Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 19:17 - ಕನ್ನಡ ಸತ್ಯವೇದವು J.V. (BSI)

17 ಈ ಮುದುಕನು ಬೀದಿಯಲ್ಲಿ ಕೂತಿದ್ದ ಆ ದಾರಿಗನನ್ನು ಕಂಡು - ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಈ ಮುದುಕನು ಬೀದಿಯಲ್ಲಿ ಕುಳಿತುಕೊಂಡಿದ್ದ ಆ ಪ್ರಯಾಣಿಕನನ್ನು ಕಂಡು, “ನೀನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಈ ಮುದುಕ, ಬೀದಿಯಲ್ಲಿ ಕುಳಿತಿದ್ದ ಆ ದಾರಿಗನನ್ನು ಕಂಡು, “ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಆ ವೃದ್ಧನು ಬೀದಿಯ ಮುಖ್ಯಸ್ಥಳದಲ್ಲಿ ಪ್ರಯಾಣಿಕನನ್ನು (ಲೇವಿಯನ್ನು) ನೋಡಿದನು. ಆ ವೃದ್ಧನು, “ನೀನು ಎಲ್ಲಿಗೆ ಹೋಗಬೇಕು? ಎಲ್ಲಿಂದ ಬಂದಿರುವೆ?” ಎಂದು ಅವನನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆ ಮುದುಕನು ತನ್ನ ಕಣ್ಣೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿತಿದ್ದ ಯಾತ್ರಿಕನನ್ನು ಕಂಡು, “ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 19:17
7 ತಿಳಿವುಗಳ ಹೋಲಿಕೆ  

ಮೊದಲನೆಯ ಹಿಂಡಿನ ಮೇಲಿದ್ದವನಿಗೆ - ನನ್ನ ಅಣ್ಣನಾದ ಏಸಾವನು ನಿನ್ನೆದುರಿಗೆ ಬಂದು- ನೀನು ಯಾರ ಸೇವಕನು? ಎಲ್ಲಿಗೆ ಹೋಗುತ್ತಿ? ನಿನ್ನ ಮುಂದೆ ಇರುವ ಇವೆಲ್ಲಾ ಯಾರವು ಎಂದು ಕೇಳಿದರೆ


ಸಾರಯಳ ದಾಸಿಯಾದ ಹಾಗರಳೇ, ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ ಎಂದು ಕೇಳಲು ಅವಳು - ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಾ ಇದ್ದೇನೆ ಅಂದಳು.


ಅಷ್ಟರಲ್ಲಿ ಎಫ್ರಾಯೀಮ್ ಪರ್ವತ ಪ್ರದೇಶಕ್ಕೆ ಸೇರಿದವನೂ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸಿಸುವವನೂ ಆಗಿದ್ದ ಒಬ್ಬಾನೊಬ್ಬ ಮುದುಕನು ಸಾಯಂಕಾಲವಾದದರಿಂದ ಕೆಲಸವನ್ನು ಬಿಟ್ಟು ಹೊಲದಿಂದ ಮನೆಗೆ ಬರುತ್ತಿದ್ದನು.


ಅವನು ಇವನಿಗೆ - ನಾವು ಯೆಹೂದದ ಬೇತ್ಲೆಹೇವಿುನಿಂದ ಎಫ್ರಾಯೀಮ್ ಪರ್ವತಪ್ರದೇಶದ ಒಂದು ಮೂಲೆಯಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಅಲ್ಲಿಂದ ಯೆಹೂದದ ಬೇತ್ಲೆಹೇವಿುಗೆ ಹೋಗಿದ್ದೆನು; ಈಗ ತಿರಿಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಕರಕೊಂಡು ಹೋಗಲಿಲ್ಲ.


ಒಂದು ದಿವಸ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಆಗ ಐಶ್ವರ್ಯವಂತನು ತನ್ನ ಕುರಿದನಗಳಿಂದ ಏನೂ ತೆಗೆದುಕೊಳ್ಳಮನಸ್ಸಿಲ್ಲದೆ ಆ ಬಡವನ ಕುರಿಮರಿಯನ್ನು ಹಿಡಿದು ಅತಿಥಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು ಎಂಬದೇ.


ರಾಜಮಾರ್ಗಗಳು ಹಾಳಾಗಿವೆ, ದಾರಿಗರು ಇಲ್ಲವೇ ಇಲ್ಲ; [ಶತ್ರುವು] ಒಪ್ಪಂದವನ್ನು ಮೀರಿದ್ದಾನೆ, ಊರಿನವರನ್ನು ತಿರಸ್ಕರಿಸಿದ್ದಾನೆ, ಮನುಷ್ಯರನ್ನು ಗಣನೆಗೆ ತಾರನು.


ಇಸ್ರಾಯೇಲ್ಯರ ನಿರೀಕ್ಷೆಯೇ, ಇಕ್ಕಟ್ಟಿನಲ್ಲಿ ಅವರಿಗೆ ರಕ್ಷಕನೇ, ಏಕೆ ದೇಶದಲ್ಲಿ ಪರದೇಶಿಯಂತೆಯೂ ಇಳಿದುಕೊಳ್ಳುವದಕ್ಕೆ ಗುಡಾರಹಾಕಿಕೊಳ್ಳುವ ಪ್ರಯಾಣಿಕನ ಹಾಗೆಯೂ ಇದ್ದೀ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು