Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ನೆಹೆಮೀಯ 9:9 - ಕನ್ನಡ ಸತ್ಯವೇದವು J.V. (BSI)

9 ಐಗುಪ್ತದೇಶದಲ್ಲಿ ನಮ್ಮ ಪಿತೃಗಳಿಗಿದ್ದ ಕಷ್ಟವನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರು ಮೊರೆಯಿಟ್ಟಾಗ ನೀನು ಲಾಲಿಸಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಐಗುಪ್ತ ದೇಶದಲ್ಲಿ ನಮ್ಮ ಪೂರ್ವಿಕರಿಗಿದ್ದ ಕಷ್ಟವನ್ನು ನೋಡಿ, ಕೆಂಪುಸಮುದ್ರದ ಬಳಿಯಲ್ಲಿ ಅವರು ಮೊರೆಯಿಟ್ಟಾಗ ನೀನು ಆಲಿಸಿದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ನೋಡಿದಿರಿ ಈಜಿಪ್ಟಿನಲಿ ನಮ್ಮ ಪಿತೃಗಳು ಪಟ್ಟ ಕಷ್ಟವನು ಆಲಿಸಿದಿರಿ ಕೆಂಪುಸಮುದ್ರದ ಬಳಿ ಅವರಿಟ್ಟ ಮೊರೆಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಮ್ಮ ಪೂರ್ವಿಕರು ಈಜಿಪ್ಟಿನಲ್ಲಿ ಸಂಕಟ ಅನುಭವಿಸುವುದನ್ನು ನೀನು ನೋಡಿದೆ. ಕೆಂಪು ಸಮುದ್ರದ ಬಳಿ ಸಹಾಯಕ್ಕಾಗಿ ಅವರು ಮೊರೆಯಿಟ್ಟಾಗ ನೀನು ಅವರಿಗೆ ಕಿವಿಗೊಟ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ಇದಲ್ಲದೆ ಈಜಿಪ್ಟಿನಲ್ಲಿ ನಮ್ಮ ಪಿತೃಗಳ ದೀನಸ್ಥಿತಿಯನ್ನು ನೋಡಿದಿರಿ. ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ನೆಹೆಮೀಯ 9:9
8 ತಿಳಿವುಗಳ ಹೋಲಿಕೆ  

ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ, ಎಂದು ಹೇಳಿದನು.


ನೀನು ಹೋಗಿ ಇಸ್ರಾಯೇಲ್ಯರ ಹಿರಿಯರನ್ನು ಕೂಡಿಸಿ ಅವರಿಗೆ - ನಿಮ್ಮ ಪಿತೃಗಳ ದೇವರು ಅಂದರೆ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಯೆಹೋವನು ನನಗೆ ದರ್ಶನಕೊಟ್ಟು ನಿಮ್ಮ ವಿಷಯದಲ್ಲಿ - ನಾನು ನಿಮ್ಮಲ್ಲಿ ಲಕ್ಷ್ಯವಿಟ್ಟು ಐಗುಪ್ತದೇಶದಲ್ಲಿ ನಿಮಗೆ ಸಂಭವಿಸಿದ್ದನ್ನೆಲ್ಲಾ ತಿಳುಕೊಂಡಿದ್ದೇನೆ;


ಇಸ್ರಾಯೇಲ್ಯರನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.


ಯೆಹೋವನು ಐಗುಪ್ತ್ಯರಲ್ಲಿ ಮಾಡಿದ ಈ ಪರಾಕ್ರಮಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಯೆಹೋವನಿಗೆ ಭಯಪಟ್ಟು ಆತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.


ಸಕಲದೇಶ ಶಿರೋಮಣಿಯಾದ ದೇಶವನ್ನು ನಿಮಗಾಗಿ ನೋಡಿದ್ದೇನೆ; ನಾನು ನಿಮ್ಮನ್ನು ಐಗುಪ್ತದೇಶದೊಳಗಿಂದ ಉದ್ಧರಿಸಿ ಹಾಲೂ ಜೇನೂ ಹರಿಯುವ ಆ ದೇಶಕ್ಕೆ ಸೇರಿಸುವೆನು ಎಂದು ಪ್ರಮಾಣಮಾಡಿ


ಮತ್ತು ನಿನ್ನ ಸಂತಾನದವರು ದಾಸರಾಗಿ ಸೇವಿಸುವ ಅನ್ಯಜನರಿಗೆ ನಾನೇ ನ್ಯಾಯತೀರಿಸುವೆನು. ಆಮೇಲೆ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು ಎಂಬದೇ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು