Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 3:20 - ಕನ್ನಡ ಸತ್ಯವೇದವು J.V. (BSI)

20 ಅರಸನು ತನ್ನ ತಂಪಾದ ಮೇಲುಪ್ಪರಿಗೆಯಲ್ಲಿ ಒಬ್ಬನೇ ಕೂತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಹೋಗಿ - ನಿನಗೆ ಹೇಳಬೇಕಾದದ್ದೊಂದು ದೇವೋಕ್ತಿಯಿದೆ ಅನ್ನಲು ಅವನು ತನ್ನ ಸಿಂಹಾಸನದಿಂದೆದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಅರಸನು ತನ್ನ ತಂಪಾದ ಮೇಲಂತಸ್ತಿನ ಕೋಣೆಯಲ್ಲಿ ಒಬ್ಬನೇ ಕುಳಿತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಹೋಗಿ, “ನಿನಗೆ ಹೇಳಬೇಕಾದದ್ದೊಂದು ದೈವೋಕ್ತಿಯಿದೆ” ಅನ್ನಲು ಅವನು ತನ್ನ ಸಿಂಹಾಸನದಿಂದ ಎದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅರಸನು ತನ್ನ ತಂಪಾದ ಮೇಲುಪ್ಪರಿಗೆಯಲ್ಲಿ ಒಬ್ಬನೇ ಕುಳಿತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಬಂದನು; “ನಿಮಗೆ ತಿಳಿಸಬೇಕಾದ ಒಂದು ದೈವೋಕ್ತಿ ಇದೆ,” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದು ನಿಂತನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಏಹೂದನು ಅರಸನಾದ ಎಗ್ಲೋನನ ಹತ್ತಿರಕ್ಕೆ ಹೋದನು. ಎಗ್ಲೋನನು ತಂಪಾದ ಅರಮನೆಯ ಮಹಡಿಯ ಕೋಣೆಯಲ್ಲಿ ಒಬ್ಬಂಟಿಗನಾಗಿ ಕುಳಿತಿದ್ದನು. ಆಗ ಏಹೂದನು, “ದೇವರಿಂದ ನಾನು ನಿನಗೆ ಒಂದು ಸಂದೇಶವನ್ನು ತಂದಿದ್ದೇನೆ” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತನು. ಅವನು ಏಹೂದನಿಗೆ ತುಂಬ ಹತ್ತಿರದಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ, ಏಹೂದನು ಅವನ ಬಳಿಗೆ ಪ್ರವೇಶಿಸಿ, “ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗಿದೆ,” ಎಂದನು. ಅವನು ತನ್ನ ಸಿಂಹಾಸನದಿಂದ ಎದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 3:20
11 ತಿಳಿವುಗಳ ಹೋಲಿಕೆ  

ನಾನು ಚಳಿಗಾಲದ ಅರಮನೆಯನ್ನೂ ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು; ದಂತಮಂದಿರಗಳು ಹಾಳಾಗುವವು, ಮಹಾಸೌಧಗಳು ಕೊನೆಗಾಣುವವು; ಇದು ಯೆಹೋವನ ನುಡಿ.


ಜನಾಂಗಗಳ ಅರಸನೇ, ಯಾರು ನಿನಗೆ ಅಂಜದೆ ಇದ್ದಾರು? ಇದು ನಿನಗೆ ತಕ್ಕದ್ದು; ಜನಾಂಗಗಳ ಜ್ಞಾನಿಗಳಲ್ಲಿಯೂ ರಾಜಪರಂಪರೆಯಲ್ಲಿಯೂ ನಿನ್ನ ಸಮಾನನು ಯಾವನೂ ಇಲ್ಲವಷ್ಟೆ.


ಯೆಹೋವನು ದನಿಗೈದು ಪಟ್ಟಣದ ಕಡೆಗೆ ಕೂಗುತ್ತಾನೆ; (ನಿನ್ನ ನಾಮದಲ್ಲಿ ಭಯಭಕ್ತಿಯಿಡುವದು ಸುಜ್ಞಾನವೇ;) [ಬೀಸುವ] ದಂಡಕ್ಕೆ ಕಿವಿಗೊಡಿರಿ, ಅದನ್ನು ನೇವಿುಸಿದವನು ಯಾವನೆಂದು ತಿಳಿದುಕೊಳ್ಳಿರಿ.


ದೇವದೂತರುಗಳಿರಾ, ಪರಮಪ್ರಭಾವವು ಯೆಹೋವನದೇ ಯೆಹೋವನದೇ ಎಂದು ಹೇಳಿ ಕೊಂಡಾಡಿರಿ.


ನೀನು ದಾವೀದನ ಹತ್ತಿರ ಹೋಗಿ ಅವನಿಗೆ - ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ; ಅವುಗಳಲ್ಲಿ ಯಾವದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂದು ಯೆಹೋವನು ಅನ್ನುತ್ತಾನೆ ಎಂಬದಾಗಿ ಹೇಳು ಎಂದು ಆಜ್ಞಾಪಿಸಿದನು.


ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು - ಅರಸೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವದೆ ಅಂದನು. ಆಗ ಅರಸನು ನಿಶ್ಶಬ್ದ ಅನ್ನಲು ಅವನ ಸೇವಕರೆಲ್ಲರೂ ಹೊರಗೆ ಹೋದರು.


ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು.


ಸರ್ವಸಮೂಹಕ್ಕಿಂತಲೂ ಎತ್ತರವಾದ ಸ್ಥಳದಲ್ಲಿ ನಿಂತಿದ್ದ ಎಜ್ರನು ಜನರ ಸಮಕ್ಷದಲ್ಲಿ ಗ್ರಂಥವನ್ನು ತೆರೆದ ಕೂಡಲೆ ಎಲ್ಲರೂ ಎದ್ದು ನಿಂತರು.


ಆಗ ಪುಷ್ಯಮಾಸ; ಅರಸನು ಚಳಿಗಾಲದ ಮನೆಯಲ್ಲಿ ಕೂತಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯು ಉರಿಯುತ್ತಿತ್ತು.


ಬಾಲಾಕನು - ಯೆಹೋವನು ಏನು ಹೇಳಿದ್ದಾನೆ ಎಂದು ಅವನನ್ನು ಕೇಳಲು ಬಿಳಾಮನು ಪದ್ಯರೂಪವಾಗಿ ನುಡಿದದ್ದೇನಂದರೆ - ಬಾಲಾಕನೇ, ಕಿವಿಗೊಟ್ಟು ಕೇಳು; ಚಿಪ್ಪೋರನ ಮಗನೇ, ನನ್ನ ಮಾತನ್ನು ಲಾಲಿಸು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು