Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 19:18 - ಕನ್ನಡ ಸತ್ಯವೇದವು J.V. (BSI)

18 ಅವನು ಇವನಿಗೆ - ನಾವು ಯೆಹೂದದ ಬೇತ್ಲೆಹೇವಿುನಿಂದ ಎಫ್ರಾಯೀಮ್ ಪರ್ವತಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಅಲ್ಲಿಂದ ಯೆಹೂದದ ಬೇತ್ಲೆಹೇವಿುಗೆ ಹೋಗಿದ್ದೆನು; ಈಗ ತಿರಿಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಕರಕೊಂಡು ಹೋಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆ ಲೇವಿಯನು ಅವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮಿನ ಪರ್ವತಪ್ರದೇಶದ ಒಂದು ದೂರಸ್ಥಳದಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು; ಈಗ ತಿರುಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಅವನು ಆ ಮುದುಕನಿಗೆ, “ನಾವು ಯೆಹೂದದ ಬೆತ್ಲೆಹೇಮಿನಿಂದ ಎಫ್ರಯಿಮ್ ಪರ್ವತಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಅಲ್ಲಿಂದ ಯೆಹೂದದ ಬೆತ್ಲೆಹೇಮಿಗೆ ಹೋಗಿದ್ದೆ; ಈಗ ಮರಳಿ ಸರ್ವೇಶ್ವರನ ಮಂದಿರಕ್ಕೆ ಹೋಗುತ್ತಿದ್ದೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಅದಕ್ಕೆ ಲೇವಿಯು, “ನಾವು ಯೆಹೂದದ ಬೆತ್ಲೆಹೇಮಿನಿಂದ ಹೊರಟಿದ್ದೇವೆ. ಎಫ್ರಾಯೀಮ್ ಬೆಟ್ಟಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ಮನೆಗೆ ಹೋಗುತ್ತಿದ್ದೇವೆ. ಆದರೆ ಈ ರಾತ್ರಿ ಇಲ್ಲಿ ತಂಗಲು ಯಾರೂ ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸಲಿಲ್ಲ. ನಾನು ಯೆಹೂದದ ಬೆತ್ಲೆಹೇಮಿಗೆ ಹೋಗಿದ್ದೆ. ಈಗ ನಾನು ನಮ್ಮ ಮನೆಗೆ ಹೋಗುತ್ತಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅವನು ಇವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮ್ ಬೆಟ್ಟದ ಕಡೆಯಲ್ಲಿ ಹಾದು ಹೋಗುತ್ತೇವೆ. ನಾನು ಅಲ್ಲಿಯವನು. ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು. ಈಗ ಯೆಹೋವ ದೇವರ ಮನೆಗೆ ಹೋಗುತ್ತೇನೆ. ಆದರೆ ನಮ್ಮನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 19:18
12 ತಿಳಿವುಗಳ ಹೋಲಿಕೆ  

ಶೀಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ದಾನ್ಯರಲ್ಲಿ ಮೀಕನು ಮಾಡಿಸಿದ ವಿಗ್ರಹವಿತ್ತು.


ಯಾವನು ನನ್ನಲ್ಲಿ ನೆಲೆಗೊಂಡಿರುವದಿಲ್ಲವೋ ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟುಹೋಗುತ್ತವೆ.


ಪಾಪಿಷ್ಠರ ಪ್ರಾಣದ ಸಂಗಡ ನನ್ನ ಪ್ರಾಣವನ್ನೂ ತೆಗೆಯಬೇಡ; ಕೊಲೆಪಾತಕರ ಜೀವದೊಂದಿಗೆ ನನ್ನ ಜೀವವನ್ನೂ ತೆಗೆಯಬೇಡ.


ಪ್ರತಿವರ್ಷವೂ ಯೆಹೋವನ ಮಂದಿರಕ್ಕೆ ಹೋದಾಗೆಲ್ಲಾ ಎಲ್ಕಾನನು ಹಾಗೆಯೇ ಮಾಡುತ್ತಿದ್ದದರಿಂದಲೂ ಪೆನಿನ್ನಳು ಆಕೆಯನ್ನು ರೇಗಿಸುತ್ತಿದ್ದದರಿಂದಲೂ ಹನ್ನಳು ಒಂದಾನೊಂದು ಸಾರಿ ಉಣ್ಣಲೊಲ್ಲದೆ ಅಳುತ್ತಾ ಇದ್ದಳು.


ಅವನು ಪ್ರತಿವರುಷವೂ ಸೈನ್ಯಾಧೀಶ್ವರನಾದ ಯೆಹೋವನಿಗೆ ಯಜ್ಞವನ್ನು ಸಮರ್ಪಿಸಿ ಆತನನ್ನು ಆರಾಧಿಸುವದಕ್ಕೋಸ್ಕರ ತನ್ನ ಊರಿನಿಂದ ಶೀಲೋವಿಗೆ ಹೋಗುತ್ತಿದ್ದನು. ಅಲ್ಲಿ ಏಲಿಯ ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ಯೆಹೋವನ ಯಾಜಕರಾಗಿದ್ದರು.


ಇಸ್ರಾಯೇಲ್ಯರು ಬೇತೇಲಿಗೆ ಹೋಗಿ - ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ದೇವರಾದ ಯೆಹೋವನನ್ನು ಕೇಳಲು ಆತನು - ಮೊದಲು ಯೆಹೂದಕುಲದವರು ಹೋಗಲಿ ಎಂದು ಹೇಳಿದನು.


ಅವರು ನಾಲ್ಕನೆಯ ದಿನ ಬೆಳಿಗ್ಗೆ ಎದ್ದು ಹೋಗುವದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ - ಮೊದಲು ಸ್ವಲ್ಪ ಊಟಮಾಡಿ ಬಲಹೊಂದು; ಆಮೇಲೆ ಹೋಗಬಹುದು ಎಂದು ಹೇಳಲು


ದೇಶವೆಲ್ಲಾ ವಶವಾದ ಮೇಲೆ ಇಸ್ರಾಯೇಲ್ ಸಮೂಹದ ಎಲ್ಲಾ ಜನರೂ ಶೀಲೋವಿನಲ್ಲಿ ಕೂಡಿ ಬಂದು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.


ಯೆಹೂದದ ಬೇತ್ಲೆಹೇವಿುನವನೂ ಯೆಹೂದ ಕುಲದವನೂ ಆಗಿದ್ದ ಒಬ್ಬ ಯೌವನಸ್ಥನಾದ ಲೇವಿಯು


ಈ ಮುದುಕನು ಬೀದಿಯಲ್ಲಿ ಕೂತಿದ್ದ ಆ ದಾರಿಗನನ್ನು ಕಂಡು - ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ ಎಂದು ಕೇಳಲು


ನಮ್ಮ ಕತ್ತೆಗಳಿಗೆ ಹುಲ್ಲೂ ಕಾಳೂ ಇವೆ; ನನಗೂ ನಿನ್ನ ಸೇವಕಿಗೂ ನಿನ್ನ ಸೇವಕನ ಸಂಗಡ ಬಂದಿರುವ ಈ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿಯೂ ದ್ರಾಕ್ಷಾರಸವೂ ಇರುತ್ತವೆ; ನಮಗೆ ಹೆಚ್ಚು ಏನೂ ಬೇಕಾಗಿರುವದಿಲ್ಲ ಎಂದು ಹೇಳಿದನು.


ನೆರೆಯವನು ಬೇಸರಗೊಂಡು ಹಗೆ ಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು