ನ್ಯಾಯಸ್ಥಾಪಕರು 19:16 - ಕನ್ನಡ ಸತ್ಯವೇದವು J.V. (BSI)16 ಅಷ್ಟರಲ್ಲಿ ಎಫ್ರಾಯೀಮ್ ಪರ್ವತ ಪ್ರದೇಶಕ್ಕೆ ಸೇರಿದವನೂ ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸಿಸುವವನೂ ಆಗಿದ್ದ ಒಬ್ಬಾನೊಬ್ಬ ಮುದುಕನು ಸಾಯಂಕಾಲವಾದದರಿಂದ ಕೆಲಸವನ್ನು ಬಿಟ್ಟು ಹೊಲದಿಂದ ಮನೆಗೆ ಬರುತ್ತಿದ್ದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ಅಷ್ಟರಲ್ಲಿ ಎಫ್ರಾಯೀಮಿನ ಪರ್ವತಪ್ರದೇಶಕ್ಕೆ ಸೇರಿದ ಒಬ್ಬ ಮುದುಕನು, ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸವಾಗಿದ್ದ ಆ ಮುದುಕನು ಸಾಯಂಕಾಲವಾದ್ದರಿಂದ ಕೆಲಸವನ್ನು ಮುಗಿಸಿ ಹೊಲದಿಂದ ಮನೆಗೆ ಬರುತ್ತಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಅಷ್ಟರಲ್ಲಿ ಎಫ್ರಯಿಮ್ ಪರ್ವತಪ್ರದೇಶಕ್ಕೆ ಸೇರಿದವನು ಹಾಗು ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸಿಸುವವನು ಆಗಿದ್ದ ಯಾರೋ ಒಬ್ಬ ಮುದುಕ ಸಾಯಂಕಾಲವಾದ್ದರಿಂದ ಕೆಲಸವನ್ನು ಬಿಟ್ಟು ಹೊಲದಿಂದ ಮನೆಗೆ ಬರುತ್ತಿದ್ದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಆ ಸಾಯಂಕಾಲ ಒಬ್ಬ ವೃದ್ಧನು ಹೊಲದಿಂದ ಮನೆಗೆ ಬರುತ್ತಿದ್ದನು. ಅವನು ಎಫ್ರಾಯೀಮ್ ಬೆಟ್ಟಪ್ರದೇಶದವನಾಗಿದ್ದು, ಈಗ ಗಿಬೆಯ ನಗರದಲ್ಲಿ ವಾಸಮಾಡುತ್ತಿದ್ದನು. (ಗಿಬೆಯದ ನಿವಾಸಿಗಳು ಬೆನ್ಯಾಮೀನ್ಯರಾಗಿದ್ದರು.) ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಆಗ ಒಬ್ಬ ಮುದುಕನು ಹೊಲದಲ್ಲಿ ತನ್ನ ಕೆಲಸಮಾಡಿ ಬರುತ್ತಿದ್ದನು. ಆ ಮನುಷ್ಯನು ಎಫ್ರಾಯೀಮ್ ಬೆಟ್ಟದ ಪ್ರದೇಶಕ್ಕೆ ಸೇರಿದವನೂ ಬೆನ್ಯಾಮೀನರ ಊರಾದ ಗಿಬೆಯದಲ್ಲಿ ಪ್ರವಾಸಿಯಾಗಿಯೂ ಇದ್ದನು. ಅಧ್ಯಾಯವನ್ನು ನೋಡಿ |