Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 18:23 - ಕನ್ನಡ ಸತ್ಯವೇದವು J.V. (BSI)

23 ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ - ನಿನಗೇನಾಯಿತು? ಗುಂಪನ್ನು ಕೂಡಿಸಿಕೊಂಡು ಬಂದದ್ದೇಕೆ ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ, “ನಿನಗೇನಾಯಿತು? ಗುಂಪನ್ನು ಕೂಡಿಸಿಕೊಂಡು ಬಂದದ್ದೇಕೆ” ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ, “ನಿನಗೇನಾಯಿತು? ಗುಂಪುಕೂಡಿಸಿಕೊಂಡು ಬಂದದ್ದೇಕೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಅವರು ದಾನ್ಯರನ್ನು ಬೆನ್ನಟ್ಟಿಕೊಂಡು ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂತಿರುಗಿ ನೋಡಿ ಮೀಕನಿಗೆ, “ನಿನಗೇನಾಗಿದೆ? ಏಕೆ ಕೂಗಿಕೊಳ್ಳುತ್ತಿರುವೆ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ದಾನರು ತಮ್ಮ ಮುಖ ತಿರುಗಿಸಿ ಮೀಕನಿಗೆ, “ನೀನು ಗುಂಪು ಕೂಡಿಕೊಂಡು ಬರಲು ನಿನಗೆ ಏನಾಯಿತು?” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 18:23
8 ತಿಳಿವುಗಳ ಹೋಲಿಕೆ  

ದಿವ್ಯದರ್ಶನದ ತಗ್ಗಿನ ವಿಷಯವಾದ ದೈವೋಕ್ತಿ. ನಿನಗೆ ಏನಾಯಿತು? ನಿನ್ನ ಜನರೆಲ್ಲರೂ ಮಾಳಿಗೆಗಳನ್ನು ಹತ್ತಿದ್ದೇಕೆ?


ಸಮುದ್ರವೇ, ನಿನಗೇನಾಯಿತು? ಯಾಕೆ ಓಡಿಹೋಗುತ್ತೀ? ಯೊರ್ದನೇ, ಯಾಕೆ ಹಿಂದಿರುಗುತ್ತೀ?


ನಿನಗಿರುವ ದುಃಖ ಯಾವದು ಎಂದು ಕೇಳಿದನು. ಆಗ ಆಕೆಯು - ಈ ಸ್ತ್ರೀಯು ನನಗೆ - ನಿನ್ನ ಮಗನನ್ನು ತೆಗೆದುಕೊಂಡು ಬಾ; ನಾವು ಈ ಹೊತ್ತು ಅವನನ್ನು ತಿಂದುಬಿಡೋಣ; ನಾಳೆ ನನ್ನ ಮಗನನ್ನು ತಿನ್ನೋಣ ಎಂದು ಹೇಳಿದ್ದರಿಂದ


ಅರಸನು ನಿನಗೇನಾಯಿತು ಎಂದು ಆಕೆಯನ್ನು ಕೇಳಲು ಆಕೆಯು - ನಾನು ವಿಧವೆ; ಗಂಡನು ಸತ್ತುಹೋಗಿದ್ದಾನೆ.


ಅಷ್ಟರಲ್ಲಿ ಸೌಲನು ಹೊಲದಿಂದ ದನಗಳನ್ನು ಹೊಡೆದುಕೊಂಡು ಬಂದನು. ಅವನು - ಜನರು ಗೋಳಾಡುವದಕ್ಕೇನು ಕಾರಣವೆಂದು ಕೇಳಲು ಅವನಿಗೆ ಯಾಬೇಷಿನವರ ವರ್ತಮಾನವನ್ನು ತಿಳಿಸಿದರು.


ಆ ಹುಡುಗನ ಮೊರೆಯು ದೇವರಿಗೆ ಕೇಳಿಸಿತು; ದೇವದೂತನು ಆಕಾಶದಿಂದ ಹಾಗರಳನ್ನು ಕರೆದು - ಹಾಗರಳೇ, ನಿನಗೇನಾಯಿತು? ಅಂಜಬೇಡ; ಆ ಹುಡುಗನು ಬಿದ್ದಿರುವ ಸ್ಥಳದಿಂದಲೇ ಅವನ ಶಬ್ದವು ದೇವರಿಗೆ ಕೇಳಿಸಿತು;


ಅವರು ಮೀಕನ ಮನೆಗೆ ದೂರವಾದ ಮೇಲೆ ಮೀಕನೂ ಅವನ ನೆರೆಹೊರೆಯವರೆಲ್ಲರೂ ದಾನ್ಯರನ್ನು ಹಿಂದಟ್ಟಿ


ಅವನು - ನೀವು ಯಾಜಕನನ್ನೂ ನಾನು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವು ನನ್ನನ್ನು ಕೇಳುವದು ಹೇಗೆ ಅಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು