು.


ದೇವರನ್ನು ಯಾರೂ ಎಂದೂ ಕಂಡಿಲ್ಲ; ಯಾವನು ಏಕಪುತ್ರನೂ ಸ್ವತಃ ದೇವರೂ ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿದನು.


ನಮ್ಮ ದೇವರಾದ ಯೆಹೋವನು ತನ್ನ ಘನವನ್ನೂ ಮಹಿಮೆಯನ್ನೂ ನಮಗೆ ತೋರಿಸಿ ಅಗ್ನಿಜ್ವಾಲೆಯೊಳಗಿಂದ ತನ್ನ ಸ್ವರವನ್ನು ನಮಗೆ ಕೇಳಿಸಿದನಲ್ಲಾ. ಮನುಷ್ಯನು ತನ್ನ ಸಂಗಡ ದೇವರು ಮಾತಾಡಿದರೂ ಸಾಯದೆ ಬದುಕಿದ್ದುಂಟೆಂಬದು ಈ ಹೊತ್ತು ನಮಗೆ ತಿಳಿಯಬಂತು.


ನೀವು ಆ ಬೆಂಕಿಯ ಜ್ವಾಲೆಯ ದೆಸೆಯಿಂದ ಭಯಪಟ್ಟು ಬೆಟ್ಟವನ್ನು ಹತ್ತದೆಹೋಗಲಾಗಿ ನಾನು ಯೆಹೋವನಿಗೂ ನಿಮಗೂ ನಡುವೆ ನಿಂತು ಆತನು ಆಡಿದ ಮಾತುಗಳನ್ನು ನಿಮಗೆ ತಿಳಿಸಿದೆನು. ಆತನು ಹೇಳಿದ್ದೇನಂದರೆ -


ಅವಳು - ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡಿದ್ದೇನಲ್ಲಾ ಅಂದುಕೊಂಡು ತನ್ನ ಸಂಗಡ ಮಾತಾಡಿದ್ದ ಯೆಹೋವನಿಗೆ [ಎಲ್ಲವನ್ನೂ] ನೋಡುವ ದೇವರೆಂದು ಹೆಸರಿಟ್ಟಳು.


ಆದರೆ ಯೆಹೋವನು ಅವನಿಗೆ - ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವದಿಲ್ಲ ಅಂದನು.


ಅವನು ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು. ಅವನು ತೊಡೆಯ ನಿವಿುತ್ತ ಕುಂಟಿಕೊಂಡು ನಡೆದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು