Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನ್ಯಾಯಸ್ಥಾಪಕರು 15:4 - ಕನ್ನಡ ಸತ್ಯವೇದವು J.V. (BSI)

4 ಮುನ್ನೂರು ನರಿಗಳನ್ನು ಹಿಡಿದು ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಮುನ್ನೂರು ನರಿಗಳನ್ನು ಹಿಡಿದು, ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ, ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ, ಪಂಜುಗಳಿಗೆ ಬೆಂಕಿಹೊತ್ತಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಮುನ್ನೂರು ನರಿಗಳನ್ನು ಹಿಡಿದನು. ಒಂದರ ಬಾಲಕ್ಕೆ ಇನ್ನೊಂದು ಬಾಲವನ್ನು ಸೇರಿಸಿ ಕಟ್ಟಿದನು. ಹೀಗೆ ಎರಡೆರಡು ಬಾಲಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ ಪಂಜುಗಳಿಗೆ ಬೆಂಕಿಹೊತ್ತಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಸಂಸೋನನು ಹೊರಗೆ ಹೋಗಿ ಮುನ್ನೂರು ನರಿಗಳನ್ನು ಹಿಡಿದನು. ಅವುಗಳಲ್ಲಿ ಎರಡೆರಡು ನರಿಗಳನ್ನು ಹಿಡಿದು ಒಂದರ ಬಾಲವನ್ನು ಮತ್ತೊಂದರ ಬಾಲಕ್ಕೆ ಕಟ್ಟಿದನು. ನರಿಗಳ ಪ್ರತಿಯೊಂದು ಜೋಡಿಯ ಬಾಲಗಳ ಮಧ್ಯದಲ್ಲಿ ಒಂದು ಪಂಜನ್ನು ಕಟ್ಟಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಮುನ್ನೂರು ನರಿಗಳನ್ನು ಹಿಡಿದು, ಪಂಜುಗಳನ್ನು ತೆಗೆದುಕೊಂಡು ಬಂದು, ಬಾಲಕ್ಕೆ ಬಾಲ ಸೇರಿಸಿ, ಎರಡು ಬಾಲಗಳ ನಡುವೆ ಒಂದು ಪಂಜನ್ನು ಕಟ್ಟಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನ್ಯಾಯಸ್ಥಾಪಕರು 15:4
8 ತಿಳಿವುಗಳ ಹೋಲಿಕೆ  

ಇದರಿಂದ ನಮ್ಮ ಹೃದಯವು ಕುಂದಿದೆ, ಇದರಿಂದ ನಮ್ಮ ಕಣ್ಣು ಮೊಬ್ಬಾಗಿದೆ.


ತೋಟಗಳನ್ನು ಹಾಳುಮಾಡುವ ನರಿಗಳನ್ನು, ನರಿಮರಿಗಳನ್ನು, ಹಿಡಿಯಿರಿ; ನಮ್ಮ ತೋಟಗಳು ಹೂವಾಗಿವೆ.


ಕತ್ತಿಗೆ ಬಲಿಯಾಗುವರು; ನರಿಗಳ ಪಾಲಾಗುವರು.


ಆಗ ಸಂಸೋನನು - ಈ ಸಾರಿ ನಾನು ಫಿಲಿಷ್ಟಿಯರಿಗೆ ಕೇಡುಮಾಡುವದಾದರೆ ತಪ್ಪು ನನ್ನದಲ್ಲ ಎಂದಂದುಕೊಂಡು ಹೋಗಿ


ಪಂಜುಗಳಿಗೆ ಬೆಂಕಿಹೊತ್ತಿಸಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಲ್ಲಿ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು.


ನೆರೆಯವನನ್ನು ಮೋಸಗೊಳಿಸಿ ತಮಾಷೆಗೋಸ್ಕರ ಮಾಡಿದೆನಲ್ಲಾ ಎನ್ನುವವನು


ಅವನಿಗೆ ಈ ಪ್ರಕಾರ ಹೇಳಬೇಕು - ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ! ರೆಚೀನ ಅರಾಮ್ಯರು ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಗೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.


ಆದದರಿಂದ ಅಬ್ಷಾಲೋಮನು ತನ್ನ ಸೇವಕರಿಗೆ - ನೋಡಿರಿ, ಸಮೀಪದಲ್ಲಿಯೇ ಯೋವಾಬನ ಜವೆಗೋದಿಹೊಲವುಂಟಲ್ಲಾ; ಹೋಗಿ ಅದಕ್ಕೆ ಬೆಂಕಿ ಹಚ್ಚಿರಿ ಎಂದು ಆಜ್ಞಾಪಿಸಿದನು; ಅವರು ಹಾಗೆಯೇ ಮಾಡಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು